News Hour: ಮಹಾರಾಷ್ಟ್ರದಲ್ಲಿ ರಾಜಕೀಯ 'ಮಹಾ' ಸಂಗಮ: ಪತನದ ಹಾದಿಯಲ್ಲಿ ಅಘಾಡಿ ಸರ್ಕಾರ

Jun 24, 2022, 11:09 PM IST

ಮುಂಬೈ (ಜೂ. 24):  ಎನ್‌ಸಿಪಿ, ಕಾಂಗ್ರೆಸ್‌ ಜೊತೆಗಿನ ಮೈತ್ರಿ ವಿರೋಧಿಸಿ ಶಿವಸೇನೆಯ ಹಿರಿಯ ನಾಯಕ, ಸಚಿವ ಏಕನಾಥ್‌ ಶಿಂಧೆ (Eknath Shinde) ಪಕ್ಷದ ವಿರುದ್ಧವೇ ಬಂಡೆದಿದ್ದು, ಸರ್ಕಾರವನ್ನು ಪತನದ ಆತಂಕಕ್ಕೆ ದೂಡಿದ್ದಾರೆ. ಏಕನಾಥ ಶಿಂಧೆ ಬಂಡಾಯದಿಂದ ಕಂಗೆಟ್ಟಿರುವ ಮಹಾರಾಷ್ಟ್ರದ ಮೈತ್ರಿಕೂಟದ ಸರ್ಕಾರ ಉಳಿಸಿಕೊಳ್ಳಲು ಸಿಎಂ ಠಾಕ್ರೆ  (Uddhav Thackarey) ಕಸರತ್ತು ನಡೆಸುತ್ತಿದ್ದಾರೆ. ಆದರೆ ರೆಬೆಲ್‌ ನಾಯಕ ಶಿಂಧೆ ಮುಂದೆ ಠಾಕ್ರೆ ಆಟ ನಡಿತಿಲ್ಲ. ಇತ್ತ ಸಿಎಂ ಸ್ಥಾನಕ್ಕೆ ರಾಜೀನಾಮೆ ನಿಡೋದು ಬೇಡ, ಬೇಕಿದ್ರೆ ವಿಶ್ವಾಸ ಮತಕ್ಕೆ ಹೋಗೋಣ ಎಂದು ಮಿತ್ರ ಪಕ್ಷಗಳು ಠಾಕ್ರೆಗೆ ಸಲಹೆ ನೀಡಿವೆ. 

ಸದ್ಯ ಏಕನಾಥ ಶಿಂಧೆ ಟೀಮಲ್ಲಿ ಒಟ್ಟು 48 ಶಾಸಕರಿದ್ದು, ಇದರಲ್ಲಿ 39 ಶಿವಸೇನೆ ಶಾಸಕರು ಹಾಗೂ 9 ಪಕ್ಷೇತರ ಶಾಸಕರು ಇದ್ದಾರೆ. ಇತ್ತ ಉದ್ಧವ್‌ ಠಾಕ್ರೆ ಟೀಮಲ್ಲಿ ಮಗ ಆದಿತ್ಯ ಸೇರಿ 16 ಶಾಸಕರಿದ್ದಾರೆ. ಈ ನಡುವೆ ಉದ್ಧವ್ ಠಾಕ್ರೆ ನಡೆಯಿಂದ ಅಸಮಾಧಾನಗೊಂಡು ಶಿವಸೇನೆಯ 18 ಸಂಸದರ ಪೈಕಿ 12 ಸಂಸದರೂ ಕೂಡ ಬಂಡಾಯವೆದ್ದಿದ್ದಾರೆ.  

ಇದನ್ನೂ ನೋಡಿ: ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

ಇನ್ನು ಮಹಾವಿಕಾಸ್‌ ಅಘಾಡಿ ಸರ್ಕಾರ ಕೊನೆ ಉಸಿರು ಹಿಡಿದು ನಿಂತಿದ್ರೆ ಇತ್ತ ಆಗಲೇ ಬಿಜೆಪಿ ನಾಯಕರು ಮೈತ್ರಿ ಸಮಾಧಿ ಮೇಲೆ ಸರ್ಕಾರ ರಚಿಸಲು ಸಜ್ಜಾಗಿ ನಿಂತಿದ್ದಾರೆ. ಅಷ್ಟಕ್ಕೂ ಶಿವಸೇನೆ ಬಂಡಾಯಕ್ಕೆ ಕಾರಣವೇ ಬಿಜೆಪಿ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ಬಿಜೆಪಿ ನಾಯಕರು ಮಾತ್ರ ಮೈತ್ರಿ ಸರ್ಕಾರ ಉಳಿದಿದ್ದೆ ಪುಣ್ಯ  ಅಂತಿದ್ದಾರ