2019ರ ನವೆಂಬರ್ 9 ರಂದು ಅಯೋಧ್ಯೆ ತೀರ್ಪು: ನೆನಪಿಗಾಗಿ ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್ ಸಂಪುಟ ಸಭೆ

Nov 10, 2023, 10:36 AM IST

ಅಯೋಧ್ಯೆ ರಾಮಮಂದಿರ(Rama Mandir) ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಮಂದಿರ ಉದ್ಘಾಟನೆಗೂ ಮುನ್ನ ‘ಯೋಗಿ’ ಐತಿಹಾಸಿಕ ನಡೆ ಇಟ್ಟಿದ್ದಾರೆ. ಗುರುವಾರ ಅಯೋಧ್ಯೆಯಲ್ಲೇ ಮಹತ್ವದ ಸಚಿವ ಸಂಪುಟ ಸಭೆ ನಡೆಸಿದ್ದಾರೆ. 2019ರ ನವೆಂಬರ್ 9 ರಂದು ಅಯೋಧ್ಯೆ ತೀರ್ಪು ಹೊರಬಂದಿದೆ. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿತ್ತು. ಈ ನೆನಪಿಗಾಗಿ ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್(Yogi Adityanath) ಸಂಪುಟ ಸಭೆ(Cabinet meeting) ನಡೆಸಿದ್ದಾರೆ. ರಾಮಕಥಾ ಮ್ಯೂಸಿಯಂನಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆದಿದೆ. ಸಂಪುಟ ಸಭೆಯಲ್ಲಿ 24 ಹಿರಿಯ ಸಚಿವರು ಭಾಗಿಯಾಗಿದ್ದು, ದೀಪಾವಳಿ(Diwali) ನಿಮಿತ್ತ ಲಕ್ಷ ದೀಪೋತ್ಸವದ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಗಿದೆ. ಯೋಗಿ ಸೇರಿ 24 ಹಿರಿಯ ಸಚಿವರು ಬಸ್‌ನಲ್ಲಿ ಅಯೋಧ್ಯೆಗೆ ಆಗಮಿಸಿದ್ದರು. ಕ್ಯಾಬಿನೆಟ್ ಸಭೆಗೂ ಮುನ್ನ ದೇವಾಲಯಗಳಲ್ಲಿ ವಿಶೇಷ ಪೂಜೆ  ನಡೆಯಿತು. ಬಳಿಕ ರಾಮಮಂದಿರ ನಿರ್ಮಾಣದ ಕಾಮಗಾರಿ ವೀಕ್ಷಣೆ ಮಾಡಲಾಯಿತು. ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ರಾಮಕಥಾ ಮ್ಯೂಸಿಯಂ ,ಹಾಲ್‌ನಲ್ಲಿ ರಾಮನ ಬಲಗೈ ಬಂಟ ಹನುಮನ ಫ್ಲೆಕ್ಸ್ ಹಾಕಲಾಗಿದೆ. ಸಂಪುಟ ಸಭೆಯಲ್ಲಿ 14 ಪ್ರಸ್ತಾವನೆಗಳಿಗೆ ಅಂತಿಮ ಮುದ್ರೆ ಒತ್ತಲಾಗಿದೆ. 

ಇದನ್ನೂ ವೀಕ್ಷಿಸಿ:  ನಿಮಗಾಗಿ ಸಿಗುತ್ತಾರೆ ಸ್ಯಾಂಡಲ್‌ವುಡ್‌ 'ಸ್ವೀಟಿ': ಅಭಿಮಾನಿಗಳ ಭೇಟಿಗೆ ರಾಧಿಕಾ ಡೇಟ್, ಟೈಂ ಫಿಕ್ಸ್..!