Dec 3, 2020, 8:47 AM IST
ದುರ್ಗಾದೇವಿ ವೇದ ಮಂತ್ರಗಳಿಂದ ಪರಮಾತ್ನನನ್ನು ಎಬ್ಬಿಸುತ್ತಾಳೆ. ಪರಮಾತ್ನ ಹನ್ನೆರಡುವರೆ ವರ್ಷಗಳ ಕಾಲ ಸೃಷ್ಟಿ ಕಾರ್ಯ ಮಾಡುತ್ತಾನೆ. ಬ್ರಹ್ಮಾಂಡ ಸೃಷ್ಟಿಗೆ ಬೇಕಾದ 24 ತತ್ವಗಳನ್ನು ಸೃಷ್ಟಿ ಮಾಡುತ್ತಾನೆ. ಅವ್ಯಕ್ತ, ಮಹತ್. ಅಹಂಕಾರ, ಬುದ್ದಿತತ್ವ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಮಹಾಭೂತಗಳನ್ನು ಸೃಷ್ಟಿ ಮಾಡುತ್ತಾರೆ.
ಇಂದ್ರಿಯಗಳನ್ನು ನಿಗ್ರಹ ಮಾಡುವುದು ಹೇಗೆ? ಮನೋನಿಗ್ರಹ ಹೊಂದುವುದು ಹೇಗೆ?
ಈ ತತ್ವಗಳಿಗೆ ಒಬ್ಬೊಬ್ಬ ದೇವತೆಯನ್ನು ಅಧಿದೇವತೆಯನ್ನಾಗಿ ಮಾಡುತ್ತಾನೆ. ಸತ್ವ ಗುಣಕ್ಕೆ ಶ್ರೀದೇವಿಯನ್ನು ಅಧಿದೇವತೆಯನ್ನಾಗಿ ಮಾಡುತ್ತಾನೆ. ಆಗ ನಮ್ಮಲ್ಲಿ ಸಾತ್ವಿಕ ಗುಣ ಹೆಚ್ಚಾಗುತ್ತದೆ. ಸ್ತ್ರೀ ಸೂಕ್ತ ಪಠನೆ, ಶ್ರೀದೇವಿಯ ಉಪಾಸನೆ ಮಾಡುವುದರಿಂದ ದೇಹದಲ್ಲಿ ಸತ್ವ ಗುಣ ಜಾಸ್ತಿಯಾಗುತ್ತದೆ.