ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಅಧಿಕಾರಿಗಳಿಗೆ ಇತ್ತಾ ಮಾಹಿತಿ ? ಈ ದಂಧೆ ಮಟ್ಟಹಾಕಲು ಮುಂದಾಗಿಲ್ವಾ ಆರೋಗ್ಯ ಇಲಾಖೆ..?

Nov 28, 2023, 12:37 PM IST

ಮಂಡ್ಯ ಸುತ್ತಮುತ್ತ ಹೆಣ್ಣು ಭ್ರೂಣ ಹತ್ಯೆ 7-8 ವರ್ಷಗಳಿಂದ ನಡೆಯುತ್ತಿದೆ‌ ಎನ್ನಲಾಗ್ತಿದೆ. ಈವರೆಗೆ ಸುಮಾರು 10 ಸಾವಿರ ಭ್ರೂಣ ಹತ್ಯೆ(Female foeticide) ನಡೆದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶ್ರೀರಂಗಪಟ್ಟಣ ಪುರಸಭೆ ಸದಸ್ಯ ನಂದೀಶ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. 2020-21ರಲ್ಲೇ ನನಗೆ ಮಾಹಿತಿ ಇತ್ತು. ‌ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಮಾಹಿತಿ ಕೊಟ್ಟಿದ್ದೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ರು. ಮಂಡ್ಯದ(Mandya) ನರ್ಸಿಂಗ್ ಹೋಮ್‌ಗಳಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದರು. ಇದರಲ್ಲಿ ಏಜೆಂಟ್ ಗಳ ದೊಡ್ಡ ತಂಡವೇ ಇದೆ. ಏಳೆಂಟು ವರ್ಷದಿಂದ ಈ ತಂಡ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ನರ್ಸ್ ಗಳು(Nurses) ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ಸಮಗ್ರ ತನಿಖೆ ಮಾಡಿಸಬೇಕು. ಪೋಷಕರನ್ನೂ ಗುರುತಿಸಿ ಶಿಕ್ಷಿಸುವ ಕೆಲಸ ಆಗಬೇಕು ಎಂದು ನಂದೀಶ್ ಹೇಳಿದ್ದಾರೆ.ಭ್ರೂಣ ಲಿಂಗ ಪತ್ತೆ ಬಗ್ಗೆ ಮಂಡ್ಯ, ಕೆ.ಆರ್.ಪೇಟೆಯಲ್ಲಿ ದಾಳಿಯಾಗಿತ್ತು. ನಾನು ತಾ.ಆಸ್ಪತ್ರೆ ಅಧಿಕಾರಿ, ನನಗೆ ಆ ಜಾಲದ ಬಗ್ಗೆ ಅಷ್ಟು ಮಾಹಿತಿ ಇಲ್ಲ ಎಂದು ಡಾ. ಮಾರುತಿ ಹೇಳಿದ್ದಾರೆ. ಹೆಣ್ಣು ಮಗು ಇರುವವರು ಗರ್ಭಿಣಿಯಾದ್ರೂ ಮಾಹಿತಿ ಕೊಡಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಆಕಾಂಕ್ಷಿಗಳಲ್ಲಿ ತಳಮಳ: ಕಮಲ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡ್ತಾರಾ..?