ಮೋಜಿಗಾಗಿ ನದಿಗೆ ಹಾರಿದ ಯುವಕ; ಪೊಲೀಸರಿಂದ ಭರ್ಜರಿ ‘ಉಡುಗೊರೆ’

Aug 7, 2019, 5:01 PM IST

ಬೆಳಗಾವಿ (ಆ.07): ಎಡೆಬಿಡದೆ ಸುರಿಯುತ್ತಿರುವ ಮಳೆ ಒಂದೆಡೆ, ಉಕ್ಕಿ ಹರಿಯುತ್ತಿರುವ ನದಿಗಳು ಇನ್ನೊಂದೆಡೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆ ಖಾತ್ರಿಪಡಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇವುಗಳ ನಡುವೆ, ಬೆಳಗಾವಿಯಲ್ಲಿ ವ್ಯಕ್ತಿಯೊಬ್ಬ ಮೋಜಿಗಾಗಿ ನದಿಗೆ ಹಾರಿದ್ದಾನೆ. ಇದನ್ನು ನೋಡಿದ ಪೊಲೀಸರಿಗೆ ಪಿತ್ತ ನೆತ್ತಿಗೇರಿದೆ. ಮುಂದೇನಾಯ್ತು ನೀವೇ ನೋಡಿ...