Sep 21, 2020, 1:18 PM IST
ತ್ರಿಪುರಾಸುರನ ಸಂಹಾರದ ಬಳಿಕ ಶಿವ ಕೋಪಿಸಿಕೊಂಡು ಹೊರಟು ಹೋಗುತ್ತಾನೆ. ಶಿವನ ಕೋಪವನ್ನು ನೋಡಿ ಪಾರ್ವತಿಗೆ ಬೇಸರವಾಗುತ್ತದೆ. ಹೇಗಾದರೂ ಮಾಡಿ ಪತಿಯ ಕೋಪವನ್ನು ತಣ್ಣಗಾಗಿಸಿ, ಪತಿಯನ್ನು ಸೇರಬೇಕೆಂದು ಅಂದುಕೊಳ್ಳುತ್ತಾಳೆ. ಆಗ ತಂದೆ ಹಿಮವಂತನ ಬಳಿ ಸಲಹೆ ಕೇಳುತ್ತಾಳೆ.
ಸಂಕಷ್ಟಹರ ಗಣಪತಿ ಸ್ತೋತ್ರವನ್ನು ಯಾಕಾಗಿ ಪಠಿಸಬೇಕು? ಇದರ ಫಲವೇನು?
ಆಗ ಹಿಮವಂತ 'ವರದ ಗಣಪತಿ ವ್ರತವನ್ನು ಆಚರಿಸಿ. ವ್ರತದ ಬಳಿಕ 21 ಬ್ರಾಹ್ಮಣರಿಗೆ ಊಟ ಹಾಕು. ಅನ್ನದಾನ ಮಾಡು. ಗಣಪತಿ ದೇವ ನಿನ್ನ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ' ಎನ್ನುತ್ತಾರೆ. ತಂದೆಯ ಮಾತಿನಂತೆ ಪಾರ್ವತಿ ವರದ ಗಣಪತಿ ವ್ರತ ಮಾಡುತ್ತಾಳೆ. ಶಿವನ ಕೋಪವೂ ತಣ್ಣಗಾಗುತ್ತದೆ. ವರದ ಗಣಪತಿ ವ್ರತಕ್ಕೆ ಬಹಳ ಮಹತ್ವವಿದೆ. ಯಾರು ಇದನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ಈಡೇರುತ್ತದೆ. ಈ ಬಗ್ಗೆ ಪುರಾಣ ಏನು ಹೇಳುತ್ತದೆ ಕೇಳೋಣ ಬನ್ನಿ..!