ಸೂರ್ಯಗ್ರಹಣ 2020: ಭಾರತಕ್ಕೆ ಶುಭಯೋಗ ಬರುತ್ತಾ?

Jun 20, 2020, 7:20 PM IST

ನವದೆಹಲಿ (ಜೂ. 20):  ಇದೇ ಜೂನ್‌ 21ರ ಭಾನುವಾರ ಅಪರೂಪದ ‘ಕಂಕಣ ಸೂರ್ಯಗ್ರಹಣ’ ಹಾಗೂ ‘ಪಾಶ್ರ್ವ ಸೂರ್ಯಗ್ರಹಣ’ ಸುಮಾರು ಮೂರೂವರೆ ತಾಸು ಸಂಭವಿಸಲಿದೆ. ಭಾರತ, ಆಫ್ರಿಕಾ, ಚೀನಾ, ಯುರೋಪ್‌, ಆಸ್ಪ್ರೇಲಿಯಾ, ಪಾಕಿಸ್ತಾನಗಳಲ್ಲಿ ಗ್ರಹಣ ಗೋಚರಿಸಲಿದೆ. ಸೂರ್ಯನು ಗ್ರಹಣದ ಸಂದರ್ಭದಲ್ಲಿ ಭಾರತದ ರಾಜಸ್ಥಾನ, ಪಂಜಾಬ್‌, ಹರ್ಯಾಣ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಹಲವು ಭಾಗಗಳಲ್ಲಿ ಕಂಕಣಾಕೃತಿಯಲ್ಲಿ ಕಾಣಲಿದ್ದಾನೆ. ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ (ಪಾಶ್ರ್ವ) ಸೂರ್ಯಗ್ರಹಣ ಗೋಚರಿಸಲಿದೆ.

ನಿಜಕ್ಕೂ ಗ್ರಹಣ ಕೆಡುಕುಂಟು ಮಾಡುತ್ತಾ? ಒಳ್ಳೆಯದು ಆಗೋದೇ ಇಲ್ವಾ? ಸೋಮಯಾಜಿಗಳ ಉತ್ತರವಿದು.!

ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಸಂಪೂರ್ಣ ಆವರಿಸಿದಾಗ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ-ಭೂಮಿ ನಡುವೆ ಚಂದ್ರನು ನೇರ ರೇಖೆಯಲ್ಲಿ ಹಾದು ಹೋಗದಿದ್ದಾಗ ಪಾಶ್ರ್ವ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯನು ವಿಶಿಷ್ಟವಾಗಿ ಕಂಕಣ (ಬಳೆ) ಆಕಾರದಲ್ಲಿ ಕಾಣುವುದನ್ನು ಕಂಕಣ ಗ್ರಹಣ ಎನ್ನಲಾಗುತ್ತದೆ. ಈ ಗ್ರಹಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!