ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಏನೇನು ಮಾಡಬಹುದು?

May 12, 2020, 6:17 PM IST

ನವದೆಹಲಿ(ಮೇ.12): ಪ್ರಧಾನಿ ನರೇಂದ್ರ ಮೋದಿ ಮಂಗಳವಾರವಾದ ಇಂದು ಸಂಜೆ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಸಹಜವಾಗಿಯೇ ಜನರಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ.

ಪ್ರಧಾನಿ ಮೋದಿ ನಾಲ್ಕನೇ ಹಂತದ ಲಾಕ್‌ಡೌನ್ ವಿಸ್ತರಿಸಲಿದ್ದಾರಾ? ಲಾಕ್‌ಡೌನ್‌ನಿಂದಾಗಿ ಹಳಿ ತಪ್ಪಿರುವ ಆರ್ಥಿಕತೆಗೆ ಹೊಸ ಟಾನಿಕ್ ನೀಡಲಿದ್ದಾರಾ ಎನ್ನುವ ಬಗ್ಗೆ ಕುತೂಹಲಗಳು ಜೋರಾಗಿವೆ. ಮೊದಲ ಎರಡು ಹಂತದ ಲಾಕ್‌ಡೌನ್ ಸಾಕಷ್ಟು ಕಟ್ಟುನಿಟ್ಟಿನಿಂದ ಕೂಡಿತ್ತು. ಆದರೆ ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಕೆಲವು ವಿನಾಯ್ತಿಗಳನ್ನು ನೀಡಲಾಗಿತ್ತು.

ದೀಪ ಹಚ್ಚಿ, ಚಪ್ಪಾಳೆ ಹೊಡೆದ್ರೆ ಜನರ ಸಮಸ್ಯೆ ಬಗೆಹರಿಯುತ್ತಾ? ಮೋದಿಗೆ ಸಿದ್ದು ಗುದ್ದು

ಇದೀಗ ಮೇ 17ರ ಬಳಿಕ ಬಸ್, ಮೆಟ್ರೋ, ರೈಲು, ಆಟೋ ಟ್ಯಾಕ್ಸಿ, ಸಂಚಾರಕ್ಕೆ ಅನುಮತಿ ಸಿಗಬಹುದೇ? ಕಂಟೈನ್‌ಮೆಂಟ್‌ ಝೋನ್‌ಗಳಲಷ್ಟೇ ಲಾಕ್‌ ಡೌನ್ ಮುಂದುವರೆಯಬಹುದಾ ಎನ್ನುವ ಲೆಕ್ಕಾಚಾರವೂ ಜನರ ಮುಂದಿದೆ. ಈ ಬಗ್ಗೆ ಪ್ರಶಾಂತ್ ನಾತು ವಿಶ್ಲೇಷಿಸಿದ್ದು ಹೀಗೆ..