ಗಣೇಶ್‌ ತ್ರಿಬಲ್ ರೈಡಿಂಗ್‌ನಲ್ಲಿ ರಮ್ಯಾ, ರಕ್ಷಿತಾ, ರಾಧಿಕಾ: ಇದೇ ವಾರ ತೆರೆಗೆ

Nov 23, 2022, 12:58 PM IST

ಅಂದೊಂದು ಕಾಲವಿತ್ತು. ಆಗ ಸ್ಯಾಂಡಲ್‌ವುಡ್‌ನಲ್ಲಿ ‘ರ’ ಹೆಸರಿನ ನಟಿಯರದ್ದೇ ದರ್ಬಾರ್‌ ಆಗಿತ್ತು. ಅವರೇ ರಮ್ಯಾ, ರಕ್ಷಿತಾ, ರಾಧಿಕಾ.. ಈ ಮೂವರು ಹೀರೋಯಿನ್ಸ್ ಯಾವ್ದೇ ಸಿನಿಮಾದಲ್ಲಿ ನಟಿಸಿದ್ರು ಆ ಸಿನಿಮಾ ಬಿಗ್ ಸಕ್ಸಸ್ ಕಟ್ಟಿಟ್ಟ ಬುತ್ತಿ. ಇದೀಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ‘ತ್ರಿಬಲ್‌ ರೈಡಿಂಗ್‌’ ಸಿನಿಮಾದಲ್ಲೂ ರಮ್ಯಾ, ರಕ್ಷಿತಾ, ರಾಧಿಕಾ ಮೋಡಿ ಮಾಡಲಿದ್ದಾರೆ. ಅರೆ ಗೋಲ್ಡನ್ ಸ್ಟಾರ್ ಗಣೇಶ್ರ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ರಮ್ಯಾ, ರಕ್ಷಿತಾ, ರಾಧಿಕಾ ಅಭಿನಯಿಸಿದ್ದಾರಾ ಅಂತ ಆಶ್ಚರ್ಯ ಪಡ್ಬೇಡಿ. ಈ ಸಿನಿಮಾದಲ್ಲಿ ಗಣಿಗೆ ಮೂರು ಜನ ಹೀರೋಯಿನ್ಸ್. ಒಬ್ರು ಮೇಘಾ ಶೆಟ್ಟಿ, ಮತ್ತೊಬ್ರು ಅದಿತಿ ಪ್ರಭುದೇವ, ಇನ್ನೊಬ್ರು ರಚನಾ ಇಂದರ್.. ಈ ಸಿನಿಮಾದಲ್ಲಿ ಈ ಮೂವರು ನಟಿಯರ ಹೆಸರು ರಮ್ಯಾ, ರಕ್ಷಿತಾ, ಮತ್ತು ರಾಧಿಕಾ ಅಂತೆ. ನಿರ್ದೇಶಕ ಮಹೇಶ್ ಗೌಡ ರೊಮ್ಯಾಂಟಿಕ್ ಕಾಮಿಡಿ ಫನ್ ಇರೋ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ರಮ್ಯಾ, ರಕ್ಷಿತಾ, ರಾಧಿಕಾರನ್ನ ಕರೆತರಬೇಕು ಅಂತ ಮೂರು ಜನ ಹೀರೋಯಿನ್ಸ್ಗೆ ಆ ಹೆಸರುಗಳನ್ನೇ ಇಟ್ಟಿದ್ದಾರಂತೆ. ಹೀಗಾಗಿ ತ್ರಿಬಲ್ ರೈಡಿಂಗ್‌ನಲ್ಲಿ ಮೂವರು ನಾಯಕಿಯರಾದ ರಚನಾ ಇಂದರ್‌, ಮೇಘಾ ಶೆಟ್ಟಿ, ಅದಿತಿ ಪ್ರಭುದೇವ ತೆರೆಯ ಮೇಲೆ ರಮ್ಯಾ, ರಕ್ಷಿತಾ, ರಾಧಿಕಾ ಹೆಸರಿನಲ್ಲಿ ಮಿಂಚಲಿದ್ದಾರೆ. ಇದೇ ವಾರ ತ್ರಿಬಲ್ ರೈಡಿಂಗ್ ಸಿನಿಮಾ ರಿಲೀಸ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment