ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಹಿಂದೂ ದೇಗುಲ, ಫೆ.14ಕ್ಕೆ ಪ್ರಧಾನಿ ಮೋದಿ ಲೋಕಾರ್ಪಣೆ!

Jan 24, 2024, 6:16 PM IST

ಅಬುಧಾಬಿ(ಜ.24) ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಭವ್ಯ ನಾರಾಯಣಸ್ವಾಮಿ ದೇಗುಲ ಸಂಪೂರ್ಣಗೊಂಡಿದೆ. ದೇಗುಲ ನಿರ್ಮಾಣಕ್ಕೆ ಅಬುಧಾಬಿ ಸರ್ಕಾರ 17 ಏಕರೆ ಭೂಮಿ ನೀಡಿತ್ತು. 2017ರಲ್ಲಿ ಪ್ರಧಾನಿ ಮೋದಿ ಈ ದೇಗುಲಕ್ಕೆ ಶಂಕುಸ್ಥಾಪನೆ ಮಾಡಿದ್ದರು. 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ದೇಗುಲವನ್ನು ಫೆಬ್ರವರಿ 14ರಂದು ಪ್ರಧಾನಿ ಮೋದಿ ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಿದ್ದಾರೆ. ಈ ದೇಗುಲ ನಿರ್ಮಾಣದಲ್ಲಿ 50 ಸಾವಿರ ಕಾರ್ಮಿಕರು ಶ್ರಮ ವಹಿಸಿದ್ದಾರೆ.  ಈ ದೇಗುಲದ ವಿಶೇಷತೆ ಏನು? ಇಲ್ಲಿದೆ ವಿವರ.