Sep 26, 2020, 10:51 AM IST
ಬೆಂಗಳೂರು (ಸೆ. 26): ಕನ್ನಡದ ಮೆಲೋಡಿ ಹಾಡುಗಳ ಮೂಲಕ ಮನೆಮಾತಾದವರು ಎಸ್‌ಪಿಬಿ. ಹೆಸರಿಗಷ್ಟೇ ಹೊರಗಿನವರು. ಆದರೆ ಕನ್ನಡವೇ ಅವರ ಉಸಿರಾಗಿತ್ತು. ಇದೀಗ ಬಾಲಸುಬ್ರಹ್ಮಣ್ಯಂ ಬರೀ ನೆನಪು ಮಾತ್ರ. ಇಂದು ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ನೆಚ್ಚಿನ ಗಾಯಕನಿಗೆ ನಮನ ಸಲ್ಲಿಸುತ್ತಿದ್ದಾರೆ. ಭಾವುಕರಾಗುತ್ತಿದ್ದಾರೆ.