ಜನರ ಹಿತದೃಷ್ಟಿಯಿಂದ ದೇಶವನ್ನು ಲಾಕ್‌ಡೌನ್ ಮಾಡಿ: ಸರ್ಕಾರಕ್ಕೆ ಸುಪ್ರೀಂ ಸೂಚನೆ!

May 4, 2021, 11:24 AM IST

ನವದೆಹಲಿ(ಮೇ.04) ದೇಶಾದ್ಯಂತ ಕೊರೋನಾ ಆರ್ಭಟಿಸುತ್ತಿದೆ. ಸೋಂಕಿತರ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹಾಗಿದ್ದರೆ ಇದೆಲ್ಲವನ್ನೂ ನಿಯಂತ್ರಿಸೋದು ಹೇಗೆ? ದೇಶಕ್ಕೆ ದೇಶವೇ ಮತ್ತೆ ಲಾಕ್‌ ಆಗುತ್ತಾ ಎಂಬ ಅನುಮಾನ ಮನೆ ಮಾಡಿದೆ.

ಕೊರೋನಾ ನಿಯಂತ್ರಿಸಲು ಹಾಗೂ ಜನರ ಹಿತದೃಷ್ಟಿಯಿಂದ ದೇಶವನ್ನು ಲಾಕ್ಡೌನ್ ಮಾಡುವ ಸಲಹೆ ಪರಿಗಣಿಸುವಂತೆ ಸುಪ್ರೀಂ ಕೆಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೇ ರಾಜ್ಯ ಸರ್ಕಾರಗಳಿಗೂ ಸುಪ್ರೀಂ ಕೋರ್ಟ್‌ ಈ ನಿಟ್ಟಿನಲ್ಲಿ ಸೂಚನೆ ರವಾನಿಸಿದೆ. 

ಇದೇ ವೇಳೆ ಬಡವರ ಹಿತದೃಷ್ಟಿಯನ್ನೂ ಪರಿಗಣಿಸುವಂತೆಯೂ ಸೂಚಿಸಿದೆ. ಹೀಗಿರುವಾಗ ಪಿಎಂ ಮೋದಿ ಈ ಸಲಹೆಯನ್ನು ಪರಿಗಣಿಸ್ತಾರಾ ಎಂದು ಕಾದು ನೋಡಬೇಕಷ್ಟೇ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona