A Raja: "ಭಾರತ ದೇಶವೇ ಅಲ್ಲ, ಅದೊಂದು ಉಪಖಂಡ" ಅಂದ ಡಿಎಂಕೆ ಲೀಡರ್..!

A Raja: "ಭಾರತ ದೇಶವೇ ಅಲ್ಲ, ಅದೊಂದು ಉಪಖಂಡ" ಅಂದ ಡಿಎಂಕೆ ಲೀಡರ್..!

Published : Mar 07, 2024, 05:56 PM IST

"ನಾವು ಶ್ರೀರಾಮನ ಶತ್ರುಗಳು" ಅಂದಿದ್ದೇಕೆ ಡಿಎಂಕೆ ನಾಯಕ ಎ.ರಾಜಾ..?
"ಸನಾತನ ಧರ್ಮವನ್ನೇ ನಿರ್ಮೂಲನೆ ಮಾಡ್ಬೇಕು" ಅಂದಿದ್ದ ಉದಯನಿಧಿ..!
ಶ್ರೀರಾಮ,ಸನಾತನ ಧರ್ಮದ ಮೇಲೆ ಡಿಎಂಕೆ ನಾಯಕರಿಗೆ ಇದೆಂಥಾ ಕೋಪ..?
 

ತಮಿಳುನಾಡಿನ ಡಿಎಂಕೆ(DMK) ಪಕ್ಷದ ನಾಯಕರಿಗೆ ಶ್ರೀರಾಮವನ್ನು ಟೀಕಿಸೋದು ಒಂದು ಚಾಳಿ. ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರಿಂದ ಹಿಡಿದು, ಅವ್ರ ಮೊಮ್ಮಗ ಉದಯನಿಧಿ ಸ್ಟಾಲಿನ್‌ವರೆಗೆ. ಡಿಎಂಕೆ ಪಕ್ಷದವರು ವಂಶಪಾರಂಪರ್ಯವಾಗಿ ರಘುರಾಮನ ಮೇಲೆ, ಸನಾತನ ಧರ್ಮದ ಮೇಲೆ ವಿಷ ಕಾರುತ್ತಾ ಬಂದಿದ್ದಾರೆ. ಈಗ ಡಿಎಂಕೆ ನಾಯಕ ಎ.ರಾಜಾ(A.Raja) ಸರದಿ. ಇವ್ರಂತೂ ಶ್ರೀರಾಮನ(Srirama) ಬಗ್ಗೆ ತಮ್ಮ ಮನಸ್ಸಿನಲ್ಲಿದ್ದ ಅಷ್ಟೂ ವಿಕಾರ, ವಿಕೃತಿಯನ್ನು ಹೊರ ಹಾಕಿದ್ದಾರೆ. ಡಿಎಂಕೆ.. ಅಂದ್ರೆ ದ್ರಾವಿಡ ಮುನೇತ್ರ ಕಳಗಂ. ದ್ರಾವಿಡ ಚಳುವಳಿಯ ನೆಲದ ಪ್ರಭಾವಿ ರಾಜಕೀಯ ಪಕ್ಷ. ತಮಿಳುನಾಡಿನಲ್ಲಿ(Tamilnadu) ಇವರದ್ದೇ ರಾಜ್ಯಭಾರ. ಈ ಪಕ್ಷದ ನಾಯಕರಿಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂದ್ರೆ ಅಲರ್ಜಿ, ಸನಾತನ ಧರ್ಮ ಅಂದ್ರೆ ಅಂತೂ ಆಗೋದೇ ಇಲ್ಲ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರೋ ಡಿಎಂಕೆ, ಭಾರತ ದೇಶವೇ ಅಲ್ಲ ಅಂದು ಬಿಟ್ಟಿದೆ. ಹೇಟ್ ಇಂಡಿಯಾ ಬ್ರಿಗೇಡ್ ಡಿಎಂಕೆ ಪಾಳೆಯದಿಂದ ಇಂತಹ ಒಂದು ಅಣಿಮುತ್ತನ್ನು ಉದುರಿಸಿರೋದು ಮಾಜಿ ಕೇಂದ್ರ ಸಚಿವ ಎ.ರಾಜಾ. ಭಾರತ(India) ಒಂದು ದೇಶವೇ ಅಲ್ಲ. ಒಂದು ರಾಷ್ಟ್ರ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ ಮತ್ತು ಒಂದು ಸಂಸ್ಕೃತಿ. ಆಗ ಮಾತ್ರ ಅದು ರಾಷ್ಟ್ರವಾಗುತ್ತದೆ.  “ಇಲ್ಲಿ ತಮಿಳು ಒಂದು ಭಾಷೆ ಮತ್ತು ರಾಷ್ಟ್ರ.  ಮಲಯಾಳಂ ಒಂದು ಭಾಷೆ, ಒಂದು ರಾಷ್ಟ್ರ ಮತ್ತು ಒಂದು ದೇಶ. ಒರಿಯಾ ಒಂದು ರಾಷ್ಟ್ರ, ಒಂದು ಭಾಷೆ ಮತ್ತು ಒಂದು ದೇಶ. ಈ ಎಲ್ಲಾ ರಾಷ್ಟ್ರಗಳು ಸೇರಿ ಭಾರತವನ್ನು ಮಾಡಿದರೆ, ಭಾರತ ದೇಶವಲ್ಲ. ಇದೊಂದು ಉಪಖಂಡ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more