ನಿಸರ್ಗ ಸೈಕ್ಲೋನ್ ಅಬ್ಬರ; ಮುಂಬೈನಲ್ಲಿ ಶುರುವಾಯ್ತು ಢವಢವ..!

Jun 3, 2020, 12:13 PM IST

ಮುಂಬೈ(ಜೂ.03): ಕೊರೋನಾ ವೈರಸ್‌ನಿಂದಾಗಿ ಮೊದಲೇ ತತ್ತರಿಸಿ ಹೋಗಿರುವ ಮಹಾರಾಷ್ಟ್ರಕ್ಕೆ ಇದೀಗ ಮತ್ತೊಂದು ಕಂಟಕ ಎದುರಾಗಿದ್ದು, ನಿಸರ್ಗ ಸೈಕ್ಲೋನ್ ಮುಂಬೈ ಮಂದಿಯ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಅರಬ್ಬೀ ಸಮುದ್ರ ತಟಕ್ಕೆ ಮಂಗಳವಾರ ಮಧ್ಯರಾತ್ರಿ ನಿಸರ್ಗ ಸೈಕ್ಲೋನ್ ಅಪ್ಪಳಿಸಿದೆ. ಗಂಟೆಗೆ ಬರೋಬ್ಬರಿ 110 ಕಿಲೋ ಮೀಟರ್ ವೇಗದಲ್ಲಿ ನಿಸರ್ಗ ಚಂಡಮಾರುತ ಬೀಸಲಾರಂಭಿಸಿದೆ. ಮಹಾರಾಷ್ಟ್ರ, ಗುಜರಾತ್ ಕರಾವಳಿ ಪ್ರದೇಶದಲ್ಲಿ ಢವಢವ ಶುರುವಾಗಿದೆ.

ಸೇವೆಯಿಂದ ASI ನಿವೃತ್ತಿ: ಕುದುರೆ ಮೆರವಣಿಗೆ ಮೂಲಕ ಬೀಳ್ಕೊಟ್ಟ ಸಿಬ್ಬಂದಿ

ಈ ಎರಡು ರಾಜ್ಯಗಳಲ್ಲಿ 33 NDRF ತಂಡಗಳು ಕಾರ್ಯೋನ್ಮುಖವಾಗಿವೆ. ಈಗಾಗಲೇ ಮುಂಬೈ, ಥಾಣೆ, ಪಾಲ್‌ಘರ್‌ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕ, ಕೇರಳ, ಗೋವಾದಲ್ಲೂ ಚಂಡಮಾರುತದ ಆತಂಕ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.