Aug 26, 2023, 12:29 PM IST
ಧನಂಜಯ್ಗೆ ಲೈಫ್ ಕೊಟ್ಟ ಸಿನಿಮಾ ‘ಟಗರು’. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಆ ಸಿನಿಮಾದ ವರೆಗೆ ಕೇವಲ ಧನಂಜಯ್ ಆಗಿದ್ದವರು ಡಾಲಿ ಧನಂಜಯ್ ಆಗಿ ನಟ ರಾಕ್ಷಸನಾಗಿ ಬದಲಾದರು. ಶಿವಣ್ಣನ ಕಾಂಬಿನೇಷನ್ನ ಆ ಸಿನಿಮಾ ಕನ್ನಡದ ಮಾಸ್ ಕ್ಲಾಸಿಕ್ಗಳಲ್ಲಿ ಒಂದಾಗಿದೆ. ಇದೀಗ ಡಾಲಿ ಧನಂಜಯ್ ಕನ್ನಡದ ಭರವಸೆಯ ನಾಯಕ ನಟ. ಮತ್ತೊಮ್ಮೆ ಮಗದೊಮ್ಮೆ ಶಿವಣ್ಣ ಹಾಗೂ ಡಾಲಿಯನ್ನು ಒಟ್ಟಿಗೆ ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಮತ್ತೆ ಶಿವಣ್ಣನ ಜೊತೆ ನಟಿಸ್ತಾರಾ ಡಾಲಿ? ಡೈರೆಕ್ಟರ್ ಸೂರಿ ಏನಂದ್ರು ಗೊತ್ತಾಗಬೇಕಾದರೆ ಈ ವಿಡಿಯೋವನ್ನು ವೀಕ್ಷಿಸಿ.