Sep 18, 2020, 5:05 PM IST
ನವದೆಹಲಿ (ಸೆ. 18): ಪ್ರಧಾನಿ ನರೇಂದ್ರ ಮೋದಿ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಪ್ರಧಾನಿಯಾಗಿ ಇಡೀ ವಿಶ್ವದ ಗಮನವನ್ನು ಸೆಳೆದಿದ್ಧಾರೆ. ಮೋದಿ ಏನೋ ಮಾಡುತ್ತಿದ್ದಾರೆ ಎಂದರೆ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡುತ್ತದೆ. ಅಷ್ಟರ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದ್ದಾರೆ.
ಎಲ್ಲರನ್ನೂ ಭೇಟಿಯಾಗಿದ್ದೇನೆ, ನನಗೆ ಸಚಿವ ಸ್ಥಾನ ಸಿಗುತ್ತೆ ಎಂದ ಬಿಜೆಪಿ ಶಾಸಕ
ಮೋದಿ ಎಂದ ಕೂಡಲೇ ಒಂದಷ್ಟು ಕಲ್ಪನೆಗಳು ಹಾದು ಹೋಗುತ್ತದೆ. ಅಸ್ಖಲಿತ ವಾಕ್ಚಾತುರ್ಯ, ದಿವ್ಯ ತೇಜಸ್ಸು, ದೇಶಭಕ್ತಿ, ಸ್ಟೈಲ್ ಐಕಾನ್ ಹೀಗೆ... ಮೋದಿ ನಿಂತರೂ, ಕುಂತರೂ, ಮಾತಾಡಿದ್ರೂ, ವೇಷ ಭೂಷಣದಲ್ಲೂ ಹೀಗೆ ಎಲ್ಲದರಲ್ಲೂ ಒಂದೊಂದು ಸ್ಟೈಲ್! ಇವರೆಲ್ಲಿಗೆ ಹೋದ್ರೂ ಅಲ್ಲಿನ ಲೋಕಲ್ ಗೆ ತಕ್ಕಂತೆ ಹೋಗುತ್ತಾರೆ. ಕ್ಲಾಸಿಕ್ ಲುಕ್‌ನಲ್ಲಿ ಕ್ಲಾಸಿಯಾಗಿಯೇ ಕಾಣಿಸುತ್ತಾರೆ. ಹಾಗಾದರೆ ಮೋದಿಯವರ ಸ್ಟೈಲ್ ಐಕಾನ್ ಯಾರು? ಈ ವಿಡಿಯೋ ನೋಡಿದ್ರೆ ನಿಮಗೆ ಅರ್ಥವಾಗುತ್ತದೆ..!