India General Elections 2024: 3ನೇ ಹಂತಕ್ಕೆ ತೆರೆ, ರಾಜ್ಯದಲ್ಲಿ ಶೇ.67.76 ದೇಶದಲ್ಲಿ ಶೇ. 61.45 ಮತ

ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ಲೋಕಸಭಾ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, ಚುನಾವಣಾ ಅಧಿಕಾರಿಗಲು ರಾಜಕೀಯ ನಾಯಕರ ಭವಿಷ್ಯವನ್ನು ಭದ್ರವಾಗಿ ಸೀಲ್ ಮಾಡಿ, ಮಸ್ಟರಿಂಗ್ ಕೇಂದ್ರಕ್ಕೆ ಮರಳುತ್ತಿದ್ದಾರೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳ 227 ಅಭ್ಯರ್ಥಿಗಳ ಭವಿಷ್ಯಕ್ಕೆ ಮತ ಮುದ್ರೆ ಬಿದ್ದಿದೆ. ರಾಜ್ಯದಲ್ಲಿ ಶೇ. 67.76 ಹಾಗೂ ದೇಶದಲ್ಲಿ 61.46ರಷ್ಟು ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ 28,269 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆದಾಗಿದೆ. ಚುನಾವಣಾ ಅಖಾಡದಲ್ಲಿ 227 ಅಭ್ಯರ್ಥಿಗಳ ಪೈಕಿ 206 ಪುರುಷರು, 21 ಮಹಿಳೆಯರಿದ್ದರು. ದಾವಣಗೆರೆಯಲ್ಲಿ ಗರಿಷ್ಠ 30 ಅಭ್ಯರ್ಥಿಗಳು ಮತ್ತು ರಾಯಚೂರಿನಲ್ಲಿ ಕನಿಷ್ಠ 8 ಅಭ್ಯರ್ಥಿಗಳಿದ್ದರು. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಮತದನಾ ನಡೆದಿದೆ. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಪ್ರಭಾ ಮಲ್ಲಿಕಾರ್ಜುನ್‌, ಗಾಯತ್ರಿ ಸಿದ್ದೇಶ್ವರ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಸೇರಿ 227 ಅಭ್ಯರ್ಥಿಗಳು ಕಣದಲ್ಲಿದ್ದರು. 14 ಕ್ಷೇತ್ರಗಳಲ್ಲಿ 2.59 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಿದ್ದರು. ಇದರಲ್ಲಿ 1.29 ಕೋಟಿ ಪುರುಷರು, 1.29 ಕೋಟಿ ಮಹಿಳೆಯರು ಮತ್ತು 1,945 ಇತರೆ ಮತದಾರರಿದ್ದರು. 85 ವರ್ಷಕ್ಕಿಂತ ಮೇಲ್ಪಟ್ಟವರು 2.29 ಲಕ್ಷ ಮತದಾರರು, 6.90 ಲಕ್ಷ ಯುವ ಮತದಾರರಿದ್ದರು. ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ 28,257 ಪ್ರಮುಖ ಮತಗಟ್ಟೆಗಳಾಗಿದ್ದು, 12 ಉಪ ಮತಗಟ್ಟೆಗಳಾಗಿದ್ದವು. 28,269 ಮತಗಟ್ಟೆಗಳ ಪೈಕಿ 936 ವಿಶೇಷ ಮತಗಟ್ಟೆಗಳಾಗಿದ್ದವು. ಮಹಿಳೆಯರು ಮತದಾನದಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಸಖಿ ಮತಗಟ್ಟೆಗಳಂತೆ ಒಟ್ಟು 560 ಮತಗಟ್ಟೆಗಳನ್ನು ಸ್ಥಾಪಿಸಿದ್ದು ವಿಶೇಷವಾಗಿತ್ತು. ಕರ್ನಾಟಕವಲ್ಲದೇ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ದಾದ್ರಾ, ಗೋವಾ, ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೂ ಮತದಾನವಾಗಿದ್ದು, ಎಲ್ಲಿಯೂ ಸಣ್ಣ ಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿ, ಗಂಭೀರವಾದ ಘಟನೆಗಳು ನಡೆದ ವರದಿಯಾಗಿಲ್ಲ. 

6:44 PM

ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಮತ ಚಲಾಯಿಸಿದ ಮಹಿಳೆಯರು

ಬಳ್ಳಾರಿ: ಸಾಂಪ್ರದಾಯಿಕ ಲಂಬಾಣಿ ನೇತ್ಯ ಮಾಡುತ್ತಾ ಬಂದು ಮತ ಚಲಾಯಿಸಿದ ಮಹಿಳೆಯರು. ಬಳ್ಳಾರಿ ತಾಲೂಕಿನ ಹೊನ್ನಳ್ಳಿ ತಾಂಡಾದಲ್ಲಿ ಹಬ್ಬಕ್ಕೆ ಬರುವ ರೀತಿ ಮತ ಚಲಾಯಿಸಲು ಬಂದ ಮಹಿಳೆಯರು. ಲಂಬಾಣಿ ಸಾಂಸ್ಕೃತಿಕ ಉಡುಗೆ ತೊಟ್ಟು ನೃತ್ಯ ಮಾಡುತ್ತಾ  ಮತಗಟ್ಟೆಗೆ ಆಗಮನ. ಮತಗಟ್ಟೆ ಮುಂದೆ ಕೆಲ ಕಾಲ ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆಯರು. ಚುನಾವಣೆ ಮಹತ್ವ ಸಾರಲು ಹೊನ್ನಳ್ಳಿ ತಾಂಡಾದ ಲಂಬಾಣಿ ಮಹಿಳೆಯರಿಂದ .

5:56 PM

ಸುರಪುರ ವಿಧಾಸನಭಾ ಉಪ ಚುನಾವಣೆ: ಕಲ್ಲು ತೂರಾಟ

ಯಾದಗಿರಿ: ಸುರಪುರ ಉಪಚುನಾವಣೆಗೆ ಮತದಾನ ಹಿನ್ನೆಲೆ ಬಿಜೆಪಿ(BJP)-ಕಾಂಗ್ರೆಸ್(Congress) ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ತೂರಾಟದ(Pelted stones) ವೇಳೆ ಓರ್ವನ ತಲೆಗೆ ಗಂಭೀರ ಗಾಯವಾಗಿದೆ. ಯಾದಗಿರಿ( Yadgir) ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

5:03 PM

ನಾನು ಬದುಕಿದ್ದೇನೆಂದು ತೋರಿಸಲು ಮತದಾನ

ವಿಜಯಪುರ: ಮತದಾನ ಮಾಡಲು ಬಂದಾಗ ಕಣ್ಣಿರಿಟ್ಟ ವೃದ್ಧ. ವಿಜಯಪುರದ ಗೋಳಗುಮ್ಮಟ ಏರಿಯಾದ ಬೂತ್ ನಂಬರ್ 168 ರಲ್ಲಿ ಘಟನೆ. ಮತ ಹಾಕಲು ಬಂದು ಕಣ್ಣೀರಿಟ್ಟ 83 ವರ್ಷದ ವೃದ್ಧ ಯಲ್ಲಪ್ಪ. ಮಕ್ಕಳು, ಸಂಬಂಧಿಕರು ಯಾರು ಸಹ ನೋಡಿಕೊಳ್ಳಲು ಇಲ್ಲ ಎಂದು ಕಣ್ಣೀರು. ನಾನು ಬದುಕಿದ್ದೇನೆ ಎಂದು ತೋರಿಸೋಕೆ ಮತ ಹಾಕಲು ಬಂದಿದ್ದೇನೆ ಎಂದು ವೃದ್ಧನ ಕಣ್ಣೀರು. ಗೋಳಗುಮ್ಮಟ ಏರಿಯಾ ನಿವಾಸಿ ಯಲ್ಲಪ್ಪ.

4:55 PM

ಮತ ಚಲಾಯಿಸಿದ ಅನಂತ ಕುಮಾರ್ ಹೆಗಡೆ

ಕಾರವಾರ, ಉತ್ತರಕನ್ನಡ: ಮತದಾನ ಮಾಡಲು ಆಗಮಿಸಿದ ಸಂಸದ ಅನಂತ ಕುಮಾರ್ ಹೆಗಡೆ. ಶಿರಸಿ ಕೆಎಚ್‌ಬಿ ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ಆಗಮನ. ಪತ್ನಿ ಶ್ರೀರೂಪ ಜತೆ ಮತದಾನ ಕೇಂದ್ರಕ್ಕೆ ಆಗಮಿಸಿದ ಸಂಸದರು. ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ ಸಂಸದ ಅನಂತ ಕುಮಾರ್ ಹೆಗಡೆ. ಪ್ರಾರಂಭದಲ್ಲಿ ಸಂಸದರ ಆಪ್ತ ಸಹಾಯಕ ಸಂಸದರ ಬದಲು ಸರತಿ ಸಾಲಿನಲ್ಲಿ ನಿಂತಿದ್ದರು. ಬಳಿಕ ಪತ್ನಿ ಜತೆ ಸರತಿ ಸಾಲಿನಲ್ಲಿ ತೆರಳಿ ಮತ ಚಲಾಯಿಸಿದ ಸಂಸದ ಅನಂತ ಕುಮಾರ್ ಹೆಗಡೆ.

3:55 PM

ದೇಶದಲ್ಲಿ ಶೇ.50.71, ರಾಜ್ಯದಲ್ಲಿ ಶೇ.54.20 ಮತದಾನ

3 ಗಂಟೆವರೆಗಿನ ಮತದಾನ ಪ್ರಮಾಣ

ಅಸ್ಸಾಂ 63.08%
ಬಿಹಾರ 46.69%
ಛತ್ತೀಸ್‌ಗಢ 58.19%
ದಾದ್ರಾ 52.43%
ಗೋವಾ 61.39%
ಗುಜರಾತ್ 47.03%
ಕರ್ನಾಟಕ 54.20%
ಮಧ್ಯ ಪ್ರದೇಶ 54.09%
ಮಹಾರಾಷ್ಟ್ರ 42.63%
ಉತ್ತರ ಪ್ರದೇಶ 46.78%
ಪಶ್ಚಿಮ ಬಂಗಾಳ 63.11%

3:34 PM

ಶಿವಮೊಗ್ಗ: ಆ್ಯಂಬುಲೆನ್ಸ್‌ನಲ್ಲಿ ಹೋಗಿ ಮತ ಚಲಾಯಿಸಿದ ರಕ್ತದಾನಿ ಯಜ್ಞನಾರಾಯಣ್

ಶಿವಮೊಗ್ಗ: ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವ 84 ವರ್ಷದ ರಕ್ತ ದಾನಿ, ಸಾಮಾಜಿಕ ಕಾರ್ಯಕರ್ತ ಯಜ್ಞನಾರಾಯಣ್ ಅವರು ಆ್ಯಂಬುಲೆನ್ಸ್‌ನಲ್ಲಿ ಹೋಗಿ ತಮ್ಮ ಹಕ್ಕು ಚಲಾಯಿಸಿ, ಮತದಾನದಿಂದ ದೂರ ಉಳಿಯೋ ಯುವಕರಿಗೆ ಮಾದರಿಯಾಗಿದ್ದಾರೆ. ಪುತ್ರ ವಿನಯ್ ಶಿವಮೊಗ್ಗ ಅವರು ತಮ್ಮ ತಂದೆಗೆ ಹಕ್ಕು ಚಲಾಯಿಸಲು ಸಹಕರಿಸಿದರು. 

3:30 PM

ಬಿಜೆಪಿ ಪರ‌ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಆರೋಪ

ಚಿಕ್ಕೋಡಿ: ಬಿಜೆಪಿ ಪರ‌ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಆರೋಪ. ಕಾಂಗ್ರೆಸ್ ಕಾರ್ಯಕರ್ತರಿಂದ ಮತಗಟ್ಟೆ ಎದುರು ಪ್ರತಿಭಟನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋಟೆಬಾಗ ಶಾಲೆಯ ಬೂತ್ ನಂಬರ್ 162 ರಲ್ಲಿ ಘಟನೆ. ಚುನಾವಣಾ ಸಿಬ್ಬಂದಿಯಿಂದ ಬಿಜೆಪಿ ಪರ ಮತ ಚಲಾವಣೆಗೆ ಒತ್ತಾಯ. ಮಹಿಳೆಯರಿಗೆ ಬಿಜೆಪಿ ಪರ ಮತಚಲಾಯಿಸುವಂತೆ ಒತ್ತಾಯ. ವಿಷಯ ತಿಳಿದು ಮತಗಟ್ಟೆಗೆ ಆಗಮಿಸಿದ ಕೈ ಕಾರ್ಯಕರ್ತರು. ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ವಾಗ್ವಾದ.

2:43 PM

Lok Sabha Elections 2024: ಮಧ್ಯಾಹ್ನ 1 ಕ್ಕೆ ರಾಜ್ಯದಲ್ಲಿ ಶೇ.42, ದೇಶದಲ್ಲಿ ಶೇ.40 ವೋಟಿಂಗ್

ಬೆಳಗ್ಗೆ 1 ಗಂಟೆಯ ತನಕ

ಅಸ್ಸಾಂ-  ಶೇ 45.88

ಬಿಹಾರ- ಶೇ 36

ಛತ್ತೀಸ್‌ಗಢ- ಶೇ 46

ಗೋವಾ - ಶೇ 49

ದಾದ್ರಾ ನಗರಹಾವೇಲಿ -ಶೇ -39

ಗುಜರಾತ್- ಶೇ 37

ಕರ್ನಾಟಕ - ಶೇ 41

ಮಧ್ಯಪ್ರದೇಶ - ಶೇ 44

ಯು ಪಿ - ಶೇ 38

ಮಹಾರಾಷ್ಟ್ರ - ಶೇ 31

ಪಶ್ಚಿಮ ಬಂಗಾಳ- ಶೇ 49

1:11 PM

ರಾಯಚೂರು: ಬಿಸಿಲೇರುತ್ತಿದ್ದಂತೆ ಮಂದಗತಿಯಾದ ಮತದಾನ

ರಾಯಚೂರು: ಚುನಾವಣಾ ಕಾವು, ಬಿಸಿಲಿನ ಝಳಕ್ಕೆ ತತ್ತರಿಸಿದ ಮತದಾರ ಪ್ರಭುಗಳು. ಬೆಳಗ್ಗೆಯಿಂದ ಉತ್ಸಾಹದಿಂದ ಮತದಾನ ಮಾಡಿದ ಮತದಾರರು. ಸೂರ್ಯನ ಪ್ರತಾಪ ನೆತ್ತಿಗೇರುತ್ತಿದ್ದಂತೆ ನಿಧಾನ ಗತಿಯಲ್ಲಿ ಸಾಗಿದ ಮತದಾನ. ಬಿಸಿಲಿನ ತೀವ್ರತೆಗೆ ಬಸವಳಿಯುತ್ತಿರುವ ವಯೋ ವೃದ್ಧರು ಮತ್ತು ಮಹಿಳೆಯರು. ರಾಯಚೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ. ಬಿಸಿಲಿಗೆ ಹೆದರಿ ಮನೆಯಿಂದ ಮತಗಟ್ಟೆಗೆ ಬರಲು ಮತದಾರರು ಹಿಂದೇಟು. ಬಹುತೇಕ ಮತಹಟ್ಟೆಗಳು ಮತದಾರರು ಇಲ್ಲದೆ ಖಾಲಿ ಖಾಲಿ. ರಾಯಚೂರು ನಗರದ ಮತಗಟ್ಟೆ 79ರಲ್ಲಿ 1183 ಮತದಾರರು ಇದ್ದಾರೆ. 1183ರಲ್ಲಿ ಈವರೆಗೆ ಕೇವಲ 383 ಮತದಾನ ಮಾತ್ರ ಮಾಡಿದ ಮತದಾರರು.

1:08 PM

ಜನಾರ್ದನ ರೆಡ್ಡಿ ತನ್ನನ್ನು ತಾನೇ ಮಹಾನ್‌ ನಾಯಕ ಅಂತ ಅಂದುಕೊಂಡಿದ್ದಾನೆ: ಶಿವರಾಜ್ ತಂಗಡಗಿ ಗರಂ

ಜೂನ್ 4 ರ ನಂತರ ಯಾರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ಅನ್ನೋದು ಗೊತ್ತಾಗುತ್ತದೆ. ಜನಾರ್ದನ ರೆಡ್ಡಿ ಆಟ ಕೊಪ್ಪಳದಲ್ಲಿ ನಡೆಯಲ್ಲ.  ಜನಾರ್ದನ ರೆಡ್ಡಿಗೆ ಪುಲ್ವಾಮ ದಾಳಿ, ಸರ್ಜಿಕಲ್‌ ಸ್ಟ್ರೈಕ್ ಬಳಿ ಗಂಧಗಾಳಿ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ. ತಾಕತ್ ಇದ್ರೆ ಎರಡು ಕೋಟಿ ಉದ್ಯೋಗ ನೀಡೋ ಹೇಳಿಕೆ ಬಗ್ಗೆ ಉತ್ತರ ನೀಡಲಿ ಎಂದು ಜನಾರ್ದನ ರೆಡ್ಡಿ ಸವಾಲ್‌ ಹಾಕಿದ ಸಚಿವ ಶಿವರಾಜ್ ತಂಗಡಗಿ  

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:42 PM

Kalaburagi Lok Sabha Elections Live Updates: ಖರ್ಗೆ ಅಳಿಯನಿಗೆ ಅಗ್ನಿ ಪರೀಕ್ಷೆ!

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆಯಾಗಿದ್ದ ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಖರ್ಗೆ ಅಳಿಯ ಡಾ. ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿಯಿಂದ ಹಾಲಿ ಸಂಸದ ಉಮೇಶ್ ಜಾಧವ್ ಕಣಕ್ಕಿಳಿದಿದ್ದಾರೆ.

ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

12:22 PM

LIVE: Belagavi Elections 2024: ಶೆಟ್ಟರ್ Vs ಹೆಬ್ಬಾಳ್ಕರ್ ; ಬೆಳಗ್ಗೆ 11 ಗಂಟೆ ವೇಳೆಗೆ ಶೇ.23.91 ಮತದಾನ

ಬೆಳಗಾವಿ ಲೋಕಸಭಾ ಕ್ಷೇತ್ರವು ಪ್ರಭಾವಿ ನಾಯಕರ ಪ್ರತಿಷ್ಠೆಯ ಕಣವಾಗಿದೆ. ರಾಜಕೀಯ ಅನುಭವಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಹೊಸಬ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆಯೊಡ್ಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಜೊತೆ ಬಂದು ಮತ ಚಲಾಯಿಸಿದ್ದಾರೆ. ತುಳಸಿ ಮಾಲೆ ಹಾಕಿ, ಕೇಸರಿ ಸೀರೆಯಲ್ಲಿ ಲಕ್ಷ್ಮಿ ಬಂದಿದ್ದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. 

ಬೆಳಗಾವಿ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

11:51 AM

ಚುನಾವಣೆ ಸಿಬ್ಬಿಂದಿಗೆ ಆನಾರೋಗ್ಯ, ತಕ್ಷಣವೇ ಸೂಕ್ತ ಚಿಕಿತ್ಸೆ

ಬಳ್ಳಾರಿ: ಕೊಳಗಲ್ ಗ್ರಾಮದ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣ ಸಿಬ್ಬಂದಿ ರಕ್ತದೊತ್ತಡ  ಕಡಿಮೆಯಾಗಿ ಪ್ರಜ್ಞಾಹಿನರಾಗಿದ್ದ ಲಕ್ಷ್ಮಿ ದೇವಿ ಇವರಿಗೆ ಆಂಬ್ಯುಲೇನ್ಸ್‌ ಮೂಲಕ, ವಿಮ್ಸ್‌ಗೆ  ಸಿಬ್ಬಂದಿ ಸಹಿತ ರೇಪರ್‌ ಮಾಡಿ ಚಿಕಿತ್ಸೆ ನೀಡಲಾಗಿದೆ. ಡಾ ಅಬ್ದುಲ್ಲಾ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ  ಖುದ್ದು ಮೇಲ್ವಿಚಾರಣೆ ಕೈಗೊಂಡಿದ್ದು, ಸಿದ್ದಮ್ಮನಹಳ್ಳಿ ವೈದ್ಯಾಧಿಕಾರಿ ಡಾ ದಿವ್ಯ ನಿಗಾವಹಿಸಿದ್ದು ಸದರಿಯವರು ಗುಣಮುಖರಾಗಿದ್ದಾರೆ.

ಬಳ್ಳಾರಿ: ಕುಡುತಿನಿ ಮತದಾನ ಕೇಂದ್ರದ ಸಿಬ್ಬಂದಿಯವರಿಗೆ ರಕ್ತದೊತ್ತಡದ ಸಮಸ್ಯೆ ಕಂಡು ಬಂದ ಹಿನ್ನೆಲೆ ಆಂಬ್ಯುಲೆನ್ಸ್ ‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು ಗುಣಮುಖರಾಗುದ್ದಾರೆ.

11:47 AM

India General Elections 2024: ಬೆಳಗ್ಗೆ 11ಕ್ಕೆ ರಾಜ್ಯದಲ್ಲಿ ಶೇ.24.48, ದೇಶದಲ್ಲಿ ಶೇ.25.41

ಬೆಳಗ್ಗೆ 11 ಗಂಟೆಯ ತನಕ

ಅಸ್ಸಾಂ-  ಶೇ 27.34
ಬಿಹಾರ- ಶೇ 24.41
ಛತ್ತೀಸ್ಗಢ- ಶೇ 29.9
ಗೋವಾ ಶೇ 30.94
ದಾದ್ರಾ ನಗರಹಾವೇಲಿ -ಶೇ 24.69
ಗುಜರಾತ್- ಶೇ 24.35
ಕರ್ನಾಟಕ - ಶೇ 24.48

ಮಧ್ಯಪ್ರದೇಶ - ಶೇ 30.21

ಯು ಪಿ - ಶೇ 26.12

ಮಹಾರಾಷ್ಟ್ರ - ಶೇ 18.18

ಪಶ್ಚಿಮ ಬಂಗಾಳ- ಶೇ 32.81

11:14 AM

ನಿಮ್ಮ ಒಂದು ಮತ ಭಾರತವನ್ನು 5ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಿದೆ: ಮೋದಿ

ಮಧ್ಯಪ್ರದೇಶ ದಲ್ಲಿ ಪ್ರಧಾನಿ ಮೋದಿ ಮಾತು. ನಿಮ್ಮ ಒಂದು ಮತ ಭಾರತವನ್ನು 5 ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಿದೆ.  ಭಾರತ ಜಾಗತಿಕ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿ ಕೊಂಡಿದೆ.  70 ವರ್ಷಗಳ ಬಳಿಕ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ. ಆದಿವಾಸಿ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಮಹಿಳೆಯರಿಗೆ ಮೀಸಲಾತಿ ನೀಡಿದೆ. ನಿಮ್ಮ ಒಂದು ಮತ 500 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಭವ್ಯ ರಾಮನನ್ನಾಗಿ ಮಾಡಿತು  ಲಲ್ಲಾ ದೇವಸ್ಥಾನ.

मध्य प्रदेश के खरगोन में उमड़ा ये जनसैलाब इस बात का प्रमाण है कि पूरे देश में भाजपा-एनडीए की अभूतपूर्व लहर है।https://t.co/qNE0m5KLd7

— Narendra Modi (@narendramodi)

10:53 AM

Lok Sabha Elections 2024: ಲೋಕಸಭಾ ಚುನಾವಣೆ ಅಭ್ಯರ್ಥಿಗಳಿಂದ ಮತದಾನ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 17 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮತದಾರರ ಒಲವು ಯಾರ ಕಡೆಗಿದೆ ಎಂಬುದನ್ನು ಜೂನ್ 4ರ ತನಕ ಕಾದು ನೋಡಬೇಕಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಹಕ್ಕು ಚಲಾಯಿಸಿದ ಕ್ಷಣವಿದು

ಫೋಟೋಸ್‌ಗೆ ಇಲ್ಲಿ ಕ್ಲಿಕ್ ಮಾಡಿ

10:48 AM

ಸಖಿ ಬೂತ್‌ನಲ್ಲಿ ಪಿಂಕ್ ಜೂಸ್ ನೋಡಿ ಮತದಾರರಿಗೆ ಸ್ವಾಗತಿ

ಸಖಿ ಮತಗಟ್ಟೆಗಳಲ್ಲಿ ಮತದಾರರಿಗೆ ಪಿಂಕ್ ಕಲರ್ ಶರಬತ್ತು ನೀಡಿ ಸ್ವಾಗತ.  ಮತಚಲಾಯಿಸಿ ಖುಷಿ ಪಟ್ಟ ಮತದಾರರು. ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತೆರೆಯಲಾದ ಪಿಂಕ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದ ಮತದಾರರಿಗೆ  ಪಿಂಕ್ ಕಲರ್ ಶರಬತ್ತು ನೀಡುವ ಮೂಲಕ ಚಾಲನೆ ನೀಡಲಾಗಿದೆ. ಪಿಂಕ್ ಮತಗಟ್ಟೆಗೆ ಶಾಮಿಯಾನ, ಸ್ವಾಗತ ಫಲಕ, ಸೆಲ್ಫಿ ಸ್ಟ್ಯಾಂಡ್, ಫಿಕ್ ಕಲರ್ ಶರಬತ್ತು, ಮಹಿಳಾ ಸಿಬ್ಬಂದಿಯೇ ಇರುವುದು ವಿಶೇಷವಾಗಿತ್ತು. ಸಖಿ ಮತಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಿ ಖುಷಿಪಟ್ಟರು. ಸೆಲ್ಫಿ ಸ್ಟ್ಯಾಂಡ್ ಬಳಿ ಫೋಟೋ ಕ್ಲಿಕ್ಕಿಸಿಕೊಂಡರು.

10:45 AM

ಪತ್ನಿ ಗೆಲುವಿಗಾಗಿ ನಟ ಶಿವರಾಜ್ ಕುಮಾರ್ ಉತ್ತರ ಕನ್ನಡದಲ್ಲಿ ಟೆಂಪಲ್ ರನ್

ಕಾರವಾರ, ಉತ್ತರಕನ್ನಡ: ಪತ್ನಿಯ ಗೆಲುವಿಗಾಗಿ ನಟ ಶಿವರಾಜ್ ಕುಮಾರ್ ಟೆಂಪಲ್ ರನ್. ಶಿರಸಿ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ. ಪತ್ನಿಯ ಜೊತೆ ಬಂದು ಶ್ರೀ ಮಾರಿಕಾಂಬೆಗೆ ಉಡಿ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ ಶಿವರಾಜ್ ಕುಮಾರ್. ಶಿವಮೊಗ್ಗ ಲೋಕ ಅಖಾಡದಲ್ಲಿ ಕಣಕ್ಕಿಳಿದಿರುವ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್. ಕಳೆದ ಒಂದೂವರೆ ತಿಂಗಳಿನಿಂದ ಪತ್ನಿಯ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶಿವರಾಜ್ ಕುಮಾರ್. ಇಂದು ಮತದಾನ ಹಿನ್ನೆಲೆ ಶಿರಸಿ ಶ್ರೀ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ.

10:37 AM

4 ಸಾವಿರ ಪೊಲೀಸರ ಭದ್ರತೆ ನಡುವೆ ನಡೆಯುತ್ತಿರುವ ಚುನಾವಣೆ

ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆೆಲೆಯಲ್ಲಿ ಎಲ್ಲೆಡೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸುಮಾರು 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 

10:26 AM

ಕರ್ನಾಟಕದ 14 ಕ್ಷೇತ್ರಗಳಿಗೆ ಬಿರುಸಿನ ಮತದಾನ, ವೃದ್ಧೆಯರಿಂದಲೂ ಮತ ಹಕ್ಕು ಚಲಾವಣೆ

ರಾಜ್ಯದ ವಿವಿಧೆಡೆ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಯಾದಗಿರಿ ಜಿಲ್ಲೆಯ ಕೆಲವು ಮತಗಟ್ಟೆಗಳ ಫೋಟೋಸ್ ಇಲ್ಲಿವೆ. 

10:22 AM

Bidar Elections 2024 Live Updates: ಬೀದರ್‌ ಕ್ಷೇತ್ರದಲ್ಲಿ ಕೇಂದ್ರ ಸಚಿವ ಖೂಬಾಗೆ ಯುವ ನಾಯಕ ಖಂಡ್ರೆ ಚಾಲೆಂಜ್‌

ಬೀದರ್‌ ನಲ್ಲಿ ಬಿಜೆಪಿಯಿಂದ  ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್‌ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ, ಯವ ನಾಯಕ ಸಾಗರ್ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ.

ಬೀದರ್ ಚುನಾವಣಾ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

10:16 AM

India General Elections 2024: ಪಶ್ಚಿಮ ಬಂಗಾಳದಲ್ಲಿ ಬಿರುಸಿನ ಮತದಾನ

ಭಾರತಕ್ಕೆ ಮೂರನೇ ಹಂತದ ಹಾಗೂ ಕರ್ನಾಟಕಕ್ಕೆ ಎರಡನೇ ಹಾಗೂ ಅಂತಿದ ಮತದಾನ ನಡೆಯುತ್ತಿದ್ದು, ಒಟ್ಟು 12 ರಾಜ್ಯಗಳ 95 ಸ್ಥಾನಗಳಿಗೆ ಲೋಕಸಭೆ ಚುನಾವಣೆ ನಡೆಯುತ್ತಿದೆ. 95 ಸ್ಥಾನಗಳಿಗೆ ಒಟ್ಟು 1351 ಮಂದಿ ಸ್ಪರ್ಧಿಸಿದ್ದಾರೆ. ಈ ಪೈಕಿ ಗುಜರಾತ್‌ನಲ್ಲಿ ಎಲ್ಲ 25 ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದ್ದು, ಗರಿಷ್ಠ 658 ಜನರು ಸ್ಪರ್ಧಿಸಿದ್ದರೆ, ಮಹಾರಾಷ್ಟ್ರದಲ್ಲಿ ಮಂಗಳವಾರ ಚುನಾವಣೆ ನಡೆವ 11 ಸ್ಥಾನಕ್ಕೆ 519  ಮಂದಿ ಕಣದಲ್ಲಿದ್ದಾರೆ. ಮೂರನೇ ಹಂತದ ಚುನಾವಣೆಯೊಂದಿಗೆ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ 284 ಸ್ಥಾನಗಳ ಚುನಾವಣೆ ಮುಕ್ತಾಯಗೊಳ್ಳಲಿದೆ. ಇನ್ನೂ 4 ಹಂತದ ಚುನಾವಣೆ ಬಾಕಿ ಇದ್ದು ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆ ಕಣದಲ್ಲಿರುವ ಪ್ರಮುಖರು:
ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಸುಪ್ರಿಯಾ ಸುಳೆ, ಡಿಂಪಲ್‌ ಯಾದವ್‌, ಧಾರವಾಡ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ, ಶಿವಮೊಗ್ದಲ್ಲಿ ಡಾ.ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಚುನಾವಣೆಯ ಕಣದಲ್ಲಿರುವ ಪ್ರಮುಖ ಸ್ಪರ್ಧಾಳುಗಳಾಗಿದ್ದಾರೆ.

ಯಾವ ರಾಜ್ಯಗಳಲ್ಲಿ ಚುನಾವಣೆ?:
ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಗುಜರಾತ್‌, ದಾದ್ರಾ ಮತ್ತು ನಗರ್‌ ಹವೇಲಿ, ದಮನ್ ಮತ್ತು ದಿಯು,

10:10 AM

ಕೇಸರಿ ಸೀರೆ, ತುಳಸಿ ಹಾರ ಹಾಕಿ ಮತದಾನ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ !

ಮಗ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕೇಸರಿ ಸೀರೆ, ತುಳಸಿ ಮಾಲೆಯೊಂದಿಗೆ ಬಂದು ಮತದಾನ ಮಾಡಿದರು. 

10:07 AM

ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ

ಕಾಂಗ್ರೆಸ್ ಶಾಸಕ ರಾಜವೆಂಕಟಪ್ಪ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸುರಪುರ ವಿಧಾನಸಭಾ ಚುನಾವಣೆಗೂ ಇಂದು ಮತದಾನ ನಡೆಯುತ್ತಿದ್ದು, ಮಾಜಿ ಸಚಿವ, ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ್ (ರಾಜು ಗೌಡ) ಹಾಗೂ ಕುಟುಂಬಸ್ಥರು ತಮ್ಮ ಮತ ಚಲಾಯಿಸಿದರು. 

10:03 AM

ಲೋಕಸಭಾ ಚುನಾವಣೆ 2024: ಕರ್ತವ್ಯನಿರತ ಇಬ್ಬರು ಅಧಿಕಾರಿಗಳು ಹೃದಯಾಘಾತದಿಂದ ಸಾವು

 ಚುನಾವಣಾ ಕರ್ತವ್ಯನಿರತರಾಗಿದ್ದ ವೇಳೆಯೇ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಸಂಭವಿಸಿದೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:02 AM

ಮತದಾನ ಮಾಡದೆ ಬಹಿಷ್ಕರಿಸಿದ ಗುದ್ನೇಪ್ಪನಮಠ ನಿವಾಸಿಗಳು

ಕುಕನೂರು (ಕೊಪ್ಪಳ): ಪಟ್ಟಣದ 19ನೇ ವಾರ್ಡಿನಲ್ಲಿ ಮತದಾನ ಬಹಿಷ್ಕಾರ. ಬೆಳಿಗ್ಗೆಯಿಂದ ಇದುವರೆಗೂ ಒಬ್ಬರೂ ಮತದಾನ ಮಾಡಿಲ್ಲ. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ. ತಾಲೂಕಾಡಳಿತ ಸೌಧ, ಕೋರ್ಟ್, ಬುದ್ಧ, ಬಸವ ಅಂಬೇಡ್ಕರ್ ಭವನ ಕಟ್ಟಡಕ್ಕೆ ಜಾಗ ನಿಗದಿ . ಧಾರ್ಮಿಕ ದತ್ತಿ ಇಲಾಖೆಯಿಂದ ಬಾಡಿಗೆ ರೂಪದಲ್ಲಿ ಕಟ್ಟಡಕ್ಕೆ ಆದೇಶ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಿರೋಧ. ಗುದ್ನೇಪ್ಪನಮಠ ದೇವಸ್ಥಾನದ ಜಾಗ ಕೈ ಬಿಡುವಂತೆ ಗ್ರಾಮಸ್ಥರ ಆಗ್ರಹ. ಮತದಾನ ಮಾಡದೆ ಬಹಿಷ್ಕರಿಸಿದ ನಿವಾಸಿಗಳು. 1040 ಮತಗಳಿರುವ ಗುದ್ನೇಪ್ಪನಮಠದ ಬೂತ್. 

10:01 AM

Raichuru Lok Sabha Elections 2024: ಬೆಳಗ್ಗೆ 9ಕ್ಕೆ 8.27ರಷ್ಟು ಮತದಾನ

ಬಿಸಿಲಲ್ಲೂ ಜನರು ಮತಗಟ್ಟೆಗೆ ಆಗಮಿಸುತ್ತಿದ್ದು, ಬಿರುಸಿನ ಮತದಾನ ನಡೆಯುತ್ತಿದೆ. ಬಿಜೆಪಿ ರಾಜಾ ಅಮರೇಶ್ವರ್ ನಾಯಕ್ ಹಾಗೂ ಕಾಂಗ್ರೆಸ್ ನ ಕುಮಾರ್ ನಾಯಕ್ ಕಣದಲ್ಲಿದ್ದು, ಮತದಾರ ಪ್ರಭುವಿನ ಒಲವು ಯಾರು ಕಡೆಗೆ ಎನ್ನುವುದು ಕಾದು ನೋಡಬೇಕು. 

ರಾಯಚೂರು ಚುನಾನಣೆಯ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

9:55 AM

Ballari Elections 2024 Live: ಶ್ರೀರಾಮುಲುಗೆ ಠಕ್ಕರ್ ಕೊಡ್ತಾರಾ ತುಕಾರಾಂ?

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಕೈ ನಾಯಕ ಇ ತುಕಾರಾಂ ಸೆಡ್ಡು ಹೊಡೆದಿದ್ದಾರೆ. ಆದರೆ, ಮತದಾರರ ಒಲವು ಯಾರಿಗಿದೆ ಎಂದು ಇಂದು ತೀರ್ಮಾನವಾಗಲಿದೆ.

ಲೈವ್ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
 
9:49 AM

ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ: ಅಮಿತ್ ಶಾ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಬಳಿಕ  ಅಮಿತ್ ಶಾ  ಹೇಳಿಕೆ. ಬಿಸಿಲಿನ ನಡುವೆಯೂ ಮತದಾನ ತುಂಬಾ ಚನ್ನಾಗಿ ನಡೆಯುತ್ತಿದೆ. ಗುಜರಾತಿನ ಮತದಾರರು ಶೇ 20 ರಷ್ಟು ಮತದಾನ ಆಗಿದೆ.  ಈ ಪ್ರಜಾಪ್ರಭುತ್ವದ ಹಬ್ಬದ ಸಂದರ್ಭದಲ್ಲಿ ನಾನು ಎಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ. ದೇಶವಾಸಿಗಳಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು  ಮನವಿ ಮಾಡುತ್ತಿದ್ದೇನೆ. 

ಕರ್ನಾಟಕವು ಇಂದು ಮತ ಚಲಾಯಿಸುವ ಮೂಲಕ ಲೋಕಸಭಾ ಚುನಾವಣೆ 2024 ನ್ನು ಸಮಾಪನಗೊಳಿಸಲಿದೆ. ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ, ರೈತರಿಗೆ ಬೆಂಬಲ ಮತ್ತು ಬಡವರಿಗೆ, ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ರಾಜ್ಯದ ಶ್ರೇಯೋಭಿವೃದ್ಧಿಗೆ ಹೂಡಿಕೆ ಮುಂದುವರಿಸುವ ಸರ್ಕಾರಕ್ಕೆ ಮತ ನೀಡಿ ಎಂದು ನಾನು ಜನರಲ್ಲಿ ಮನವಿ…

— Amit Shah (Modi Ka Parivar) (@AmitShah)

9:44 AM

India General Elections 2024: 11 ರಾಜ್ಯಗಳಲ್ಲಿ ಶೇ.10.54 ಮತದಾನ

ಬೆಳಗ್ಗೆ 9  ಗಂಟೆಯ ತನಕ

ಅಸ್ಸಾಂ-  ಶೇ 10.12
ಬಿಹಾರ- ಶೇ 10.3
ಛತ್ತೀಸ್‌ಗಢ - ಶೇ 13.24
ಗೋವಾ ಶೇ 12.35
ದಾದ್ರಾ- ಶೇ 10.03
ಗುಜರಾತ್- ಶೇ 9.87
ಕರ್ನಾಟಕ - ಶೇ 9.45
ಮಧ್ಯಪ್ರದೇಶ - ಶೇ 14.22
ಯು ಪಿ - ಶೇ 12.23
ಮಹಾರಾಷ್ಟ್ರ - ಶೇ 6.64
ಪಶ್ಚಿಮ ಬಂಗಾಳ- ಶೇ 15.13

9:39 AM

ಬೆಳಗ್ಗೆ 9 ಗಂಟೆಯವರಿಗೆ ಶೇ.9ರಷ್ಟು ಮತದಾನ

ಬೆಳಗ್ಗೆ 9 ಗಂಟೆಯವರೆಗೆ
ಬಾಗಲಕೋಟೆ  8.59
ಬೆಳಗಾವಿ     9.48
ಬಳ್ಳಾರಿ     10.37
ಬೀದರ್​     8.90
ಬಿಜಾಪುರ    9.26
ಚಿಕ್ಕೋಡಿ     10.81
ದಾವಣಗೆರೆ     9.11
ಕಲಬುರುಗಿ     8.71
ದಾವಣೆಗೆರೆ     9.11
ಧಾರವಾಡ    9.38
ಹಾವೇರಿ     8.62
ಕೊಪ್ಪಳ    8.79
ರಾಯಚೂರು 8.27
ಶಿವಮೊಗ್ಗ     11.39
ಉ.ಕನ್ನಡ      11.7
ಒಟ್ಟು         9.45

9:37 AM

LIVE: Bagalkote Elections 2024: ಬಿಜೆಪಿಯ ಗದ್ದಿಗೌಡರಗೆ ಕಾಂಗ್ರೆಸ್‌ನ ಯಂಗ್‌ ನಾಯಕಿ ಸಂಯುಕ್ತಾ ಸ್ಪರ್ಧಿ

ಬಾಗಲಕೋಟೆ ಜಿಲ್ಲೆಯಲ್ಲಿ ಕಿರಿಯ ಸಂಯುಕ್ತಾ ಪಾಟೀಲ್ ಸ್ಪರ್ಧಿಸುತ್ತಿದ್ದು, ಹೊಸ ಮುಖಕ್ಕೆ ಕ್ಷೇತ್ರದ ಮತದಾರರು ಹೇಗೆ ಮತ ಹಾಕುತ್ತಾರೆ ಎಂಬುದನ್ನು ನೋಡಬೇಕು. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:29 AM

ದಾವಣಗೆರೆಯಲ್ಲಿ ಇದೇ ಮೊದಲು ಮಹಿಳೆಯರ ಹಣಾಹಣಿ

ದಾವಣೆಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಹಾಗೂ ಸಂಸದ ಸಿದ್ಧೇಶ್ವರ್ ಪತ್ನಿ ಗಾಯತ್ರಿ ಅಖಾಡದಲ್ಲಿದ್ದು, ಯಾರೇ ಗೆದ್ದರೂ ಈ ಕ್ಷೇತ್ರ ಇದೇ ಮೊದಲು ಮಹಿಳೆಯನ್ನು ಸಂಸತ್ತಿಗೆ ಕಳುಹಿಸಿದಂತಾಗುತ್ತದೆ. 

ದಾವಣಗೆರೆ ಲೈವ್ ಅಪ್‌ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

9:24 AM

ಈ ಹಂತದ ಚುನಾವಣೆಯಲ್ಲಿ 17 ಮಂದಿ ಇದೇ ಮೊದಲು ಚುನಾವಣೆಗೆ ನಿಂತಿದ್ದಾರೆ!

ಎರಡನೇ ಹಂತದ ಮತದಾನ ಶುರುವಾಗಿದೆ. ಈ ಬಾರಿ 17 ಅಭ್ಯರ್ಥಿಗಳು ಮೊದಲ ಬಾರಿ ಲೋಕ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕದನಕಣದಲ್ಲಿ ಕಾವು ಜೋರಾಗಿದೆ. 227 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾದ್ರೆ..ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ನೇರಾ ನೇರಾ ಪೈಪೋಟಿ ಏರ್ಪಟ್ಟಿದೆ. 2.59 ಕೋಟಿ ಮಂದಿ ಮತದಾನ ಮಾಡಲಿದ್ದಾರೆ.

8:48 AM

ಕಲಬುರಗಿಯಲ್ಲಿ ತೊಗರಿ ಕಣಜದ್ದೇ ವಿಶೇಷ ಬೂತ್, ಎಲ್ಲೆಲ್ಲಿ ಹೇಗಿದೆ ಬೂತ್?

ರಾಜ್ಯದ 14 ಮತ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದ್ದು, ಕೆಲವೆಡೆ ವಿಶೇಷ ಬೂತ್ ಸ್ಥಾಪಿಸಲಾಗಿದೆ. ಆಯಾ ಕ್ಷೇತ್ರದ ವಿಶೇಷತೆವುಳ್ಳು ಬೂತ್ ಇದಾಗಿದ್ದು, ಶಿವಮೊಗ್ದಲ್ಲಿ ಚುನಾವಣಾ ಅಧಿಕಾರಿಗಳು ವಿಶೇಷ ರಾಜ ಉಡುಗೆಯಲ್ಲಿ ಅಲಂಕೃತಗೊಂಡಿದ್ದು ವಿಶೇಷವಾಗಿದೆ. 

ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

8:41 AM

ದೇಶದ ಬಿಜೆಪಿ ಬಾಹುಳ್ಯದ ಕ್ಷೇತ್ರಗಳಲ್ಲಿಂದು ಮತದಾನ

14ಕ್ಕೆ 14 ಸ್ಥಾನಗಳನ್ನೂ ಗೆದ್ದ ಉತ್ತರ ಕರ್ನಾಟಕ ಸೇರಿ ಬಹುತೇಕ ಬಿಜೆಪಿ ಬಾಹುಳ್ಯದ ರಾಜ್ಯಗಳಾದ ಗುಜರಾತ್, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿಂದು ಮತದಾನವಾಗುತ್ತಿದೆ. ಮತ ಚಲಾಯಿಸಿದ ಮೋದಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ, ಭಾರತದ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಲು ಕರೆ ನೀಡಿದ್ದಾರೆ. 

Voted in the 2024 Lok Sabha elections! Urging everyone to do so as well and strengthen our democracy. pic.twitter.com/PlLCw7Fwe3

— Narendra Modi (@narendramodi)

8:39 AM

LIVE Uttara Kannada Elections 2024: ಉತ್ತರ ಕನ್ನಡದಲ್ಲಿ ಬಿಜೆಪಿಯ ಕಾಗೇರಿಗೆ ಕೈ ನಾಯಕಿ ನಿಂಬಾಳ್ಕರ್‌ ಎದುರಾಳಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್‌ ಸ್ಪರ್ಧಿಸುತ್ತಿದ್ದಾರೆ. ಯಾರು ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಿದೆ

ಉತ್ತರ ಕನ್ನಡ ಚುನಾವಣಾ ಅಪ್ಡೇಟ್ಸ್‌ ಗೆ ಇಲ್ಲಿ ಕ್ಲಿಕ್ಕಿಸಿ 

8:27 AM

ಅಮಿತ್ ಶಾ ಜೊತೆ ನಡೆದು ಬಂದು ಮತ ಚಲಾಯಿಸಿದ ಪ್ರಧಾನಿ ಮೋದಿ

ಗಾಂಧಿನಗರ ಲೋಕ ಸಭಾ ಕ್ಷೇತ್ರದಲ್ಲಿ ಗೃಹ ಸಚಿವ ಬಿಜೆಪಿ ಅಭ್ಯರ್ಥಿಯಾಗಿದ್ದರು, ಪ್ರಧಾನಿ ಮೋದಿಯೂ ಇದೇ ಕ್ಷೇತ್ರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ನಡೆದುಕೊಂಡು ಬಂದು, ಅಭಿಮಾನಿಗಳನ್ನು ಮಾತನಾಡಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಮೋದಿ. 

ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

8:24 AM

LIVE: Dharwad Elections 2024: ಕೇಂದ್ರ ಸಚಿವ ಜೋಶಿಗೆ ವಿನೋದ್ ಅಸೂಟಿ ಸೆಡ್ಡು

ಧಾರವಾಡ  ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ಕಾಂಗ್ರೆಸ್‌‌ನಿಂದ ವಿನೋದ್ ಅಸೂಟಿ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಕೇಂದ್ರ ಸಚಿವರ ಭವಿಷ್ಯವಿಂದು ನಿರ್ಧಾರವಾಗಲಿದೆ. 

ಧಾರವಾಡ ಚುನಾವಣಾ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

8:21 AM

Koppala Lok Sabha Elections 2024: ಗೆದ್ದ ಬಿಜೆಪಿಗೆ ಯಟ್ವಾಳ್ ಸವಾಲು

ಕೊಪ್ಪಳ ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಕಾಂಗ್ರೆಸ್‌‌ನಿಂದ ರಾಜಶೇಖರ ಹಿಟ್ನಾಳ್ ಮತ್ತು ಬಿಜೆಪಿಯಿಂದ ಡಾ. ಬಸವರಾಜ ಕ್ಯಾವಟರ್‌ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಕೊಪ್ಪಳ ಲೈವ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

8:03 AM

ಅಹ್ಮದಾಬಾದ್‌ನಲ್ಲಿ ಮತ ಚಲಾಯಿಸಿದ ಮೋದಿ

ಅಹ್ಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಮೂರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಭರದಿಂದ ಸಾಗಿದ್ದು, ಗಣ್ಯಾತಿಗಣ್ಯರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅಹ್ಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಚಲಾಯಿಸಿದರು.

| Prime Minister Narendra Modi casts his vote for at Nishan Higher Secondary School in Ahmedabad, Gujarat pic.twitter.com/i057pygTkJ

— ANI (@ANI)

7:13 AM

ಮತದಾನ ಪ್ರಕ್ರಿಯೆ ಹೇಗೆ ಇರುತ್ತದೆ...

7:07 AM

ನಮ್ಮೊಂದಿಗೆ ಹಂಚಿಕೊಳ್ಳಿ ನಿಮ್ಮ ಮತ!

 ನೀವು ಫೋಟೋ ಕಳುಹಿಸಬೇಕಾದ ಲಿಂಕ್‌: https://kannada.asianetnews.com/election/photo-contest

7:03 AM

Lok Sabha Elections 2024: ರಾಜ್ಯದಲ್ಲಿಂದು 2ನೇ ಹಂತದ ಲೋಕಸಭೆ ಸಮರ

ರಾಜ್ಯದಲ್ಲಿ ಎರಡನೇ ಹಾಗೂ ಅಂತಿಮ ಸುತ್ತಿನ ಲೋಕಸಭಾ ಚುನಾವಣೆಯು ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಮಂಗಳವಾರ ಮತದಾನ ನಡೆಯಲಿದೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳ 227 ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ತೀರ್ಮಾನವಾಗಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆ.

ಇಂದು ರಾಜ್ಯದಲ್ಲಿ 2ನೇ ಹಂತದ ಮತದಾನ

6:44 PM IST:

ಬಳ್ಳಾರಿ: ಸಾಂಪ್ರದಾಯಿಕ ಲಂಬಾಣಿ ನೇತ್ಯ ಮಾಡುತ್ತಾ ಬಂದು ಮತ ಚಲಾಯಿಸಿದ ಮಹಿಳೆಯರು. ಬಳ್ಳಾರಿ ತಾಲೂಕಿನ ಹೊನ್ನಳ್ಳಿ ತಾಂಡಾದಲ್ಲಿ ಹಬ್ಬಕ್ಕೆ ಬರುವ ರೀತಿ ಮತ ಚಲಾಯಿಸಲು ಬಂದ ಮಹಿಳೆಯರು. ಲಂಬಾಣಿ ಸಾಂಸ್ಕೃತಿಕ ಉಡುಗೆ ತೊಟ್ಟು ನೃತ್ಯ ಮಾಡುತ್ತಾ  ಮತಗಟ್ಟೆಗೆ ಆಗಮನ. ಮತಗಟ್ಟೆ ಮುಂದೆ ಕೆಲ ಕಾಲ ಲಂಬಾಣಿ ಹಾಡಿಗೆ ಹೆಜ್ಜೆ ಹಾಕಿದ ಮಹಿಳೆಯರು. ಚುನಾವಣೆ ಮಹತ್ವ ಸಾರಲು ಹೊನ್ನಳ್ಳಿ ತಾಂಡಾದ ಲಂಬಾಣಿ ಮಹಿಳೆಯರಿಂದ .

5:56 PM IST:

ಯಾದಗಿರಿ: ಸುರಪುರ ಉಪಚುನಾವಣೆಗೆ ಮತದಾನ ಹಿನ್ನೆಲೆ ಬಿಜೆಪಿ(BJP)-ಕಾಂಗ್ರೆಸ್(Congress) ಕಾರ್ಯಕರ್ತರ ಮಧ್ಯೆ ಪರಸ್ಪರ ಕಲ್ಲು ತೂರಾಟ ನಡೆಸಲಾಗಿದೆ. ಕಲ್ಲು ತೂರಾಟದ(Pelted stones) ವೇಳೆ ಓರ್ವನ ತಲೆಗೆ ಗಂಭೀರ ಗಾಯವಾಗಿದೆ. ಯಾದಗಿರಿ( Yadgir) ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ

5:03 PM IST:

ವಿಜಯಪುರ: ಮತದಾನ ಮಾಡಲು ಬಂದಾಗ ಕಣ್ಣಿರಿಟ್ಟ ವೃದ್ಧ. ವಿಜಯಪುರದ ಗೋಳಗುಮ್ಮಟ ಏರಿಯಾದ ಬೂತ್ ನಂಬರ್ 168 ರಲ್ಲಿ ಘಟನೆ. ಮತ ಹಾಕಲು ಬಂದು ಕಣ್ಣೀರಿಟ್ಟ 83 ವರ್ಷದ ವೃದ್ಧ ಯಲ್ಲಪ್ಪ. ಮಕ್ಕಳು, ಸಂಬಂಧಿಕರು ಯಾರು ಸಹ ನೋಡಿಕೊಳ್ಳಲು ಇಲ್ಲ ಎಂದು ಕಣ್ಣೀರು. ನಾನು ಬದುಕಿದ್ದೇನೆ ಎಂದು ತೋರಿಸೋಕೆ ಮತ ಹಾಕಲು ಬಂದಿದ್ದೇನೆ ಎಂದು ವೃದ್ಧನ ಕಣ್ಣೀರು. ಗೋಳಗುಮ್ಮಟ ಏರಿಯಾ ನಿವಾಸಿ ಯಲ್ಲಪ್ಪ.

4:55 PM IST:

ಕಾರವಾರ, ಉತ್ತರಕನ್ನಡ: ಮತದಾನ ಮಾಡಲು ಆಗಮಿಸಿದ ಸಂಸದ ಅನಂತ ಕುಮಾರ್ ಹೆಗಡೆ. ಶಿರಸಿ ಕೆಎಚ್‌ಬಿ ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರಕ್ಕೆ ಆಗಮನ. ಪತ್ನಿ ಶ್ರೀರೂಪ ಜತೆ ಮತದಾನ ಕೇಂದ್ರಕ್ಕೆ ಆಗಮಿಸಿದ ಸಂಸದರು. ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದ ಸಂಸದ ಅನಂತ ಕುಮಾರ್ ಹೆಗಡೆ. ಪ್ರಾರಂಭದಲ್ಲಿ ಸಂಸದರ ಆಪ್ತ ಸಹಾಯಕ ಸಂಸದರ ಬದಲು ಸರತಿ ಸಾಲಿನಲ್ಲಿ ನಿಂತಿದ್ದರು. ಬಳಿಕ ಪತ್ನಿ ಜತೆ ಸರತಿ ಸಾಲಿನಲ್ಲಿ ತೆರಳಿ ಮತ ಚಲಾಯಿಸಿದ ಸಂಸದ ಅನಂತ ಕುಮಾರ್ ಹೆಗಡೆ.

3:55 PM IST:

3 ಗಂಟೆವರೆಗಿನ ಮತದಾನ ಪ್ರಮಾಣ

ಅಸ್ಸಾಂ 63.08%
ಬಿಹಾರ 46.69%
ಛತ್ತೀಸ್‌ಗಢ 58.19%
ದಾದ್ರಾ 52.43%
ಗೋವಾ 61.39%
ಗುಜರಾತ್ 47.03%
ಕರ್ನಾಟಕ 54.20%
ಮಧ್ಯ ಪ್ರದೇಶ 54.09%
ಮಹಾರಾಷ್ಟ್ರ 42.63%
ಉತ್ತರ ಪ್ರದೇಶ 46.78%
ಪಶ್ಚಿಮ ಬಂಗಾಳ 63.11%

3:34 PM IST:

ಶಿವಮೊಗ್ಗ: ಪಾರ್ಕಿನ್ಸನ್ ರೋಗದಿಂದ ಬಳಲುತ್ತಿರುವ 84 ವರ್ಷದ ರಕ್ತ ದಾನಿ, ಸಾಮಾಜಿಕ ಕಾರ್ಯಕರ್ತ ಯಜ್ಞನಾರಾಯಣ್ ಅವರು ಆ್ಯಂಬುಲೆನ್ಸ್‌ನಲ್ಲಿ ಹೋಗಿ ತಮ್ಮ ಹಕ್ಕು ಚಲಾಯಿಸಿ, ಮತದಾನದಿಂದ ದೂರ ಉಳಿಯೋ ಯುವಕರಿಗೆ ಮಾದರಿಯಾಗಿದ್ದಾರೆ. ಪುತ್ರ ವಿನಯ್ ಶಿವಮೊಗ್ಗ ಅವರು ತಮ್ಮ ತಂದೆಗೆ ಹಕ್ಕು ಚಲಾಯಿಸಲು ಸಹಕರಿಸಿದರು. 

3:30 PM IST:

ಚಿಕ್ಕೋಡಿ: ಬಿಜೆಪಿ ಪರ‌ ಮತ ಚಲಾಯಿಸುವಂತೆ ಮತಗಟ್ಟೆ ಒಳಗಿನ ಅಧಿಕಾರಿ ಒತ್ತಾಯ ಆರೋಪ. ಕಾಂಗ್ರೆಸ್ ಕಾರ್ಯಕರ್ತರಿಂದ ಮತಗಟ್ಟೆ ಎದುರು ಪ್ರತಿಭಟನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋಟೆಬಾಗ ಶಾಲೆಯ ಬೂತ್ ನಂಬರ್ 162 ರಲ್ಲಿ ಘಟನೆ. ಚುನಾವಣಾ ಸಿಬ್ಬಂದಿಯಿಂದ ಬಿಜೆಪಿ ಪರ ಮತ ಚಲಾವಣೆಗೆ ಒತ್ತಾಯ. ಮಹಿಳೆಯರಿಗೆ ಬಿಜೆಪಿ ಪರ ಮತಚಲಾಯಿಸುವಂತೆ ಒತ್ತಾಯ. ವಿಷಯ ತಿಳಿದು ಮತಗಟ್ಟೆಗೆ ಆಗಮಿಸಿದ ಕೈ ಕಾರ್ಯಕರ್ತರು. ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ವಾಗ್ವಾದ.

2:43 PM IST:

ಬೆಳಗ್ಗೆ 1 ಗಂಟೆಯ ತನಕ

ಅಸ್ಸಾಂ-  ಶೇ 45.88

ಬಿಹಾರ- ಶೇ 36

ಛತ್ತೀಸ್‌ಗಢ- ಶೇ 46

ಗೋವಾ - ಶೇ 49

ದಾದ್ರಾ ನಗರಹಾವೇಲಿ -ಶೇ -39

ಗುಜರಾತ್- ಶೇ 37

ಕರ್ನಾಟಕ - ಶೇ 41

ಮಧ್ಯಪ್ರದೇಶ - ಶೇ 44

ಯು ಪಿ - ಶೇ 38

ಮಹಾರಾಷ್ಟ್ರ - ಶೇ 31

ಪಶ್ಚಿಮ ಬಂಗಾಳ- ಶೇ 49

1:11 PM IST:

ರಾಯಚೂರು: ಚುನಾವಣಾ ಕಾವು, ಬಿಸಿಲಿನ ಝಳಕ್ಕೆ ತತ್ತರಿಸಿದ ಮತದಾರ ಪ್ರಭುಗಳು. ಬೆಳಗ್ಗೆಯಿಂದ ಉತ್ಸಾಹದಿಂದ ಮತದಾನ ಮಾಡಿದ ಮತದಾರರು. ಸೂರ್ಯನ ಪ್ರತಾಪ ನೆತ್ತಿಗೇರುತ್ತಿದ್ದಂತೆ ನಿಧಾನ ಗತಿಯಲ್ಲಿ ಸಾಗಿದ ಮತದಾನ. ಬಿಸಿಲಿನ ತೀವ್ರತೆಗೆ ಬಸವಳಿಯುತ್ತಿರುವ ವಯೋ ವೃದ್ಧರು ಮತ್ತು ಮಹಿಳೆಯರು. ರಾಯಚೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆ. ಬಿಸಿಲಿಗೆ ಹೆದರಿ ಮನೆಯಿಂದ ಮತಗಟ್ಟೆಗೆ ಬರಲು ಮತದಾರರು ಹಿಂದೇಟು. ಬಹುತೇಕ ಮತಹಟ್ಟೆಗಳು ಮತದಾರರು ಇಲ್ಲದೆ ಖಾಲಿ ಖಾಲಿ. ರಾಯಚೂರು ನಗರದ ಮತಗಟ್ಟೆ 79ರಲ್ಲಿ 1183 ಮತದಾರರು ಇದ್ದಾರೆ. 1183ರಲ್ಲಿ ಈವರೆಗೆ ಕೇವಲ 383 ಮತದಾನ ಮಾತ್ರ ಮಾಡಿದ ಮತದಾರರು.

1:08 PM IST:

ಜೂನ್ 4 ರ ನಂತರ ಯಾರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ಅನ್ನೋದು ಗೊತ್ತಾಗುತ್ತದೆ. ಜನಾರ್ದನ ರೆಡ್ಡಿ ಆಟ ಕೊಪ್ಪಳದಲ್ಲಿ ನಡೆಯಲ್ಲ.  ಜನಾರ್ದನ ರೆಡ್ಡಿಗೆ ಪುಲ್ವಾಮ ದಾಳಿ, ಸರ್ಜಿಕಲ್‌ ಸ್ಟ್ರೈಕ್ ಬಳಿ ಗಂಧಗಾಳಿ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ. ತಾಕತ್ ಇದ್ರೆ ಎರಡು ಕೋಟಿ ಉದ್ಯೋಗ ನೀಡೋ ಹೇಳಿಕೆ ಬಗ್ಗೆ ಉತ್ತರ ನೀಡಲಿ ಎಂದು ಜನಾರ್ದನ ರೆಡ್ಡಿ ಸವಾಲ್‌ ಹಾಕಿದ ಸಚಿವ ಶಿವರಾಜ್ ತಂಗಡಗಿ  

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:42 PM IST:

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭದ್ರಕೋಟೆಯಾಗಿದ್ದ ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಖರ್ಗೆ ಅಳಿಯ ಡಾ. ರಾಧಾಕೃಷ್ಣ ದೊಡ್ಡಮನಿ ಹಾಗೂ ಬಿಜೆಪಿಯಿಂದ ಹಾಲಿ ಸಂಸದ ಉಮೇಶ್ ಜಾಧವ್ ಕಣಕ್ಕಿಳಿದಿದ್ದಾರೆ.

ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

12:22 PM IST:

ಬೆಳಗಾವಿ ಲೋಕಸಭಾ ಕ್ಷೇತ್ರವು ಪ್ರಭಾವಿ ನಾಯಕರ ಪ್ರತಿಷ್ಠೆಯ ಕಣವಾಗಿದೆ. ರಾಜಕೀಯ ಅನುಭವಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಹೊಸಬ ಮೃಣಾಲ್ ಹೆಬ್ಬಾಳ್ಕರ್ ಸ್ಪರ್ಧೆಯೊಡ್ಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಜೊತೆ ಬಂದು ಮತ ಚಲಾಯಿಸಿದ್ದಾರೆ. ತುಳಸಿ ಮಾಲೆ ಹಾಕಿ, ಕೇಸರಿ ಸೀರೆಯಲ್ಲಿ ಲಕ್ಷ್ಮಿ ಬಂದಿದ್ದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. 

ಬೆಳಗಾವಿ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

11:53 AM IST:

ಬಳ್ಳಾರಿ: ಕೊಳಗಲ್ ಗ್ರಾಮದ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಣ ಸಿಬ್ಬಂದಿ ರಕ್ತದೊತ್ತಡ  ಕಡಿಮೆಯಾಗಿ ಪ್ರಜ್ಞಾಹಿನರಾಗಿದ್ದ ಲಕ್ಷ್ಮಿ ದೇವಿ ಇವರಿಗೆ ಆಂಬ್ಯುಲೇನ್ಸ್‌ ಮೂಲಕ, ವಿಮ್ಸ್‌ಗೆ  ಸಿಬ್ಬಂದಿ ಸಹಿತ ರೇಪರ್‌ ಮಾಡಿ ಚಿಕಿತ್ಸೆ ನೀಡಲಾಗಿದೆ. ಡಾ ಅಬ್ದುಲ್ಲಾ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ  ಖುದ್ದು ಮೇಲ್ವಿಚಾರಣೆ ಕೈಗೊಂಡಿದ್ದು, ಸಿದ್ದಮ್ಮನಹಳ್ಳಿ ವೈದ್ಯಾಧಿಕಾರಿ ಡಾ ದಿವ್ಯ ನಿಗಾವಹಿಸಿದ್ದು ಸದರಿಯವರು ಗುಣಮುಖರಾಗಿದ್ದಾರೆ.

ಬಳ್ಳಾರಿ: ಕುಡುತಿನಿ ಮತದಾನ ಕೇಂದ್ರದ ಸಿಬ್ಬಂದಿಯವರಿಗೆ ರಕ್ತದೊತ್ತಡದ ಸಮಸ್ಯೆ ಕಂಡು ಬಂದ ಹಿನ್ನೆಲೆ ಆಂಬ್ಯುಲೆನ್ಸ್ ‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದ್ದು ಗುಣಮುಖರಾಗುದ್ದಾರೆ.

11:47 AM IST:

ಬೆಳಗ್ಗೆ 11 ಗಂಟೆಯ ತನಕ

ಅಸ್ಸಾಂ-  ಶೇ 27.34
ಬಿಹಾರ- ಶೇ 24.41
ಛತ್ತೀಸ್ಗಢ- ಶೇ 29.9
ಗೋವಾ ಶೇ 30.94
ದಾದ್ರಾ ನಗರಹಾವೇಲಿ -ಶೇ 24.69
ಗುಜರಾತ್- ಶೇ 24.35
ಕರ್ನಾಟಕ - ಶೇ 24.48

ಮಧ್ಯಪ್ರದೇಶ - ಶೇ 30.21

ಯು ಪಿ - ಶೇ 26.12

ಮಹಾರಾಷ್ಟ್ರ - ಶೇ 18.18

ಪಶ್ಚಿಮ ಬಂಗಾಳ- ಶೇ 32.81

11:14 AM IST:

ಮಧ್ಯಪ್ರದೇಶ ದಲ್ಲಿ ಪ್ರಧಾನಿ ಮೋದಿ ಮಾತು. ನಿಮ್ಮ ಒಂದು ಮತ ಭಾರತವನ್ನು 5 ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಿದೆ.  ಭಾರತ ಜಾಗತಿಕ ಮಟ್ಟದಲ್ಲಿ ಪ್ರಭಾವ ಹೆಚ್ಚಿಸಿ ಕೊಂಡಿದೆ.  70 ವರ್ಷಗಳ ಬಳಿಕ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ. ಆದಿವಾಸಿ ಮಗಳನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಬಿಜೆಪಿ. ಮಹಿಳೆಯರಿಗೆ ಮೀಸಲಾತಿ ನೀಡಿದೆ. ನಿಮ್ಮ ಒಂದು ಮತ 500 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತು. ಭವ್ಯ ರಾಮನನ್ನಾಗಿ ಮಾಡಿತು  ಲಲ್ಲಾ ದೇವಸ್ಥಾನ.

मध्य प्रदेश के खरगोन में उमड़ा ये जनसैलाब इस बात का प्रमाण है कि पूरे देश में भाजपा-एनडीए की अभूतपूर्व लहर है।https://t.co/qNE0m5KLd7

— Narendra Modi (@narendramodi)

10:53 AM IST:

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 17 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮತದಾರರ ಒಲವು ಯಾರ ಕಡೆಗಿದೆ ಎಂಬುದನ್ನು ಜೂನ್ 4ರ ತನಕ ಕಾದು ನೋಡಬೇಕಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಹಕ್ಕು ಚಲಾಯಿಸಿದ ಕ್ಷಣವಿದು

ಫೋಟೋಸ್‌ಗೆ ಇಲ್ಲಿ ಕ್ಲಿಕ್ ಮಾಡಿ

10:48 AM IST:

ಸಖಿ ಮತಗಟ್ಟೆಗಳಲ್ಲಿ ಮತದಾರರಿಗೆ ಪಿಂಕ್ ಕಲರ್ ಶರಬತ್ತು ನೀಡಿ ಸ್ವಾಗತ.  ಮತಚಲಾಯಿಸಿ ಖುಷಿ ಪಟ್ಟ ಮತದಾರರು. ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತೆರೆಯಲಾದ ಪಿಂಕ್ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದ ಮತದಾರರಿಗೆ  ಪಿಂಕ್ ಕಲರ್ ಶರಬತ್ತು ನೀಡುವ ಮೂಲಕ ಚಾಲನೆ ನೀಡಲಾಗಿದೆ. ಪಿಂಕ್ ಮತಗಟ್ಟೆಗೆ ಶಾಮಿಯಾನ, ಸ್ವಾಗತ ಫಲಕ, ಸೆಲ್ಫಿ ಸ್ಟ್ಯಾಂಡ್, ಫಿಕ್ ಕಲರ್ ಶರಬತ್ತು, ಮಹಿಳಾ ಸಿಬ್ಬಂದಿಯೇ ಇರುವುದು ವಿಶೇಷವಾಗಿತ್ತು. ಸಖಿ ಮತಗಟ್ಟೆಯಲ್ಲಿ ಮತದಾರರು ಮತ ಚಲಾಯಿಸಿ ಖುಷಿಪಟ್ಟರು. ಸೆಲ್ಫಿ ಸ್ಟ್ಯಾಂಡ್ ಬಳಿ ಫೋಟೋ ಕ್ಲಿಕ್ಕಿಸಿಕೊಂಡರು.

11:24 AM IST:

ಕಾರವಾರ, ಉತ್ತರಕನ್ನಡ: ಪತ್ನಿಯ ಗೆಲುವಿಗಾಗಿ ನಟ ಶಿವರಾಜ್ ಕುಮಾರ್ ಟೆಂಪಲ್ ರನ್. ಶಿರಸಿ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ. ಪತ್ನಿಯ ಜೊತೆ ಬಂದು ಶ್ರೀ ಮಾರಿಕಾಂಬೆಗೆ ಉಡಿ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ ಶಿವರಾಜ್ ಕುಮಾರ್. ಶಿವಮೊಗ್ಗ ಲೋಕ ಅಖಾಡದಲ್ಲಿ ಕಣಕ್ಕಿಳಿದಿರುವ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್. ಕಳೆದ ಒಂದೂವರೆ ತಿಂಗಳಿನಿಂದ ಪತ್ನಿಯ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶಿವರಾಜ್ ಕುಮಾರ್. ಇಂದು ಮತದಾನ ಹಿನ್ನೆಲೆ ಶಿರಸಿ ಶ್ರೀ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ.

10:37 AM IST:

ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಹಿನ್ನೆೆಲೆಯಲ್ಲಿ ಎಲ್ಲೆಡೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸುಮಾರು 4 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. 

10:26 AM IST:

ರಾಜ್ಯದ ವಿವಿಧೆಡೆ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿದ್ದು, ಯಾದಗಿರಿ ಜಿಲ್ಲೆಯ ಕೆಲವು ಮತಗಟ್ಟೆಗಳ ಫೋಟೋಸ್ ಇಲ್ಲಿವೆ. 

10:22 AM IST:

ಬೀದರ್‌ ನಲ್ಲಿ ಬಿಜೆಪಿಯಿಂದ  ಕೇಂದ್ರ ಸಚಿವ ಭಗವಂತ ಖೂಬಾ ಸ್ಪರ್ಧಿಯಾಗಿದ್ದರೆ, ಕಾಂಗ್ರೆಸ್‌ ನಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ, ಯವ ನಾಯಕ ಸಾಗರ್ ಖಂಡ್ರೆ ಸ್ಪರ್ಧಿಸುತ್ತಿದ್ದಾರೆ.

ಬೀದರ್ ಚುನಾವಣಾ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

10:16 AM IST:

ಭಾರತಕ್ಕೆ ಮೂರನೇ ಹಂತದ ಹಾಗೂ ಕರ್ನಾಟಕಕ್ಕೆ ಎರಡನೇ ಹಾಗೂ ಅಂತಿದ ಮತದಾನ ನಡೆಯುತ್ತಿದ್ದು, ಒಟ್ಟು 12 ರಾಜ್ಯಗಳ 95 ಸ್ಥಾನಗಳಿಗೆ ಲೋಕಸಭೆ ಚುನಾವಣೆ ನಡೆಯುತ್ತಿದೆ. 95 ಸ್ಥಾನಗಳಿಗೆ ಒಟ್ಟು 1351 ಮಂದಿ ಸ್ಪರ್ಧಿಸಿದ್ದಾರೆ. ಈ ಪೈಕಿ ಗುಜರಾತ್‌ನಲ್ಲಿ ಎಲ್ಲ 25 ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದ್ದು, ಗರಿಷ್ಠ 658 ಜನರು ಸ್ಪರ್ಧಿಸಿದ್ದರೆ, ಮಹಾರಾಷ್ಟ್ರದಲ್ಲಿ ಮಂಗಳವಾರ ಚುನಾವಣೆ ನಡೆವ 11 ಸ್ಥಾನಕ್ಕೆ 519  ಮಂದಿ ಕಣದಲ್ಲಿದ್ದಾರೆ. ಮೂರನೇ ಹಂತದ ಚುನಾವಣೆಯೊಂದಿಗೆ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ 284 ಸ್ಥಾನಗಳ ಚುನಾವಣೆ ಮುಕ್ತಾಯಗೊಳ್ಳಲಿದೆ. ಇನ್ನೂ 4 ಹಂತದ ಚುನಾವಣೆ ಬಾಕಿ ಇದ್ದು ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಚುನಾವಣೆ ಕಣದಲ್ಲಿರುವ ಪ್ರಮುಖರು:
ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಸುಪ್ರಿಯಾ ಸುಳೆ, ಡಿಂಪಲ್‌ ಯಾದವ್‌, ಧಾರವಾಡ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ, ಶಿವಮೊಗ್ದಲ್ಲಿ ಡಾ.ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಚುನಾವಣೆಯ ಕಣದಲ್ಲಿರುವ ಪ್ರಮುಖ ಸ್ಪರ್ಧಾಳುಗಳಾಗಿದ್ದಾರೆ.

ಯಾವ ರಾಜ್ಯಗಳಲ್ಲಿ ಚುನಾವಣೆ?:
ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಗುಜರಾತ್‌, ದಾದ್ರಾ ಮತ್ತು ನಗರ್‌ ಹವೇಲಿ, ದಮನ್ ಮತ್ತು ದಿಯು,

10:10 AM IST:

ಮಗ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕೇಸರಿ ಸೀರೆ, ತುಳಸಿ ಮಾಲೆಯೊಂದಿಗೆ ಬಂದು ಮತದಾನ ಮಾಡಿದರು. 

10:07 AM IST:

ಕಾಂಗ್ರೆಸ್ ಶಾಸಕ ರಾಜವೆಂಕಟಪ್ಪ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸುರಪುರ ವಿಧಾನಸಭಾ ಚುನಾವಣೆಗೂ ಇಂದು ಮತದಾನ ನಡೆಯುತ್ತಿದ್ದು, ಮಾಜಿ ಸಚಿವ, ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ್ (ರಾಜು ಗೌಡ) ಹಾಗೂ ಕುಟುಂಬಸ್ಥರು ತಮ್ಮ ಮತ ಚಲಾಯಿಸಿದರು. 

10:03 AM IST:

 ಚುನಾವಣಾ ಕರ್ತವ್ಯನಿರತರಾಗಿದ್ದ ವೇಳೆಯೇ ಇಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಸಂಭವಿಸಿದೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:02 AM IST:

ಕುಕನೂರು (ಕೊಪ್ಪಳ): ಪಟ್ಟಣದ 19ನೇ ವಾರ್ಡಿನಲ್ಲಿ ಮತದಾನ ಬಹಿಷ್ಕಾರ. ಬೆಳಿಗ್ಗೆಯಿಂದ ಇದುವರೆಗೂ ಒಬ್ಬರೂ ಮತದಾನ ಮಾಡಿಲ್ಲ. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ. ತಾಲೂಕಾಡಳಿತ ಸೌಧ, ಕೋರ್ಟ್, ಬುದ್ಧ, ಬಸವ ಅಂಬೇಡ್ಕರ್ ಭವನ ಕಟ್ಟಡಕ್ಕೆ ಜಾಗ ನಿಗದಿ . ಧಾರ್ಮಿಕ ದತ್ತಿ ಇಲಾಖೆಯಿಂದ ಬಾಡಿಗೆ ರೂಪದಲ್ಲಿ ಕಟ್ಟಡಕ್ಕೆ ಆದೇಶ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಿರೋಧ. ಗುದ್ನೇಪ್ಪನಮಠ ದೇವಸ್ಥಾನದ ಜಾಗ ಕೈ ಬಿಡುವಂತೆ ಗ್ರಾಮಸ್ಥರ ಆಗ್ರಹ. ಮತದಾನ ಮಾಡದೆ ಬಹಿಷ್ಕರಿಸಿದ ನಿವಾಸಿಗಳು. 1040 ಮತಗಳಿರುವ ಗುದ್ನೇಪ್ಪನಮಠದ ಬೂತ್. 

11:12 AM IST:

ಬಿಸಿಲಲ್ಲೂ ಜನರು ಮತಗಟ್ಟೆಗೆ ಆಗಮಿಸುತ್ತಿದ್ದು, ಬಿರುಸಿನ ಮತದಾನ ನಡೆಯುತ್ತಿದೆ. ಬಿಜೆಪಿ ರಾಜಾ ಅಮರೇಶ್ವರ್ ನಾಯಕ್ ಹಾಗೂ ಕಾಂಗ್ರೆಸ್ ನ ಕುಮಾರ್ ನಾಯಕ್ ಕಣದಲ್ಲಿದ್ದು, ಮತದಾರ ಪ್ರಭುವಿನ ಒಲವು ಯಾರು ಕಡೆಗೆ ಎನ್ನುವುದು ಕಾದು ನೋಡಬೇಕು. 

ರಾಯಚೂರು ಚುನಾನಣೆಯ ಲೈವ್ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

9:55 AM IST:

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಕೈ ನಾಯಕ ಇ ತುಕಾರಾಂ ಸೆಡ್ಡು ಹೊಡೆದಿದ್ದಾರೆ. ಆದರೆ, ಮತದಾರರ ಒಲವು ಯಾರಿಗಿದೆ ಎಂದು ಇಂದು ತೀರ್ಮಾನವಾಗಲಿದೆ.

ಲೈವ್ ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ
 
11:12 AM IST:

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಬಳಿಕ  ಅಮಿತ್ ಶಾ  ಹೇಳಿಕೆ. ಬಿಸಿಲಿನ ನಡುವೆಯೂ ಮತದಾನ ತುಂಬಾ ಚನ್ನಾಗಿ ನಡೆಯುತ್ತಿದೆ. ಗುಜರಾತಿನ ಮತದಾರರು ಶೇ 20 ರಷ್ಟು ಮತದಾನ ಆಗಿದೆ.  ಈ ಪ್ರಜಾಪ್ರಭುತ್ವದ ಹಬ್ಬದ ಸಂದರ್ಭದಲ್ಲಿ ನಾನು ಎಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ. ದೇಶವಾಸಿಗಳಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು  ಮನವಿ ಮಾಡುತ್ತಿದ್ದೇನೆ. 

ಕರ್ನಾಟಕವು ಇಂದು ಮತ ಚಲಾಯಿಸುವ ಮೂಲಕ ಲೋಕಸಭಾ ಚುನಾವಣೆ 2024 ನ್ನು ಸಮಾಪನಗೊಳಿಸಲಿದೆ. ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ, ರೈತರಿಗೆ ಬೆಂಬಲ ಮತ್ತು ಬಡವರಿಗೆ, ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ರಾಜ್ಯದ ಶ್ರೇಯೋಭಿವೃದ್ಧಿಗೆ ಹೂಡಿಕೆ ಮುಂದುವರಿಸುವ ಸರ್ಕಾರಕ್ಕೆ ಮತ ನೀಡಿ ಎಂದು ನಾನು ಜನರಲ್ಲಿ ಮನವಿ…

— Amit Shah (Modi Ka Parivar) (@AmitShah)

9:44 AM IST:

ಬೆಳಗ್ಗೆ 9  ಗಂಟೆಯ ತನಕ

ಅಸ್ಸಾಂ-  ಶೇ 10.12
ಬಿಹಾರ- ಶೇ 10.3
ಛತ್ತೀಸ್‌ಗಢ - ಶೇ 13.24
ಗೋವಾ ಶೇ 12.35
ದಾದ್ರಾ- ಶೇ 10.03
ಗುಜರಾತ್- ಶೇ 9.87
ಕರ್ನಾಟಕ - ಶೇ 9.45
ಮಧ್ಯಪ್ರದೇಶ - ಶೇ 14.22
ಯು ಪಿ - ಶೇ 12.23
ಮಹಾರಾಷ್ಟ್ರ - ಶೇ 6.64
ಪಶ್ಚಿಮ ಬಂಗಾಳ- ಶೇ 15.13

10:46 AM IST:

ಬೆಳಗ್ಗೆ 9 ಗಂಟೆಯವರೆಗೆ
ಬಾಗಲಕೋಟೆ  8.59
ಬೆಳಗಾವಿ     9.48
ಬಳ್ಳಾರಿ     10.37
ಬೀದರ್​     8.90
ಬಿಜಾಪುರ    9.26
ಚಿಕ್ಕೋಡಿ     10.81
ದಾವಣಗೆರೆ     9.11
ಕಲಬುರುಗಿ     8.71
ದಾವಣೆಗೆರೆ     9.11
ಧಾರವಾಡ    9.38
ಹಾವೇರಿ     8.62
ಕೊಪ್ಪಳ    8.79
ರಾಯಚೂರು 8.27
ಶಿವಮೊಗ್ಗ     11.39
ಉ.ಕನ್ನಡ      11.7
ಒಟ್ಟು         9.45

9:37 AM IST:

ಬಾಗಲಕೋಟೆ ಜಿಲ್ಲೆಯಲ್ಲಿ ಕಿರಿಯ ಸಂಯುಕ್ತಾ ಪಾಟೀಲ್ ಸ್ಪರ್ಧಿಸುತ್ತಿದ್ದು, ಹೊಸ ಮುಖಕ್ಕೆ ಕ್ಷೇತ್ರದ ಮತದಾರರು ಹೇಗೆ ಮತ ಹಾಕುತ್ತಾರೆ ಎಂಬುದನ್ನು ನೋಡಬೇಕು. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

9:29 AM IST:

ದಾವಣೆಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಹಾಗೂ ಸಂಸದ ಸಿದ್ಧೇಶ್ವರ್ ಪತ್ನಿ ಗಾಯತ್ರಿ ಅಖಾಡದಲ್ಲಿದ್ದು, ಯಾರೇ ಗೆದ್ದರೂ ಈ ಕ್ಷೇತ್ರ ಇದೇ ಮೊದಲು ಮಹಿಳೆಯನ್ನು ಸಂಸತ್ತಿಗೆ ಕಳುಹಿಸಿದಂತಾಗುತ್ತದೆ. 

ದಾವಣಗೆರೆ ಲೈವ್ ಅಪ್‌ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

9:24 AM IST:

ಎರಡನೇ ಹಂತದ ಮತದಾನ ಶುರುವಾಗಿದೆ. ಈ ಬಾರಿ 17 ಅಭ್ಯರ್ಥಿಗಳು ಮೊದಲ ಬಾರಿ ಲೋಕ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕದನಕಣದಲ್ಲಿ ಕಾವು ಜೋರಾಗಿದೆ. 227 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾದ್ರೆ..ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ನೇರಾ ನೇರಾ ಪೈಪೋಟಿ ಏರ್ಪಟ್ಟಿದೆ. 2.59 ಕೋಟಿ ಮಂದಿ ಮತದಾನ ಮಾಡಲಿದ್ದಾರೆ.

8:48 AM IST:

ರಾಜ್ಯದ 14 ಮತ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದ್ದು, ಕೆಲವೆಡೆ ವಿಶೇಷ ಬೂತ್ ಸ್ಥಾಪಿಸಲಾಗಿದೆ. ಆಯಾ ಕ್ಷೇತ್ರದ ವಿಶೇಷತೆವುಳ್ಳು ಬೂತ್ ಇದಾಗಿದ್ದು, ಶಿವಮೊಗ್ದಲ್ಲಿ ಚುನಾವಣಾ ಅಧಿಕಾರಿಗಳು ವಿಶೇಷ ರಾಜ ಉಡುಗೆಯಲ್ಲಿ ಅಲಂಕೃತಗೊಂಡಿದ್ದು ವಿಶೇಷವಾಗಿದೆ. 

ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ

8:41 AM IST:

14ಕ್ಕೆ 14 ಸ್ಥಾನಗಳನ್ನೂ ಗೆದ್ದ ಉತ್ತರ ಕರ್ನಾಟಕ ಸೇರಿ ಬಹುತೇಕ ಬಿಜೆಪಿ ಬಾಹುಳ್ಯದ ರಾಜ್ಯಗಳಾದ ಗುಜರಾತ್, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿಂದು ಮತದಾನವಾಗುತ್ತಿದೆ. ಮತ ಚಲಾಯಿಸಿದ ಮೋದಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ, ಭಾರತದ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಲು ಕರೆ ನೀಡಿದ್ದಾರೆ. 

Voted in the 2024 Lok Sabha elections! Urging everyone to do so as well and strengthen our democracy. pic.twitter.com/PlLCw7Fwe3

— Narendra Modi (@narendramodi)

8:39 AM IST:

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್‌ ಸ್ಪರ್ಧಿಸುತ್ತಿದ್ದಾರೆ. ಯಾರು ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಿದೆ

ಉತ್ತರ ಕನ್ನಡ ಚುನಾವಣಾ ಅಪ್ಡೇಟ್ಸ್‌ ಗೆ ಇಲ್ಲಿ ಕ್ಲಿಕ್ಕಿಸಿ 

10:15 AM IST:

ಗಾಂಧಿನಗರ ಲೋಕ ಸಭಾ ಕ್ಷೇತ್ರದಲ್ಲಿ ಗೃಹ ಸಚಿವ ಬಿಜೆಪಿ ಅಭ್ಯರ್ಥಿಯಾಗಿದ್ದರು, ಪ್ರಧಾನಿ ಮೋದಿಯೂ ಇದೇ ಕ್ಷೇತ್ರದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ನಡೆದುಕೊಂಡು ಬಂದು, ಅಭಿಮಾನಿಗಳನ್ನು ಮಾತನಾಡಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಮೋದಿ. 

ವೀಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ

8:24 AM IST:

ಧಾರವಾಡ  ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮತ್ತು ಕಾಂಗ್ರೆಸ್‌‌ನಿಂದ ವಿನೋದ್ ಅಸೂಟಿ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಕೇಂದ್ರ ಸಚಿವರ ಭವಿಷ್ಯವಿಂದು ನಿರ್ಧಾರವಾಗಲಿದೆ. 

ಧಾರವಾಡ ಚುನಾವಣಾ ಅಪ್‌ಡೇಟ್ಸ್‌ಗೆ ಇಲ್ಲಿ ಕ್ಲಿಕ್ಕಿಸಿ

8:21 AM IST:

ಕೊಪ್ಪಳ ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಕಾಂಗ್ರೆಸ್‌‌ನಿಂದ ರಾಜಶೇಖರ ಹಿಟ್ನಾಳ್ ಮತ್ತು ಬಿಜೆಪಿಯಿಂದ ಡಾ. ಬಸವರಾಜ ಕ್ಯಾವಟರ್‌ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಕೊಪ್ಪಳ ಲೈವ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

10:16 AM IST:

ಅಹ್ಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ಮೂರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಭರದಿಂದ ಸಾಗಿದ್ದು, ಗಣ್ಯಾತಿಗಣ್ಯರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅಹ್ಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಚಲಾಯಿಸಿದರು.

| Prime Minister Narendra Modi casts his vote for at Nishan Higher Secondary School in Ahmedabad, Gujarat pic.twitter.com/i057pygTkJ

— ANI (@ANI)

7:13 AM IST:

7:07 AM IST:

 ನೀವು ಫೋಟೋ ಕಳುಹಿಸಬೇಕಾದ ಲಿಂಕ್‌: https://kannada.asianetnews.com/election/photo-contest

9:33 AM IST: