
ಬೆಂಗಳೂರು(ಸೆ.21): ಆಂಧ್ರಪ್ರದೇಶದ ತಿರುಪತಿಯಲ್ಲಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ವಿಚಾರ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಬೆನ್ನಲ್ಲೇ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಎಲ್ಲ ಸೇವೆಗಳಿಗೂ ನಂದಿನಿ ತುಪ್ಪವನ್ನೇ ಬಳಸುವಂತೆ ಸೂಚಿಸಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಎಲ್ಲಾ 34,500ಕ್ಕೂ ಹೆಚ್ಚು ದೇವಾಲಯಗಳಲ್ಲೂ ಮಂಗಳಾರತಿಗೆ ಬೇಳಗುವ ದೀಪದಿಂದ ಹಿಡಿದು ಪ್ರಸಾದ, ದಾಸೋಹ ತಯಾರಿಕೆವರೆಗಿನ ಎಲ್ಲಾ ಸೇವೆಗಳಿಗೂ ನಂದಿನಿ ತುಪ್ಪವನ್ನು ಮಾತ್ರವೇ ಬಳಸಬೇಕೆಂದು ಸರ್ಕಾರ ಶುಕ್ರವಾರ ಸೂಚನೆ ನೀಡಿದೆ.
ಉದ್ಭವವಾಯ್ತು ತಿಮ್ಮಪ್ಪನ ಪ್ರಸಾದದ ಪಾವಿತ್ರ್ಯತೆಯ ಪ್ರಶ್ನೆ? ಲಡ್ಡುವಿನಲ್ಲಿ ಬಳಸುವ ಪದಾರ್ಥಗಳೇನು?
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖಾ ಆಯುಕ್ತರು, ಇಲಾಖಾ ವ್ಯಾಪ್ತಿಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ದೀಪಗಳಿಗೆ, ವಿವಿಧ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸಬೇಕು. ದೇವಾಲಯಗಳಲ್ಲಿ ತಯಾರಿಸುವ ಎಲ್ಲಾ ಪ್ರಸಾದ, ದಾಸೋಹದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ಎ, ಬಿ ಮತ್ತು ಸಿ ವರ್ಗದ ಒಟ್ಟು 34,563 ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುತ್ತವೆ. ಇದರಲ್ಲಿ ಎ ವರ್ಗದಲ್ಲಿ ಬರುವ ವಾರ್ಷಿಕ 25 ಲಕ್ಷ ರು. ಗಳಿಗೂ ಹೆಚ್ಚಿನ ವರದಮಾನವಿರುವ 205 ದೇವಾಲಯಗಳು, ಬಿ ವರ್ಗಕ್ಕೆ ಸೇರಿದ ಐದು ಲಕ್ಷದಿಂದ 25 ಲಕ್ಷ ರು.ಗಿಂತ ಕಡಿಮೆ ವರಮಾನವಿರುವ 193 ದೇವಾಲಯಗಳು ಮತ್ತು ಸಿ ವರ್ಗದಕ್ಕೆ ಒಳಪಟ್ಟ ವರಮಾನ 5 ಲಕ್ಷ ರು.ಗಿಂತ ಕಡಿಮೆ ಇರುವ 34,165 ದೇವಾಲಯಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ