ಕೋವಿಡ್‌ನಿಂದ ಶಿಕ್ಷಕರ ಸಾವು: ಶಿಕ್ಷಣ ಸಚಿವರೇ ದಯವಿಟ್ಟು ಶಿಕ್ಷಕರ ಅಳಲನ್ನು ಕೇಳಿ

Oct 9, 2020, 2:54 PM IST

ಬೆಂಗಳೂರು (ಅ. 09): ವಿದ್ಯಾಗಮ ಯೋಜನೆ ಆರಂಭವಾದ ಬಳಿಕ ಶಿಕ್ಷಕರಲ್ಲಿ ಸೋಂಕಿನ ಪ್ರಮಾಣ, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 110 ಶಿಕ್ಷಕರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 57 ಶಿಕ್ಷಕರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರೆ, ಕೊಪ್ಪಳದಲ್ಲಿ 12 ಶಿಕ್ಷಕರು ಬಲಿಯಾಗಿದ್ದಾರೆ. ಬಾಗಲಕೋಟೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ.  ನಿಜಕ್ಕೂ ಇದು ಆಘಾತಕಾರಿ ಬೆಳವಣಿಗೆ. 

ಆಕಾಶವೇನೂ ಬಿದ್ದೋಗಲ್ರೀ, ಎಲ್ಲಾ ಮಕ್ಕಳನ್ನು ಪಾಸ್ ಮಾಡ್ರಿ; ಸಿದ್ದರಾಮಯ್ಯ ಸಲಹೆ

ಅ. 15 ರಿಂದ ಶಾಲೆಯನ್ನು ಆರಂಭಿಸಬೇಕಾ? ಬೇಡವಾ? ಎನ್ನುವುದರ ಬಗ್ಗೆ ಚರ್ಚೆ ಶುರುವಾದ ಬೆನ್ನಲ್ಲೇ ಈ ಅಂಕಿಅಂಶಗಳನ್ನು ನೋಡಿದರೆ ಪೋಷಕರಿಗೆ ಭಯ ಶುರುವಾಗೋದು ಸಹಜ. ಶಿಕ್ಷಕರು ಹಾಗೂ ಮಕ್ಕಳು ಇಬ್ಬರನ್ನೂ ಅಪಾಯಕ್ಕೆ ದೂಡಿದಂತಾಗುತ್ತದೆ. ರಾಜಕೀಯ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಚಿವರಾದ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.