Hassan: ಮಾಲೀಕನಿಗಾಗಿ ಹಾವಿನೊಂದಿಗೆ ಕಾದಾಡಿದ ಶ್ವಾನ, ಸೆಣಸಾಟದಲ್ಲಿ ಎರಡೂ ಸಾವು

Jan 29, 2022, 4:54 PM IST

ಹಾಸನ (ಜ. 29): ಸಕಲೇಶಪುರ ತಾಲೂಕಿನ ಶುಕ್ರವಾರಸಂತೆ ಬಳಿ  ಹಾವು, ನಾಯಿ ಸುಮಾರು 25 ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಟ ನಡೆಸಿ ಎರಡೂ ಸಾವನ್ನಪ್ಪಿವೆ. ಮಂಜುನಾಥ್ ಎಂಬುವವರು ತಮ್ಮ ಶ್ವಾನದೊಂದಿಗೆ  ಜಮೀನಿಗೆ ಹೋದಾಗ ದಾರಿಯಲ್ಲಿ ನಾಗರಹಾವೊಂದು ಎದುರಾಗುತ್ತದೆ. ಆಗ ಶ್ವಾನ ಅದರ ಜೊತೆ ಸೆಣಸಾಡಿರುವ ದೃಶ್ಯ ಇಲ್ಲಿದೆ.