
ಚೆನ್ನೈ : ‘ರಾಜಕೀಯ ಎಂಬುದು ಸಿನಿಮಾ ಅಖಾಡವಲ್ಲ, ಅದು ಯುದ್ಧದ ಅಖಾಡ. ರಾಜಕೀಯಕ್ಕೆ ನಾನು ಹೊಸಬನಾದರೂ ಮುಗ್ಧ ಬಾಲಕನಲ್ಲ. ನಾನು ಹಾವಿನ ಜತೆ ಆಟವಾಡುವ ಬಾಲಕ’ ಎಂದಿರುವ ಖ್ಯಾತ ತಮಿಳು ನಟ ಹಾಗೂ ನೂತನ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್, ‘ದ್ರಾವಿಡ ಹೆಸರಿನಲ್ಲಿ ಡಿಎಂಕೆ ರಾಜ್ಯದ ಲೂಟಿ ಮಾಡುತ್ತಿದೆ. ಈ ರಾಜ್ಯದ ದೊಡ್ಡ ಶತ್ರುವೇ ಡಿಎಂಕೆ’ ಎಂದು ವಾಗ್ದಾಳಿ ನಡೆಸಿದ್ದಾರೆ.ಅಲ್ಲದೆ, ‘ನೇರ ಆಡಳಿತಕ್ಕೆ ಅಡ್ಡಿ ಆಗಿರುವ ರಾಜ್ಯಪಾಲ ಎಂಬ ಹುದ್ದೆಯನ್ನೇ ತೆಗೆದುಹಾಕಬೇಕು’ ಎಂದು ಆಗ್ರಹಿಸಿದ್ದಾರೆ.
ಪಕ್ಷ ಸ್ಥಾಪನೆ ಬಳಿಕ ಇದೇ ಮೊದಲ ಬಾರಿ ವಿಲ್ಲುಪುರಂನಲ್ಲಿ ಪಕ್ಷದ ಮೊದಲ ರಾಜ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಪ್ರತ್ಯೇಕ ದ್ರಾವಿಡವಾದ ಮತ್ತು ತಮಿಳುವಾದದ ಪ್ರತಿಪಾದಕನಲ್ಲ. ಇವೆರಡೂ ನಮ್ಮ ನೆಲದ 2 ಕಣ್ಣುಗಳು. ಸಾಮಾಜಿಕ ನ್ಯಾಯದ ಪರ ನಾವು ಕೆಲಸ ಮಾಡಬೇಕು’ ಎಂದರು.
ಸನಾತನ ಧರ್ಮ ಹೇಳಿಕೆಗೆ ಕ್ಷಮೆ ಕೇಳಲ್ಲ ಎಂದ ಉದಯನಿಧಿ; ಇತ್ತ ಹಿಂದುತ್ವ ಪದ ತೆಗೆಯಲು ಸಲ್ಲಿಸಿದ್ದ ಅರ್ಜಿ ವಜಾ
‘ಒಂದು ಕುಟುಂಬವು ಭೂಗತ ಚಟುವಟಿಕೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದೆ. ಇದು ದ್ರಾವಿಡ ಮಾದರಿ ಆಡಳಿತದ ನೆಪದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ’ ಎಂದು ಆರೋಪಿಸಿದ ಅವರು, ‘ಇಂಥದ್ದಕ್ಕೆ ಅಂತ್ಯ ಹಾಡಲೆಂದೇ ನಾನು ನಟನೆ ಬಿಟ್ಟು ರಾಜಕೀಯಕ್ಕೆ ಬಂದಿದ್ದೇನೆ. ಪೆರಿಯಾರ್ ಹಾಗೂ ಕಾಮರಾಜ್ ತತ್ವ ಅಳವಡಿಸಿಕೊಂಡ ಪಕ್ಷ ನಮ್ಮದು’ ಎಂದರು.
ಇದೇ ವೇಳೆ, ‘ರಾಜ್ಯದಲ್ಲಿ ಎಲ್ಲ ಕೋರ್ಟುಗಳಲ್ಲೂ ಅಧಿಕೃತವಾಗಿ ತಮಿಳು ಬಳಕೆ ಆಗಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ