'ಮುಸ್ಲಿಂ ಯುವತಿ ಪ್ರೀತಿಸಿದ್ದ ಯುವಕನ ಹತ್ಯೆ; ಜಾತ್ಯತೀತವಾದಿಗಳು ಈಗೆಲ್ಲಿದ್ದಾರೆ?'

Oct 12, 2020, 5:06 PM IST

ನವದೆಹಲಿ(ಅ. 12)  ನವದೆಹಲಿಯಲ್ಲಿ ಮುಸ್ಲಿಂ  ಗುಂಪು ಹಿಂದೂ ಯುವಕನ ಹತ್ಯೆ ಮಾಡಿರುವುದನ್ನು ವಿಶ್ವಹಿಂದೂ ಪರಿಷತ್ ಖಂಡಿಸಿದೆ.  ಹಿಂದುಳಿದ ವರ್ಗಕ್ಕೆ ಸೇರಿದ್ದ ಯುವಕನ ದಾರುಣ ಹತ್ಯೆ ಖಂಡಿಸಿದ್ದು ಹಲವಾರು ಪ್ರಶ್ನೆ ಕೇಳಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ ಕೇಂದ್ರ ಜಂಟಿ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್, ಹಿಂದುಳಿದ ವರ್ಗದ ಯುವಕ ರಾಹುಲ್ ಕಂಡೇಲಾ ಮುಸ್ಲಿಂ ಯುವತಿಯ ಗೆಳತನ ಮಾಡಿದ್ದೆ ತಪ್ಪಾಯಿತೆ? ಮುಸ್ಲಿಂ ಯುವತಿಯನ್ನು ಪ್ರೀತಿ ಮಾಡಿದರೆ ಅದೊಂದು ಕ್ರಿಮಿಮನಲ್ ಅಪರಾಧವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಹಿಂದೂ ಶಬ್ದವೇ ಅವಮಾನಕರ, ತೆಗೆದು ಹಾಕಿ; ಭಗವಾನ್

ಇದೊಂದು ಚಿಂತಾಜನಕ ಪ್ರಕರಣ, ಪ್ರೀತಿ ಮಾಡಿದ್ದಕ್ಕೆ ಗುಂಪೊಂದು ಹತ್ಯೆ ಮಾಡಬೇಕೆ? ಯಾವುದಾದರೂ ಮುಸ್ಲಿಂ ಯುವಕನಿಗೆ ಹೀಗೆ ಆಗಿದ್ದರೆ ಎಲ್ಲರೂ ಮೌನವಾಗಿರುತ್ತಿದ್ದರೆ? ಎಂದು ಪ್ರಶ್ನೆ ಮಾಡಿದ್ದಾರೆ. ರಾಜಕೀಯ ಕಾರಣಕ್ಕೆ, ವಿದೇಶಿ ಶಕ್ತಿಗಳ ಪ್ರಭಾವದಿಂದ ಇಂಥ ಕೆಲಸ ಆಗುತ್ತಿದೆ.  ಇವರ ಪಾಪಗಳನ್ನು ದೇಶ  ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.