ಜೂ. ಎನ್.ಟಿ.ಆರ್ ಹಾಲಿವುಡ್‌ ಪ್ರವೇಶ? ಸುಳಿವು ಕೊಟ್ಟ ಗನ್!

Published : Jan 20, 2025, 11:00 PM IST
ಜೂ. ಎನ್.ಟಿ.ಆರ್ ಹಾಲಿವುಡ್‌ ಪ್ರವೇಶ? ಸುಳಿವು ಕೊಟ್ಟ ಗನ್!

ಸಾರಾಂಶ

ಆರ್‌ಆರ್‌ಆರ್ ಚಿತ್ರದ ಜಾಗತಿಕ ಯಶಸ್ಸಿನ ಬಳಿಕ, ಜೂನಿಯರ್ ಎನ್‌ಟಿಆರ್ ಹಾಲಿವುಡ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಸೂಪರ್‌ಮ್ಯಾನ್ ನಿರ್ದೇಶಕ ಜೇಮ್ಸ್ ಗನ್, ಎನ್‌ಟಿಆರ್ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ವಾರ್ 2 ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಗಳು ಎನ್‌ಟಿಆರ್‌ರ ಮುಂಬರುವ ಪ್ರಾಜೆಕ್ಟ್‌ಗಳಾಗಿವೆ.

ಹೈದರಾಬಾದ್: ಬಾಹುಬಲಿ ಸಕ್ಸಸ್ ನಂತರ ಎಸ್.ಎಸ್. ರಾಜಮೌಳಿ ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಜೊತೆ ಮಾಡಿದ ಸಿನಿಮಾ ಆರ್‌ಆರ್‌ಆರ್. ವಿಶ್ವದಾದ್ಯಂತ ಸಿನಿಮಾ ಭಾರಿ ಸದ್ದು ಮಾಡಿತ್ತು. ‘ನಾಟು ನಾಟು’ ಹಾಡು ಭಾರತೀಯ ಸಿನಿಮಾವೊಂದರಿಂದ ಆಸ್ಕರ್ ಗೆದ್ದ ಮೊದಲ ಹಾಡಾಗಿ ಇತಿಹಾಸ ನಿರ್ಮಿಸಿತು.

ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಇಬ್ಬರೂ ತಮ್ಮ ಅಭಿನಯದಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದರು. ತಮ್ಮ ಹಾಲಿವುಡ್ ಪ್ರಾಜೆಕ್ಟ್ ಪಕ್ಕಾ ಆಗಿದ್ದು, ಬೇಗನೆ ಅನೌನ್ಸ್ ಮಾಡ್ತೀವಿ ಅಂತ ರಾಮ್ ಚರಣ್ ಈ ಮೊದಲೇ ಹೇಳಿದ್ದರು.

ಪತ್ನಿ ಪವಿತ್ರ ಲೋಕೇಶ್ ಬಗ್ಗೆ ನಟ ನರೇಶ್ ಬಿಚ್ಚಿಟ್ಟ ಇಂಟರೆಸ್ಟಿಂಗ್ ವಿಷ್ಯ

ಈಗ ಜೂನಿಯರ್ ಎನ್‌ಟಿಆರ್ ಕೂಡ ಹಾಲಿವುಡ್‌ಗೆ ಎಂಟ್ರಿ ಕೊಡಬಹುದು ಅನ್ನೋ ಸುಳಿವು ಸೂಪರ್‌ಮ್ಯಾನ್ ಡೈರೆಕ್ಟರ್, ಲೆಜೆಂಡರಿ ಹಾಲಿವುಡ್ ಚಿತ್ರನಿರ್ಮಾಪಕ ಜೇಮ್ಸ್ ಗನ್ ಕೊಟ್ಟಿದ್ದಾರೆ.  ಒಂದು ಇಂಟರ್‌ವ್ಯೂನಲ್ಲಿ ಸೂಪರ್‌ಮ್ಯಾನ್, ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ, ಸ್ಯೂಸೈಡ್ ಸ್ಕ್ವಾಡ್ ಸಿನಿಮಾಗಳ ಡೈರೆಕ್ಟರ್ ಜೇಮ್ಸ್ ಗನ್, ಜೂನಿಯರ್ ಎನ್‌ಟಿಆರ್ ಬಗ್ಗೆ ಮಾತಾಡಿದ್ದಾರೆ.

“ಆರ್‌ಆರ್‌ಆರ್‌ನಲ್ಲಿ ಕೇಜ್‌ನಿಂದ ಹುಲಿ, ಬೇರೆ ಪ್ರಾಣಿಗಳ ಜೊತೆ ಜಿಗಿಯೋ ನಟನ (ಎನ್‌ಟಿಆರ್) ಜೊತೆ ಕೆಲಸ ಮಾಡೋಕೆ ಇಷ್ಟಪಡ್ತೀನಿ. ಅವರು ಅದ್ಭುತ. ಒಂದು ದಿನ ಅವರ ಜೊತೆ ಕೆಲಸ ಮಾಡ್ತೀನಿ ಅಂತ ಆಸೆ ಇದೆ” ಅಂತ ಜೇಮ್ಸ್ ಗನ್ ಹೇಳಿದ್ದಾರೆ.

ಸಲ್ಮಾನ್ ಖಾನ್‌ ಕಾರಣಕ್ಕೆ ಬಿಗ್ ಬಾಸ್ 18 ಸೆಟ್‌ ಬಿಟ್ಟು ಹೋದ ಅಕ್ಷಯ್ ಕುಮಾರ್!

ಜೂನಿಯರ್ ಎನ್‌ಟಿಆರ್ ಫ್ಯಾನ್ಸ್ ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಹಾಲಿವುಡ್‌ಗೆ ಹೋಗೋದು ಪಕ್ಕಾ ಅಂತ ಫ್ಯಾನ್ಸ್ ಹೇಳ್ತಿದ್ದಾರೆ. ಹೃತಿಕ್ ರೋಷನ್ ಜೊತೆ ನಟಿಸ್ತಿರೋ ವಾರ್ 2 ಜೂನಿಯರ್ ಎನ್‌ಟಿಆರ್‌ರ ಮುಂದಿನ ಸಿನಿಮಾ. ಕೆಜಿಎಫ್, ಸಲಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಜೊತೆಗೂ ಜೂನಿಯರ್ ಎನ್‌ಟಿಆರ್ ಸಿನಿಮಾ ಮಾಡ್ತಿದ್ದಾರೆ.

ಈ ಹಿಂದೆ ಹಾಲಿವುಡ್ ಚಿತ್ರಕಥೆಗಾರ ಆರನ್ ಸ್ಟೀವರ್ಟ್ ಅಹ್ನ್ ಆರ್‌ಆರ್‌ಆರ್‌ ನ ರಾಮ್‌ಚರಣ್‌ಗಾಗಿ ಕಥೆ ಬರೆಯುದಾಗಿ ಹೇಳಿದ್ದರು.  ಮ್ಯಾಂಡಿ (2018) ಮತ್ತು ಕ್ಯಾಬಿನೆಟ್ ಆಫ್ ಕ್ಯೂರಿಯಾಸಿಟೀಸ್ (2022) ಚಿತ್ರಗಳಲ್ಲಿ ಜನಪ್ರಿಯವಾಗಿರುವ  ಆರನ್ ಸ್ಟೀವರ್ಟ್ ಅಹ್ನ್ ಅವರು ರಾಮ್ ಚರಣ್‌ಗಾಗಿ ಚಲನಚಿತ್ರವನ್ನು ಬರೆಯಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.  ಇದೀಗ ತಾರಕ್‌ ಅಲಿಯಾಸ್ ಜ್ಯೂನಿಯತ್ ಎನ್‌ಟಿಆರ್‌ಗೆ ಹಾಲಿವುಡ್‌ ಅವಕಾಶ ಎದುರು ನೋಡುತ್ತಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದಳಪತಿ ವಿಜಯ್-ರಜನಿಕಾಂತ್: ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಎಲ್ಲಾ ಆಸ್ತಿ ರಹಸ್ಯ ಬಯಲು!
'ಟೂ-ಪೀಸ್' ಬಟ್ಟೆ ಧರಿಸಲು ಕಂಫರ್ಟಬಲ್ ಆಗಲ್ಲ ಎಂದಿದ್ದ ಕೃತಿ ಸನೋನ್ ಸ್ಟಾರ್ ಆಗಿದ್ದು ಹೇಗೆ? ಸೀಕ್ರೆಟ್ ಹೊರಬಂತು!