Apr 22, 2019, 3:53 PM IST
ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಗೆ ಒಂದು ರಾತ್ರಿಯಷ್ಟೇ ಬಾಕಿಯಿದೆ. ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪಗೆ ಶಾಕ್ ಸಿಕ್ಕಿದೆ. ಉಗ್ರಪ್ಪ ಆಪ್ತ ಹಾಗೂ ಹಣಕಾಸಿನ ನೆರವು ನೀಡುವ ನಾಯಕರೊಬ್ಬರು ಪಕ್ಷದಿಂದ ಮುನಿಸಿಕೊಂಡು ದೂರ ನಿಂತಿದ್ದಾರೆ. ವಿಧಾನ ಪರಿಷತ್ತಿನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆ ನಾಯಕನ ಮನವೊಲಿಸಲು ಸಿದ್ದರಾಮಯ್ಯ ಯತ್ನಿಸಿದರೂ ಪ್ರಯೋಜನವಾಗಿಲ್ಲ.