Jul 15, 2022, 12:38 PM IST
ಗ್ರಹಗಳು ವೃತ್ತಿಜೀವನವನ್ನು ಪ್ರತಿನಿಧಿಸುತ್ತವೆ. ಒಂದೊಂದು ಗ್ರಹ ಒಂದೊಂದು ಕ್ಷೇತ್ರದ ಮೇಲೆ ಪ್ರಾಬಲ್ಯ ಹೊಂದಿರುತ್ತದೆ. ಜಾತಕದಲ್ಲಿ ಶುಕ್ರ ಕರ್ಮ ಸ್ಥಾನದಲ್ಲಿ ಬಲಿಷ್ಠನಾಗಿದ್ದರೆ ಆಗ ಶುಕ್ರನಿಗೆ ಸಂಬಂಧಿಸಿದ, ಆತನ ಪ್ರಾಬಲ್ಯ ಇರುವ ವೃತ್ತಿಗಳ ಆಯ್ಕೆ ಮಾಡಬೇಕು. ಆಗ ವೃತ್ತಿಯಲ್ಲಿ ಹೆಚ್ಚು ಯಶಸ್ಸು, ಹಣ ಪಡೆಯಲು ಸಾಧ್ಯ.
ಶುಕ್ರನು ಆಭರಣಗಳು, ಮದುವೆ, ಸ್ನೇಹಿತರು, ಹೂಮಾಲೆಗಳು, ಯುವತಿಯರು, ಗೋಮಯ, ಕಲಿಕೆ, ಸಹಬಾಳ್ವೆ ಮತ್ತು ಬೆಳ್ಳಿಯ ಮೇಲೆ ಆಳ್ವಿಕೆ ನಡೆಸುತ್ತಾನೆ. ಜೊತೆಗೆ ಆತ ನೀರಿಗೆ ಸಂಬಂಧಿಸಿದ ಗ್ರಹ. ಹಾಗಿದ್ದರೆ ಶುಕ್ರನಿಗೆ ಸಂಬಂಧಿಸಿದ ವೃತ್ತಿಗಳು ಯಾವೆಲ್ಲ ಗೊತ್ತಾ?
ತುಲಾ ರಾಶಿಗೆ ಯಾವಾಗ ಧನಯೋಗ? ಕೈಲಿ ಹಣ ನಿಲ್ಲುತ್ತಿಲ್ಲವೆಂದರೆ ನೀವು ಮಾಡಬೇಕಾದ್ದೇನು?
ಆಭರಣ ವ್ಯಾಪಾರ, ಕಾಸ್ಮೆಟಿಕ್ಸ್, ಅಲಂಕಾರಿಕ ವಸ್ತುಗಳ ಮಳಿಗೆ, ವಸ್ತ್ರಗಳ ವ್ಯಾಪಾರ ಶುಕ್ರ ಬಲವಿದ್ದವರಿಗೆ ಯಶಸ್ಸನ್ನು ತಂದುಕೊಡುತ್ತದೆ. ಇದಲ್ಲದೆ, ಹೈನುಗಾರಿಕೆ, ಸಂಗೀತ, ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಗಳು ಲಾಭಕಾರಿಯಾಗಲಿವೆ. ಸ್ತ್ರೀಯರಿಗೆ ಸಂಬಂಧಿಸಿದ ಹಾಸ್ಟೆಲ್‌ಗಳು, ನೀರಿಗೆ ಸಂಬಂಧಿಸಿದಂತೆ ಶರಬತ್‌ಗಳು, ಪಾನೀಯಗಳು, ಸೋಡಾ ನೀರು, ಬಣ್ಣಗಳು, ನೌಕಾಪಡೆ, ನೀರು ಸರಬರಾಜು ಮುಂತಾದ ದ್ರವಗಳೊಂದಿಗೆ ಸಂಪರ್ಕ ಹೊಂದಿರುವ ವೃತ್ತಿಗಳು, ಸುಗಂಧ ದ್ರವ್ಯಗಳು ಇತ್ಯಾದಿಗೆ ಸಂಬಂಧಿಸಿದ ವೃತ್ತಿಗಳಿಗೆ ಶುಕ್ರ ಬಲ ತಂದುಕೊಡುತ್ತಾನೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.