ಭಾರತದ ಆಯುರ್ವೇದ ಚಿಕಿತ್ಸೆಗೆ ಮಾರು ಹೋದ ಕೀನ್ಯಾ ಮಾಜಿ ಪ್ರಧಾನಿ

Feb 20, 2022, 11:25 AM IST

ನವದೆಹಲಿ(ಫೆ.20): ಭಾರತದ ಆಯುರ್ವೇದಾ ಚಿಕಿತ್ಸೆ (India Ayurveda Treatmentವಿಶ್ವದಲ್ಲೇ ಜನಪ್ರಿಯವಾಗಿದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನೈಸರ್ಗಿಕ ಹಾಗೂ ಸಾಂಪ್ರಾದಾಯಿಕ ಔಷಧಿಗಳ ಮೂಲಕ ನೀಡುವ ಚಿಕಿತ್ಸೆಗೆ ಇದೀಗ ವಿಶ್ವದೆಲ್ಲೆಡೆ ಬೇಡಿಕೆ ಹೆಚ್ಚಾಗುತ್ತಿದೆ. ಆಯುರ್ವೇದಾ ಚಿಕಿತ್ಸೆಯ ಮಹತ್ವವನ್ನು ಖುದ್ದು ಅನುಭವಿಸಿದ ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ(Kenya PM Raila Odinga) ಇದೀಗ ಪ್ರಧಾನಿ ನರೇಂದ್ರ ಮೋದಿ ಬಳಿ ವಿಶೇಷ ಮನವಿ ಮಾಡಿದ್ದಾರೆ. ಭಾರತದ ಸಾಂಪ್ರಾದಾಯಿಕ ಆಯುರ್ವೇದಾ ಚಿಕಿತ್ಸೆಯನ್ನು ಆಫ್ರಿಕಾ ಸೇರಿದಂತೆ ವಿಶ್ವದಲ್ಲಿ ಆರಂಭಿಸಲು ಮನವಿ ಮಾಡಿದ್ದಾರೆ.

ಭಾರತದ ಆಯುರ್ವೇದಾ ಚಿಕಿತ್ಸಾ ಪದ್ದತಿ ಕುರಿತು ದಶಕಗಳ ಹಿಂದಿನಿಂದಲೇ ರೈಲಾ ಒಡಿಂಗಾ ಆಸಕ್ತಿ ಹೊಂದಿದ್ದಾರೆ.  ಇದೀಗ ಸ್ವತಃ ರೈಲಾ ಕುಟುಂಬ ಭಾರತದ ಆಯುರ್ವೇದಾ ಚಿಕಿತ್ಸೆಯ ಫಲ ಕಂಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆಯುರ್ವೇದಾ ಶಕ್ತಿಯಿಂದ ನನ್ನ ಮಗಳು ಮರಳಿ ದೃಷ್ಟಿ ಪಡೆದಿದ್ದಾಳೆ. ಈ ಅಮೂಲ್ಯ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ(Africa) ಆರಂಭಿಸಬೇಕು. ಇಲ್ಲಿನ ಔಷದಿ ಸಸ್ಯಗಳನ್ನು ಬೆಳೆಯಲು ಪೂರಕ ವಾತಾವರಣವಿದೆ. ಈ ಮೂಲಕ ವಿಶ್ವದ ಆರೋಗ್ಯ ಸಮಸ್ಯೆಗೆ ಭಾರತದ ಆಯುರ್ವೇದಾ ಚಿಕಿತ್ಸೆ ಮೂಲಕ ಶಾಶ್ವತ ಪರಿಹಾರ ನೀಡಬೇಕು ಎಂದು ರೈಲಾ ಒಡಿಂಗಾ ಮೋದಿ ಭೇಟಿಯಲ್ಲಿ ಮನವಿ ಮಾಡದ್ದಾರೆ.