ಬೆಂಗಳೂರಿನಲ್ಲಿ ಬಸ್​ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಸಾಮೂಹಿಕ ಬಲಾತ್ಕಾರ!

Published : Jan 20, 2025, 11:46 PM ISTUpdated : Jan 20, 2025, 11:48 PM IST
ಬೆಂಗಳೂರಿನಲ್ಲಿ ಬಸ್​ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಸಾಮೂಹಿಕ ಬಲಾತ್ಕಾರ!

ಸಾರಾಂಶ

ಬಸ್​ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ತಮಿಳುನಾಡಿನಿಂದ ಬೆಂಗಳೂರಿನ ಅಣ್ಣನ ಮನೆಗೆ ಬರ್ತಿದ್ದ ಮಹಿಳೆಯು ಕೆ.ಆರ್​ ಮಾರುಕಟ್ಟೆಯಲ್ಲಿ ಯಲಹಂಕ ಬಸ್​ಗಾಗಿ ಕಾಯುತ್ತಿದ್ದರು. 

ಬೆಂಗಳೂರು (ಜ.20): ಬಸ್​ಗಾಗಿ ಕಾಯುತ್ತಿದ್ದ ಮಹಿಳೆಯನ್ನ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ತಮಿಳುನಾಡಿನಿಂದ ಬೆಂಗಳೂರಿನ ಅಣ್ಣನ ಮನೆಗೆ ಬರ್ತಿದ್ದ ಮಹಿಳೆಯು ಕೆ.ಆರ್​ ಮಾರುಕಟ್ಟೆಯಲ್ಲಿ ಯಲಹಂಕ ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಆರೋಪಿಗಳನ್ನ ಯಲಹಂಕ ಬಸ್​ಗಾಗಿ ಮಹಿಳೆ ವಿಚಾರಿಸಿದಾಗ ಬಸ್​ ತೋರಿಸುತ್ತೇವೆಂದು ಗೋಡೌನ್​ ಸ್ಟ್ರೀಟ್​ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದಲ್ಲದೇ ಬಳಿಕ ಮಹಿಳೆಯ ಮೊಬೈಲ್, ಹಣ, ತಾಳಿ, ಚಿನ್ನ ಕದ್ದು ಪರಾರಿಯಾಗಿದ್ದಾರೆ. ಘಟನೆಯು ನಿನ್ನೆ ರಾತ್ರಿ (ಭಾನುವಾರ) 11:30ರ ಸುಮಾರಿಗೆ ಕೆ.ಆರ್​ ಮಾರುಕಟ್ಟೆ ಠಾಣಾ ವ್ಯಾಪ್ತಿಯ ಗೋಡೌನ್​ ಸ್ಟ್ರೀಟ್​ನಲ್ಲಿ ನಡೆದಿದೆ. ಸದ್ಯ ಸಂತ್ರಸ್ತ ಮಹಿಳೆಯಿಂದ ಬೆಂಗಳೂರು ಕೇಂದ್ರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿತ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾರೂಗೇರಿ ಪಟ್ಟಣದ ಅದಿಲಷಾ ಶಬ್ಬೀರ್ ಜಮಾದಾರ, ಯಲ್ಪಾರಟ್ಟಿ ಗ್ರಾಮದ ಅಭಿಷೇಕ ಬಾಳಪ್ಪ ಬೆವಣೂರ ಮತ್ತು ಅಕಲನೂರ ಗ್ರಾಮದ ಕೌತುಕ ಬಾನು ಬಡಿಗೇರ ಬಂಧಿತ ಆರೋಪಿಗಳು. 

ಆರೋಪಿಗಳು ರಾಯಬಾಗ ತಾಲೂಕಿನ ಗ್ರಾಮವೊಂದರ ಗುಡ್ಡಗಾಡು ಪ್ರದೇಶದಲ್ಲಿ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಒಬ್ಬ ಅಪ್ರಾಪ್ತೆಯು ಬಂಧಿತ ಆರೋಪಿ ಅಭಿಷೇಕ್‌ನ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾಳೆ. ಮೆಸೇಜ್‌ ಮಾಡುತ್ತಾ ಮಾಡುತ್ತಾ ಯುವತಿ ಆರೋಪಿಯ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು 17 ವರ್ಷದ ಬಾಲಕಿಗೆ ಪುಸಲಾಯಿಸಿದ್ದಾನೆ. ಈತನ ಮಾತು ನಂಬಿ, ನೊಂದ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹೋಗಿದ್ದಳು. ಈ ವೇಳೆ ಎಲ್ಲರೂ ಒಟ್ಟಾಗಿ ಹಾರೂಗೇರಿ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ.

6 ವರ್ಷದ ಬಾಲಕಿಯ ರೇಪ್‌ & ಮರ್ಡರ್‌, ದಾರುಣ ಘಟನೆಗೆ ಸಾಕ್ಷಿಯಾದ ರಾಜಧಾನಿ!

ಅಲ್ಲಿ, ಆರೋಪಿ ಅಭಿಷೇಕ ಸಂತ್ರಸ್ತ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಇದೆ ವೇಳೆ ಎರ್ಟಿಗಾ ಕಾರಿನಲ್ಲಿ ಅಭಿಷೇಕ ಮತ್ತೆ ತನ್ನಿಬ್ಬರು ಗೆಳೆಯರನ್ನು ಕೂಡ ಕರೆದುಕೊಂಡು ಕಾರಿನಲ್ಲಿ ಕರೆತಂದಿದ್ದ. ನಂತರ ಸಂತ್ರಸ್ತ ಬಾಲಕಿಯರನ್ನು ರಾಯಬಾಗ ತಾಲೂಕಿನ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಜ.3ರಂದು ಮಧ್ಯಾಹ್ನದ ವೇಳೆಗೆ ಗುಡ್ಡದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದರ ಏರಿಕೆ: ಡ್ರೈಫ್ರೂಟ್ಸ್‌ ಮಾತ್ರ ಕದ್ದ ಕಳ್ಳ
ಸ್ನ್ಯಾಪ್‌ಚಾಟ್ ಮೂಲಕ ಮಹಿಳೆ ಬಲೆಗೆ ಬೀಳಿಸಿದ್ದ ಹ್ಯಾಂಡ್ಸಮ್ ಹುಡುಗ: 40 ಲಕ್ಷ ಹಣ, 1 ಕೆಜಿ ಚಿನ್ನ ಲೂಟಿ!