ಚೀನಾ ಏನು ಮಾಡಲು ಬಯಸುತ್ತಿದೆ? ಪ್ರಶಾಂತ್ ನಾತು ವಿಶ್ಲೇಷಿಸಿದ್ದು ಹೀಗೆ

Jun 17, 2020, 4:50 PM IST

ನವದೆಹಲಿ(ಜೂ.17): ಭಾರತ-ಚೀನಾ ಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿವೆ. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸಜ್ಜಾಗಿ ಎಂದು ಮೂರೂ ಪಡೆಗಳಿಗೆ ಭಾರತ ಸರ್ಕಾರ ಸೂಚನೆ ನೀಡಿದೆ. 

ಸೋಮವಾರ(ಜೂ.15) ತಡರಾತ್ರಿ ಪೂರ್ವ ಲಡಾಖ್‌ನ ಗಲ್ವಾನ್‌ನ ಗಡಿ ಪ್ರದೇಶದಲ್ಲಿ ಭಾರತೀಯ ಸೈನಿಕರು ಹಾಗೂ ಚೀನಿ ಪಡೆಗಳ ನಡುವೆ ತಿಕ್ಕಾಟ ಏರ್ಪಟ್ಟಿದೆ. ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಕೊನೆಯುಸಿರೆಳೆದಿದ್ದಾರೆ. ಈ ಘಟನೆಯ ಹಿನ್ನಲೆಯನ್ನು ಸುವರ್ಣ ನ್ಯೂಸ್ ಪ್ರತಿನಿಧಿ ಪ್ರಶಾಂತ್ ನಾತು ವಿಭಿನ್ನ ಆಯಾಮಗಳಲ್ಲಿ ವ್ಯಾಖ್ಯಾನಿಸಿದ್ದಾರೆ.

ಭಾರತೀಯ ಸೈನಿಕರೇ ಮೊದಲು ದಾಳಿ ಮಾಡಿದ್ದು; ಸುಳ್ಳಿನ ಕತೆ ಹೆಣೆದ ಚೀನಾ

ಕಲ್ಲು ದೊಣ್ಣೆಯ ಮೂಲಕ ಭಾರತೀಯರ ಮೇಲೆ ಚೀನಾ ಮುಗಿಬೀಳಲು ಕಾರಣವೇನು? ಚೀನಾ ಏನು ಮಾಡಲು ಬಯಸುತ್ತಿದೆ. ಚೀನಾ ಶಕ್ತಿ ಪ್ರದರ್ಶನಕ್ಕೆ ಮುಂದಾಯ್ತಾ ಎನ್ನುವುದನ್ನು ಪ್ರಶಾಂತ್ ನಾತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಕೇಳಿ...