ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ: ಬಿಬಿಎಂಪಿ ಕಾಲೇಜಿನಲ್ಲಿ ಅಂಧ ದರ್ಬಾರ್

Dec 9, 2022, 2:14 PM IST

ಬೆಂಗಳೂರು: ಬಿಬಿಎಂಪಿ ಕಾಲೇಜಿನಲ್ಲಿ ಶುಲ್ಕ ವಸೂಲಿ ದಂಧೆ ಶುರುವಾಗಿದೆ. ಆಸ್ಟಿನ್‌ ಟೌನ್‌ ಸರ್ಕಾರಿ ಕಾಲೇಜಿನಲ್ಲಿ ಅಂಧ ದರ್ಬಾರ ನಡೆದಿದ್ದು, 2,500 ಪಡೆದು 600 ರೂ. ರಶೀದಿ ನೀಡುತ್ತಿದೆ ಆಡಳಿತ ಮಂಡಳಿ. 2022-23ನೇ ಸಾಲಿನಿಂದಲೇ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ರೀತಿ ಬೇಕಾಬಿಟ್ಟಿ ಸುಲಿಗೆ ಮಾಡುತ್ತಿದ್ದರು  ಬಿಬಿಎಂಪಿ ಕಣ್ಣಿಗೆ ಕಾಣುತ್ತಿಲ್ಲ. ಈ ಕುರಿತು ಪ್ರಿನ್ಸಿಪಾಲ್‌ ನರಸಿಂಹ ಮೂರ್ತಿಯನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಅದಲ್ಲದೇ ಇಲ್ಲಿ ನೀರು ಬರಲ್ಲ , ಸೆಕ್ರೆಟರಿ ಚೆನ್ನಾಗಿ ಇಲ್ಲ , ಊಟ ಚೆನ್ನಾಗಿ ಕೊಡುತ್ತಿಲ್ಲ. ಜನರಲ್‌ಗೆ 2,500 ಹಾಗೂ ಎಸ್ಸಿ ಅವರಿಗೆ 2000 ತಗೊಂಡು ದಂಧೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಬೇಕು ಎಂದು ಪೋಷಕರು ಕೇಳುತ್ತಿದ್ದಾರೆ.

Koppal: ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಭೇಟಿ: ವಿಶೇಷ ಪೂಜೆ