Jul 12, 2023, 1:03 PM IST
ಉತ್ತರ ಭಾರತದಲ್ಲಿ ಆಗುತ್ತಿರುವ ಭಾರೀ ಮಳೆಗೆ ಸಂಬಂಧಿಸಿದಂತೆ ಭಾರತೀಯ ಹವಾಮಾನ ಇಲಾಖೆ(Meteorological Department) ಭಯಾನಕ ಸತ್ಯವೊಂದನ್ನು ಬಿಚ್ಚಿಟ್ಟಿದೆ. ಇಡೀ ಉತ್ತರ ಭಾರತ(North India) ಅಕ್ಷರಶಃ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ಭಾಗದಲ್ಲಿ ಸುರಿಯುತ್ತಿರುವ ಮಿತಿಮೀರಿದ ಮಳೆ. ಇಲ್ಲಿನ ದೆಹಲಿ, ಪಂಜಾಬ್, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಇನ್ನು ಕೆಲ ರಾಜ್ಯಗಳಲ್ಲಿ ಕಳೆದ ಒಂದು ವಾರದಿಂದ ಮಳೆ(rain) ಅತಿವೃಷ್ಟಿಯಾಗಿದೆ. ನಿಲ್ಲದ ಮಳೆಗೆ ಈ ಎಲ್ಲ ರಾಜ್ಯಗಳು ತತ್ತರಿಸಿವೆ. ಅಬ್ಬರಿಸುತ್ತಿರುವ ಪ್ರವಾಹಕ್ಕೆ ಉತ್ತರ ಭಾರತ ಅಕ್ಷರಶಃ ಮುಳುಗಿ, ಮುಳುಗಿ ಏಳುತ್ತಿದೆ. ಉತ್ತರ ಭಾತರದಲ್ಲಿ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆಗೆ, ಎರಡು ಮಾರುತಗಳ ಮುಖಾಮುಖಿ ಕಾರಣವಂತೆ. ಹೀಗೆಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸದ್ಯಕ್ಕೆ ಉತ್ತರ ಭಾರತದಲ್ಲಿ ಒಂದೇ ಸಮಯಕ್ಕೆ ಎರಡು ಮಾರುತಗಳು ಸಾಗುತ್ತಿವೆ. ಮೊದಲನೇಯದ್ದು ಮುಂಗಾರು ಮಾರುತವಾದ್ರೆ, ಎರಡನೇಯದ್ದು ಪಾಶ್ಚಿಮಾತ್ಯ ಮಾರುತ. ಈ ಕಾರಣಕ್ಕಾಗಿ ಉತ್ತರ ಭಾರತದಲ್ಲಿ ಇಷ್ಟೊಂದು ಯದ್ವಾ-ತದ್ವಾ ಮಳೆಯಾಗುತ್ತಿರೋದೆಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ವೀಕ್ಷಿಸಿ: ರಾಷ್ಟ್ರೀಯ ವಾದಿಗಳನ್ನು ಗುರಿ ಮಾಡಿ ಹತ್ಯೆ ಮಾಡಲಾಗುತ್ತಿದೆ : ಸಿ.ಟಿ. ರವಿ ಪ್ರಶ್ನೆ