ಕೃಷಿ ಕಾನೂನು: ಶರದ್ ಪವಾರ್ ನಿರ್ಧಾರ ಸ್ವಾಗತಿಸಿದ ಕೇಂದ್ರ ಸಚಿವ ತೋಮರ್!

Jul 2, 2021, 3:35 PM IST

ನವದೆಹಲಿ(ಜು.02): ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನಿನ ವಿರುದ್ಧ 2020ರ ನವೆಂಬರ್ 26ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಆರಂಭದಿಂದಲೂ ಸರ್ಕಾರದ ವಿರುದ್ಧ ಕಿಡಿ ಕಾರುತ್ತಲೇ ಇದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಏಕಾಏಕಿ ಮೃದುವಾಗಿದ್ದಾರೆ. ಪವಾರ್‌ರವರ ಈ ನಿರ್ಧಾರವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ವಾಗತಿಸಿದ್ದಾರೆ. ಕೃಷಿ ಕಾನೂನಿನ ಬಗ್ಗೆ ಮಾತನಾಡಿದ್ದ ಪವಾರ್‌, ಇದನ್ನು ರದ್ದುಪಡಿಸುವ ಅಗತ್ಯವಿಲ್ಲ. ತಿದ್ದುಪಡಿ ಮಾಡದರೆ ಸಾಕು ಎಂದಿದ್ದರು. 

ಈ ವಿಚಾರವಾಗಿ ಎಎನ್ಐಗೆ ಪ್ರತಿಕ್ರಿಯಿಸಿರುವ ಸಚಿವ ತೋಮರ್ 'ನಾನು ಅವರ ನಿಲುವನ್ನು ಸ್ವಾಗತಿಸುತ್ತೇನೆ. ಅವರ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪುತ್ತದೆ. ಈ ಬಗ್ಗೆ ನಾವು ಕಿಸಾನ್ ಯೂನಿಯನ್ ಜೊತೆ 11 ಬಾರಿ ಮಾತನಾಡಿದ್ದೇವೆ. ಕೇಂದ್ರ ಸರ್ಕಾರವು ಸಂವಾದದ ಮೂಲಕ ಶೀಘ್ರದಲ್ಲೇ ಪರಿಹಾರವನ್ನು ಕಂಡುಕೊಳ್ಳಲು ಬಯಸಿದೆ, ಇದರಿಂದಾಗಿ ಎಲ್ಲಾ ರೈತರು ಆಂದೋಲನವನ್ನು ಕೊನೆಗೊಳಿಸುತ್ತಾರೆ ಮತ್ತು ಮನೆಗೆ ಹೋಗಿ ಸರಿಯಾಗಿ ಕೃಷಿ ಮಾಡುತ್ತಾರೆ ಎಂದಿದ್ದಾರೆ.