ಪುದುಚೇರಿಯಲ್ಲಿ ಅರಳಿದ ಕಮಲ, 40 ವರ್ಷದ ಬಳಿಕ ಮಹಿಳಾ ಶಾಸಕಿ!

Jun 27, 2021, 4:00 PM IST

ಪುfದುಚೇರಿ(ಜೂ.27): ಪುದುಚೇರಿಯಲ್ಲಿ ಇದೇ ಮೊದಲ ಬಾರಿ ಬಿಜೆಪಿ ಹಾಗೂ ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇಂದು ಮಧ್ಯಾಹ್ನ 02.30ಕ್ಕೆ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಇಲ್ಲಿ ಬರೋಬ್ಬರಿ ನಲ್ವತ್ತು ವರ್ಷದ ಬಳಿಕ ಮಹಿಳಾ ಆಶಸಕಿಯೊಬ್ಬರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ವಿಶೇಷ.

ಇನ್ನು ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಇಬ್ಬರು ಜೋಡೆತ್ತುಗಳಂತೆ ಕೆಲಸ ಮಾಡಿದ್ದಾರೆ. ಹೌದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಬಿಜೆಪಿ ನಾಯಕ ನಿರ್ಮಲ್ ಕುಮಾರ್ ಸುರಾನಾ ಪುದುಚೇರಿ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಒಂದು ತಿಂಗಳ ಕಾಲ ಅಲ್ಲೇ ಬೀಡುಬಿಟ್ಟು ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿದ್ದರು. ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಕೆಂದ್ರದ ಒಪ್ಪಿಗೆ ಪಡೆದು ಘೋಷಿಸಿದ್ದರು.

ಅಲ್ಲದೇ ಚುನಾವಣಾ ಪ್ರಚಾರದ ವೇಳೆ ಅತ್ಯುತ್ತಮ ರಣತಂತ್ರ ರೂಪಿಸಿ ಬಿಜೆಪ ಮೈತ್ರಿಕೂಟ ಅಧಿಕಾರಕ್ಕೆ ತರಲು ಕಾರಣರಾಗಿದ್ದರು. ಇವೆಲ್ಲದರ ಪರಿಣಾಮ ಇದೇ ಮೊದಲ ಬಾರಿ ಪುದುಚೇರಿಯಲ್ಲಿ ಕಮಲ ಅರಳಿದೆ.