ಚಿಕ್ಕಮಗಳೂರು: ನರಸಿಂಹರಾಜಪುರ ಪಟ್ಟಣದಲ್ಲಿ‌ ರಾಶಿ ರಾಶಿ ಕಸ, ಗ್ರಾಮಸ್ಥರ‌ ಆಕ್ರೋಶ

By Govindaraj S  |  First Published Sep 22, 2024, 9:44 PM IST

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಣಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಸತಿ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಯವರೇ ಕಸ ಸುರಿದಿರುವ ಆರೋಪ ಕೇಳಿ ಬಂದಿದೆ.
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.21): ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಣಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಸತಿ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಯವರೇ ಕಸ ಸುರಿದಿರುವ ಆರೋಪ ಕೇಳಿ ಬಂದಿದೆ. ಸುತ್ತ ಮುತ್ತಲಿನ ಪ್ರದೇಶದಲ್ಲಿ ಸಂಗ್ರಹಿಸಿದ್ದ ಕಸವನ್ನು ಇಲ್ಲಿ ತಂದು ಸುರಿತ್ತಿರುವುದರಿಂದ ಸುತ್ತಮುತ್ತಲಿನ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದರೆ ಜಾನುವಾರುಗಳು ಪ್ಲಾಸ್ಟಿಕ್ ಗಳನ್ನು ತಿಂದು ಪ್ರಾಣಕ್ಕೆ ಸಂಚುಕಾರರು ತಂದುಕೊಳ್ಳುತ್ತಿವೆ.

Tap to resize

Latest Videos

ಮೂಕ ಪ್ರಾಣಿಗಳ ಹೊಟ್ಟೆ ಸೇರುತಿದೆ ಪ್ಲಾಸ್ಟಿಕ್: ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಬಿ ಕಣಬೂರು ಗ್ರಾಮ ಪಂಚಾಯತಿ ಸಿಬ್ಬಂದಿಗಳ ನಿರ್ಲಕ್ಷದಿಂದ ಮೂಕ ಪ್ರಾಣಿಗಳಿಗೆ ಇದೀಗ ಸಂಚಕಾರ ಎದುರಾಗಿದೆ. ಬಾಳೆಹೊನ್ನೂರು ಪಟ್ಟಣದಲ್ಲಿ ಸಂಗ್ರಹ ಮಾಡಿದ ಕಸದ ರಾಶಿಯನ್ನು ವಿಲೇವಾರಿ ಮಾಡದೆ ಪಟ್ಟಣದಲ್ಲೇ ಜನವಸತಿ ಪ್ರದೇಶದಲ್ಲೇ ಸುರಿದ ಪರಿಣಾಮವಾಗಿ ಒಂದೆಡೆ ಜನವಸತಿ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಕಿರಿಕಿರಿ ಉಂಟಾಗುತ್ತಿದ್ದರೆ ಮತ್ತೊಂದೆಡೆ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ತಿನ್ನುವ ಮೂಲಕ  ಜಾನುವಾರಗಳ ಪ್ರಾಣಕ್ಕೆ ಸಂಚುಕಾರ ಎದುರಾಗಿದೆ. ರಾಶಿ ರಾಶಿ ಕಸದ ರಾಶಿಯ ನಡುವೆ 10ಕ್ಕೂ ಹೆಚ್ಚು ಬಿಡಾಡಿ ದನಗಳು ತಿನ್ನುತ್ತಿರುವುದನ್ನು ವಿಡಿಯೋ ಮಾಡಿ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನು ಹೊರಹಾಕಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ: ಡಿ.ಕೆ.ಶಿವಕುಮಾರ್

ಪಂಚಾಯತಿ ವಿರುದ್ದ ಸ್ಥಳೀಯರ ಕಿಡಿ: ಇನ್ನೂ ಗೋವಿಗಳು ಆಹಾರ ತಿನ್ನೋತ್ತಿರೋದನ್ನ ನೋಡಿರೋ ಸ್ಥಳೀಯರಂತೂ ಹಿಗ್ಗಾಮುಗ್ಗ ಅಕ್ರೋಶ ಹೊರಹಾಕ್ತಿದ್ದಾರೆ.ಇದಲ್ಲದೆ ಕಸ ಹಾಕಿರೋದ್ರಿಂದ ಸುತ್ತಮುತ್ತಲಿನ ಜನ್ರು ಕೂಡ ಇರೋಕೆ ಅಗ್ತಿಲ್ಲ. ಸಾಂಕ್ರಾಮಿಕ ರೋಗಗಳು ಹರಡೋ ಭೀತಿಯಲ್ಲಿ ಇತರಹದ ನಿರ್ಲಕ್ಷ್ಯ ಯಾಕೆ ಅಂತಿದ್ದಾರೆ. ಮಾಹಿತಿ ನೀಡಿದ್ರು ಗಮನ ಹರಿಸ್ತಿಲ್ಲ ಅಂತಾ ಅರೋಪ ಮಾಡ್ತಾ ಇದ್ದಾರೆ.ಕಸ ಸುರಿಯುತ್ತಿರುವವರನ್ನು ಪ್ರಶ್ನಿಸಿದರೆ ಕುಂಟು ನೆಪ ಹೇಳುತ್ತಿದ್ದಾರೆ. ಕಸದ ಜೊತೆಗೆ ಸತ್ತ ನಾಯಿ, ಹೆಗ್ಗಣಗಳನ್ನು ತಂದು ಸುರಿದಿದ್ದಾರೆ. ಸಮೀಪದಲ್ಲೇ ಪೊಲೀಸ್ ವಸತಿ ಗೃಹಗಳು ಹಲವರ ಮನೆಗಳಿದ್ದು ಇದರಿಂದ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

click me!