ಕಳೆದ ತಿಂಗಳು ಬಿಡುಗಡೆಯಾದ ಕೈಗೆಟುಕುವ ದರದ ಸ್ಕೋಡಾ ಕೈಲಾಖ್ ಕಾರಿನ ಎಲ್ಲಾ ವೇರಿಯೆಂಟ್ ಕಾರಿನ ಬೆಲೆ ಪ್ರಕಟಗೊಂಡಿದೆ. ಜೊತೆಗೆ ಬುಕಿಂಗ್ ಕೂಡ ಆರಂಭಗೊಂಡಿದೆ. ಸ್ಕೋಡಾ ಕೈಲಾಖ್ ಎಷ್ಟು ವೇರಿಯೆಂಟ್‌ನಲ್ಲಿ ಲಭ್ಯವಿದೆ? ಬೆಲೆ, ಬುಕಿಂಗ್, ಡೆಲಿವರಿ ಸೇರಿದಂತೆ ಸಂಪೂರ್ಣ ಗೈಡ್ ಇಲ್ಲಿದೆ.
ಬೆಂಗಳೂರು(ಡಿ.02) ಸ್ಕೋಡಾ ಇಂಡಿಯಾ ಭಾರತದಲ್ಲಿ ಕೈಗೆಟುಕುವ ದರದ ಎಸ್‌ಯುವಿ ಸ್ಕೋಡಾ ಕೈಲಾಖ್ ಬಿಡುಗೆಡೆ ಮಾಡಿದೆ. ಕಳೆದ ತಿಂಗಳು ಸ್ಕೋಡಾ ಕೈಲಾಖ್ ಕಾರು ಬಿಡುಗಡೆಯಾಗಿತ್ತು. ಆರಂಭಿಕ 7.8 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿರುವ ನೂತನ ಕಾರಿನ ಎಲ್ಲಾ ವೇರಿಯೆಂಟ್ ಕಾರುಗಳ ಬೆಲೆ ಪ್ರಕಟಗೊಂಡಿದೆ. ಜೊತೆಗೆ ಇಂದಿನಿಂದಲೇ ಬುಕಿಂಗ್ ಕೂಡ ಆರಂಭಗೊಂಡಿದೆ. ಭಾರತದಲ್ಲಿ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತದ್ದಂತೆ ಇದೀಗ ಸ್ಕೋಡಾ ಕೈಗೆಟುಕುವ ದರದಲ್ಲಿ ಕಾರು ಬಿಡುಗಡೆ ಮಾಡಿ ಹೊಸ ಸಂಚಲನ ಸೃಷ್ಟಿಸಿದೆ.
ಸ್ಕೋಡಾ ಕೈಲಾಖ್ ಬುಕಿಂಗ್ ಆರಂಭಗೊಂಡಿದೆ. ಮೊದಲು ಬುಕ್ ಮಾಡುವ 33,333 ಗ್ರಾಹಕರಿಗೆ ಕೆಲ ವಿಶೇಷ ಸವಲತ್ತುಗಳು, ಆಫರ್ ಸಿಗಲಿದೆ. ಈ ಗ್ರಾಹಕರು 3 ವರ್ಷದ ಕಾಂಪ್ಲಿಮೆಂಟರಿ ಸ್ಟಾಂಡರ್ಡ್ ಮೆಂಟೈನೆನ್ಸ್ ಪ್ಯಾಕೇಜ್ ಸೌಲಭ್ಯ ಕೂಡ ಪಡೆಯಲಿದ್ದಾರೆ. ಇದರ ಜೊತೆಗೆ ಇತರ ಕೆಲ ಆಫರ್ ಕೂಡ ಪಡೆಯಲಿದ್ದಾರೆ ಎಂದು ಸ್ಕೋಡಾ ಇಂಡಿಯಾ ಹೇಳಿದೆ.
ಕೇವಲ 7.8 ಲಕ್ಷ ರೂಗೆ ಸ್ಕೋಡಾ ಕೈಲಾಖ್ SUV ಕಾರು ಬಿಡುಗಡೆ, ಬುಕಿಂಗ್ ಆರಂಭ!
ಸ್ಕೋಡಾ ಕೈಲಾಖ್ ಕಾರು ವೇರಿಯೆಂಟ್ ಹಾಗೂ ಬೆಲೆ(ಎಕ್ಸ್ ಶೋ ರೂಂ)
ಕೈಲಾಕ್ ಕ್ಲಾಸಿಕ್ ಬೆಲೆ: 7.89 ಲಕ್ಷ ರೂಪಾಯಿ( ಮ್ಯಾನ್ಯುಯೆಲ್)
ಕೈಲಾಖ್ ಸಿಗ್ನೇಚರ್ ಬೆಲೆ: 9.59 ಲಕ್ಷ ರೂಪಾಯಿ ( ಮ್ಯಾನ್ಯುಯೆಲ್)
ಕೈಲಾಕ್ ಸಿಗ್ನೇಚರ್ ಪ್ಲಸ್ ಬೆಲೆ: 11.40 ಲಕ್ಷ ರೂಪಾಯಿ ( ಮ್ಯಾನ್ಯುಯೆಲ್)
ಕೈಲಾಕ್ ಪ್ರೆಸ್ಟೀಜ್ ಬೆಲೆ:13.35 ಲಕ್ಷ ರೂಪಾಯಿ ( ಮ್ಯಾನ್ಯುಯೆಲ್)
ಕೈಲಾಕ್ ಆಟೋಮ್ಯಾಟಿಕ್ ಕಾರು ವೇರಿಯೆಂಟ್ ಹಾಗೂ ಬೆಲೆ(ಎಕ್ಸ್ ಶೋ ರೂಂ)
ಕೈಲಾಖ್ ಸಿಗ್ನೇಚರ್ ಬೆಲೆ: 10.59 ಲಕ್ಷ ರೂಪಾಯಿ
ಕೈಲಾಕ್ ಸಿಗ್ನೇಚರ್ ಪ್ಲಸ್ ಬೆಲೆ: 12.40 ಲಕ್ಷ ರೂಪಾಯಿ
ಕೈಲಾಕ್ ಪ್ರೆಸ್ಟೀಜ್ ಬೆಲೆ: 14.40 ಲಕ್ಷ ರೂಪಾಯಿ
ಕೈಲಾಖ್ ಕಾರು 7 ಬಣ್ಣದಲ್ಲಿ ಲಭ್ಯವಿದೆ. ಸ್ಟಾಂಡರ್ಡ್ ವಾರಂಟಿಯಲ್ಲಿ ಸ್ಕೋಡಾ ಇಂಡಿಯಾ 3 ವರ್ಷ ಅಥವಾ 1,00,000 ಕಿಲೋಮೀಟರ್ ವಾರೆಂಟಿ ನೀಡುತ್ತಿದೆ. ಬುಕ್ ಮಾಡುವ ಗ್ರಾಹಕರಿಗೆ ಕಾರು ಜನವರಿ 27,2025ರಿಂದ ಡೆಲಿವರಿಯಾಗಲಿದೆ ಎಂದು ಕಂಪನಿ ಹೇಳಿದೆ. ಬುಕಿಂಗ್ ಆರಂಭಿಸಿದ ಬೆನ್ನಲ್ಲೇ ಭಾರಿ ಬೇಡಿಕೆ ವ್ಯಕ್ತವಾಗಿದೆ ಎಂದು ಸ್ಕೋಡಾ ಇಂಡಿಯಾ ಹೇಳಿದೆ. ಕಡಿಮೆ ಬೆಲೆಯ ಎಸ್‌ಯುವಿ ಕಾರು ಖರೀದಿಸಲು ಜನರು ಆಸಕ್ತಿ ತೋರಿದ್ದಾರೆ ಎಂದು ಸ್ಕೋಡಾ ಇಂಡಿಯಾ ಸಂತಸ ಹಂಚಿಕೊಂಡಿದೆ.
ಸ್ಕೋಡಾ ಕೈಲಾಖ್ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರಾಗಿದೆ. ಭಾರತದಲ್ಲಿ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಈಗಗಾಲೇ ಮಾರುತಿ ಸಜುಕಿ ಬ್ರೆಜ್ಜಾ, ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ ಸೇರಿದಂತೆ ಕೆಲ ಕಾರುಗಳು ಈ ವಿಭಾಗದಲ್ಲಿ ಲಭ್ಯವಿದೆ. ಇದೀಗ ಸ್ಕೋಡಾ ಕೈಲಾಖ್ ಈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಸ್ಕೋಡಾ ಕೈಲಾಖ್ ಅಧುನಿಕ ವಿನ್ಯಾಸ ಹಾಗೂ ತಂತ್ರಜ್ಞಾನ ಹೊಂದಿದೆ. 8 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ನೀಡಲಾಗಿದೆ. ಇನ್ನು 10 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ. ಕನೆಕ್ಟೆಡ್ ಕಾರು ಟೆಕ್ನಾಲಜಿ, ವೆಂಟಿಲೇಟೆಡ್ ಫ್ರಂಟ್ ಸೀಟ್, ಸಿಂಗಲ್ ಪೇನ್ ಸನ್‌ರೂಫ್, ಆ್ಯಂಬಿಯೆಂಟ್ ಲೈಟಿಂಗ್, 6 ಸ್ಪೀಕರ್ ಸೇರಿದಂತೆ ಹಲವು ಸೌಲಭ್ಯಗಳು ಈ ಕಾರಿನಲ್ಲಿ ಲಭ್ಯವಿದೆ. ಕಾರಿನ ಒಳಗೆ ಉತ್ತಮ ಸ್ಥಳವಕಾಶ ನೀಡಲಾಗಿದೆ. ಇನ್ನು ಆರಾಮದಾಯಕ ಪ್ರಯಾಣಕ್ಕೆ ಹಾಗೂ ಉತ್ತಮ ಡ್ರೈವ್ ಅನುಭವಕ್ಕೆ ಈ ಕಾರು ಸೂಕ್ತವಾಗಿದೆ. ಜೊತೆಗೆ ಸ್ಕೋಡಾ ಕಾರು ಎಂದಿನಂತೆ ಗರಿಷ್ಠ ಸುರಕ್ಷತೆ ಒದಗಿಸಲಿದೆ. ಈ ಪೈಕಿ ಕೈಲಾಖ್ ಕೂಡ ಹೆಚ್ಚುವರಿ ಸುರಕ್ಷತಾ ಫೀಚರ್ಸ್ ಹೊಂದಿದೆ.