ಕೊರೋನಾ ಅಬ್ಬರ: ಛತ್ತೀಸ್‌ಗಢದ ಆಸ್ಪತ್ರೆ, ಸ್ಮಶಾನದ ಹೊರಗೆ ಹೆಣಗಳ ರಾಶಿ!

Apr 13, 2021, 3:47 PM IST

ರಾಯ್ಪುರ(ಏ.13): ಕೊರೋನಾ ಹೊಡೆತಕ್ಕೆ ಛತ್ತೀಸ್‌ಗಢದ ರಾಯ್ಪುರ ತತ್ತರಿಸಿದೆ. ಸ್ಮಶಾನದ ಎದುರು ಹೆಣಗಳ ರಾಶಿ ಕಂಡು ಬರುತ್ತಿದ್ದು, ಕೊರೋನಾ ಎರಡನೇ ಅಲೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಅತ್ತ ಆಸ್ಪತ್ರೆಯಲ್ಲಿ ಹೆಣಗಳಿಡಲು ಸ್ಥಳವಿಲ್ಲ, ಇತ್ತ ಶವಾಗಾರಗಳೂ ತುಂಬಿ ತುಳುಕುತ್ತಿವೆ. ಇದರ ಪರಿಣಾಮ ಎಂಬಂತೆ ಸ್ಮಶಾನದೆದುರು ಹೆಣಗಳ ರಾಶಿಯೇ ಕಂಡು ಬಂದಿದೆ.

ಇನ್ನು ಛತ್ತಿಸ್‌ಗಢದ ಹದಿನೇಳು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಿರುವಾಗ ಸೂಕ್ತ ವ್ಯವಸ್ಥೆ ಇಲ್ಲದೇ ಆಸ್ಪತ್ರೆ ಸಿಬ್ಬಂದಿಗಳೂ ಪರದಾಡುತ್ತಿದ್ದಾರೆ.