vuukle one pixel image

ಯುವತಿಯೊಂದಿಗೆ ಸ್ನೇಹ, ಮನೆಯವರಿಂದ ವಿರೋಧ, ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Dec 14, 2020, 4:08 PM IST

ಬಳ್ಳಾರಿ (ಡಿ. 14): ಯುವತಿ ಜೊತೆ ಸ್ನೇಹ ಮಾಡಿದ್ದಕ್ಕೆ ಯುವತಿ ಮನೆಯವರು ಯುವಕನ ತಂದೆ ಹಾಗೂ ಯುವಕನ ಚಿಕ್ಕಪ್ಪನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಲ್ಲಿನ ಕೌಲ್ ಬಜಾರ್ ಪ್ರದೇಶದಲ್ಲಿ ಡಿಸೆಂಬರ್ 7 ರಂದು ನಡೆದ ಘಟನೆ ಇದು.

ಕೌಲ್ ಬಜಾರ್ ಏರಿಯಾದ ಯುವಕ ಪೈಜುಲ್ ಹಾಗೂ ಯುವತಿ ಅಬಿದಾ ನಡುವೆ ಸ್ನೇಹ ಬೆಳೆದಿತ್ತು. ಇದು ಮನೆಯವರಿಗೆ ಗೊತ್ತಾಗಿ ಮಾತನಾಡದಂತೆ ಇಬ್ಬರಿಗೂ ವಾರ್ನಿಂಗ್ ಕೊಟ್ಟಿದ್ದರು. ಆದರೂ ಸ್ನೇಹ ಮುಂದುವರೆಸಿದ್ದಕ್ಕೆ ಅಬಿದಾ ತಂದೆ ಹಾರೀಫ್ , ಚಿಕ್ಕಪ್ಪ ಹಿದಾಯತ್ ಸೇರಿ ಎಂಟು ಜನರು ಯುವಕ‌ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. 

ಬಳ್ಳಾರಿ ವಿಭಜನೆ ಖಂಡಿಸಿ ಧರಣಿ; ಪ್ರತಿಭಟನಾಕಾರರು, ಪೊಲೀಸರ ನಡುವೆ ವಾಗ್ವಾದ

ಘಟನೆಯಲ್ಲಿ ಫೈಜುಲ್ ತಂದೆ ವಲಿಭಾಷಾ ಹಾಗೂ ಚಿಕ್ಕಪ್ಪ ನಿಸಾರ್ ಅಹಮದ್‌ಗೆ ಗಂಭೀರ ಗಾಯಗೊಂಡಿದ್ದುಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ, ಎಂಟು ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ.