ಭಕ್ತರ ಪ್ರಶ್ನೆಗಳಿಗೆ ಸ್ಥಳದಲ್ಲೇ ಉತ್ತರಿಸುತ್ತೆ ಹಾಲು ರಾಮೇಶ್ವರ ದೇವಾಲಯದ ಚಮತ್ಕಾರಿ ಕೊಳ!

ಭಕ್ತರ ಪ್ರಶ್ನೆಗಳಿಗೆ ಸ್ಥಳದಲ್ಲೇ ಉತ್ತರಿಸುತ್ತೆ ಹಾಲು ರಾಮೇಶ್ವರ ದೇವಾಲಯದ ಚಮತ್ಕಾರಿ ಕೊಳ!

Published : Mar 06, 2022, 02:42 PM ISTUpdated : Mar 06, 2022, 02:48 PM IST

ಹೊಸದುರ್ಗ ತಾಲೂಕಿನಲ್ಲಿರುವ ಹಾಲು ರಾಮೇಶ್ವರ ದೇವಾಲಯವು ಅಪಾರ ಭಕ್ತಗಣವನ್ನು ಹೊಂದಿದೆ. ಇಲ್ಲಿರುವ ಗಂಗಮ್ಮನ ಕೊಳದ ಪವಾಡ ಒಂದೆರಡಲ್ಲ..

ಈ ದೇವಾಲಯದಲ್ಲಿರುವ ಕೊಳವೊಂದು ಎಂಥ ಚಮತ್ಕಾರಿಯಾಗಿದೆ ಎಂಬುದನ್ನು ಕೇಳಿದರೆ ಅಚ್ಚರಿಯಾಗಬಹುದು. ಭಕ್ತರ ಪ್ರಶ್ನೆಗಳಿಗೆ ಸ್ಥಳದಲ್ಲೇ ಉತ್ತರಿಸುತ್ತೆ ಇಲ್ಲಿನ ವಿಸ್ಮಯ ಕೊಳ. 
ಹೌದು, ಚಿತ್ರದುರ್ಗ(Chitradurge) ಜಿಲ್ಲೆಯ ಹೊಸದುರ್ಗ ತಾಲೂಕಿನ ಹಾಲು ರಾಮೇಶ್ವರ(halu rameshwara temple) ದೇವಾಲಯಕ್ಕೆ ಅಪಾರ ಭಕ್ತಗಣವಿದೆ. ಶಿವರಾತ್ರಿಗೆ ಇಲ್ಲಿ ಸೇರುವ ಜನಸ್ತೋಮವೇ ಅದಕ್ಕೆ ಸಾಕ್ಷಿ. ಬಹಳಷ್ಟು ಸಂಖ್ಯೆಯಲ್ಲಿ ಸ್ವಾಮೀಜಿಗಳು, ರಾಜಕಾರಣಿಗಳು ಶಿವರಾತ್ರಿಯಂದು ಸೇರುತ್ತಾರೆ. ಅಷ್ಟೇ ಅಲ್ಲ, ರಾಜ್ಯದೆಲ್ಲೆಡೆಯಿಂದ, ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹೊಸದುರ್ಗದಿಂದ 12 ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದೆ.

ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಕೈಯಿಂದ ಉದ್ಭವಮೂರ್ತಿಯಾಗಿದ್ದ ಈ ಲಿಂಗ ಪ್ರತಿಷ್ಠಾಪನೆಯಾಗಿದೆ ಎಂಬ ನಂಬಿಕೆ ಇದೆ. ಇಲ್ಲಿರುವ ಕೊಳವೊಂದು ಬಹಳಷ್ಟು ಪವಾಡಗಳನ್ನು ನಡೆಸುತ್ತಾ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತದೆ. ಅದೇ ಗಂಗಮ್ಮನ ಕೊಳ. 

Lucky Parents: ಈ ರಾಶಿಯ ಮಕ್ಕಳನ್ನು ಹೊಂದಿರೋರು ನಿಜವಾಗಿಯೂ ಲಕ್ಕಿ!

ಶ್ರೀ ರಾಮನ ಬಾಣದಿಂದ ಇಲ್ಲಿ ನೀರು ಚಿಮ್ಮಿ ಕೊಳವಾಗಿದೆ ಎಂಬ ನಂಬಿಕೆ ಇದೆ. ಎಂಥದೇ ಬರಗಾಲ ಬಂದು ಸುತ್ತಲಿನ ಎಲ್ಲ ಕೆರೆ, ನದಿಗಳು ಬತ್ತಿದರೂ ಈ ಕೊಳ ಬತ್ತಿದ ಉದಾಹರಣೆಯಿಲ್ಲ. ಭಕ್ತರು ಇಲ್ಲಿರುವ ಗಂಗಮ್ಮನ ಕೊಳದಲ್ಲಿ ಸ್ನಾನ ಮಾಡಿ ನಂತರ ದೇವಾಲಯಕ್ಕೆ ತೆರಳಿ ಮನಸ್ಸಿನ ಮಾತುಗಳನ್ನು ಕೇಳಿಕೊಳ್ಳುತ್ತಾರೆ. ಆಗ ಈ ಕೊಳ ಭಕ್ತರಿಗೆ ಅವರು ಕೋರಿದ್ದು ಆಗುತ್ತೋ ಇಲ್ಲವೋ ಎಂದು ಉತ್ತರಿಸುತ್ತದೆ.

Budh Gochar: ಕುಂಭ ರಾಶಿಗೆ ಬುಧನ ಪ್ರವೇಶ, ಇನ್ನು ಬದಲಾಗಲಿದೆ ಈ ರಾಶಿಗಳ ಅದೃಷ್ಟ

ಆಶ್ಚರ್ಯವಾಗಬಹುದು. ಆದರೆ, ಈ ಕೊಳದ ಪವಾಡವೇ ಅಂಥದ್ದು. ಇಲ್ಲಿ ಭಕ್ತರು ಏನಾದರೂ ಕೋರಿಕೊಂಡಾಗ ವೀಳ್ಯದೆಲೆ, ಹೂವು, ಹಣ್ಣು, ಕಾಯಿ, ನಾಣ್ಯ, ತೊಟ್ಟಿಲು, ಸಾಲಿಗ್ರಾಮದಂಥ ಶುಭವಸ್ತುಗಳು ಕೊಳದಲ್ಲಿ ತೇಲುತ್ತಾ ಬಂದರೆ ಮುಂದೆಲ್ಲ ಒಳ್ಳೆಯದಾಗುತ್ತದೆ ಎಂಬುದನ್ನು ತಿಳಿಸುತ್ತವೆ. ಅದೇ ತೆಂಗಿನ ಚೂರು, ಕಲ್ಲು, ಒಡಕು ಮಣ್ಣು ಮತ್ತಿತರೆ ಬೇಡದ ವಸ್ತುಗಳು ಮೇಲೆ ಬಂದರೆ, ಭಕ್ತರಿಗೆ ವಿಘ್ನವಿದೆ ಎಂದರ್ಥ. ಆಗ ಏನು ಮಾಡಬೇಕೆಂಬ ಸಲಹೆಗಳನ್ನು ಇಲ್ಲಿನ ಅರ್ಚಕರು ನೀಡುತ್ತಾರೆ. ಸಂತಾನ ಭಾಗ್ಯ ಆಗದ ದಂಪತಿಯು ಇಲ್ಲಿ ಹರಕೆ ಹೊತ್ತು ಸಂತಾನ ಪಡೆದ ಉದಾಹರಣೆಗಳಿವೆ. ಈ ಸಂಬಂಧ ಹೆಚ್ಚಿನ ವಿವರಕ್ಕಾಗಿ ವಿಡಿಯೋ ವೀಕ್ಷಿಸಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more