LIVE: Koppal Elections 2024: ಕೊಪ್ಪಳದಲ್ಲಿ ಮದುವೆ ಮಂಟಪದಿಂದ ಬಂದು ಮತದಾನ ಮಾಡಿದ ನವಜೋಡಿ

By Suvarna News  |  First Published May 7, 2024, 8:13 AM IST

ಕೊಪ್ಪಳ ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಕಾಂಗ್ರೆಸ್‌ ನಿಂದ ರಾಜಶೇಖರ ಹಿಟ್ನಾಳ್ ಮತ್ತು ಬಿಜೆಪಿಯಿಂದ ಡಾ. ಬಸವರಾಜ ಕ್ಯಾವಟರ್‌ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.


ಕೊಪ್ಪಳ (ಮೇ7):  ಕೊಪ್ಪಳ ಲೋಕಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಕಾಂಗ್ರೆಸ್‌ ನಿಂದ ರಾಜಶೇಖರ ಹಿಟ್ನಾಳ್ ಮತ್ತು ಬಿಜೆಪಿಯಿಂದ ಡಾ. ಬಸವರಾಜ ಕ್ಯಾವಟರ್‌ ಪ್ರಮುಖ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಸಂಜೆ 6 ಗಂಟೆಯವರೆಗೆ ಮತದಾನ ಮಾಡಲು ಅವಕಾಶವಿತ್ತು. ಸಂಜೆ 5 ಗಂಟೆವರೆಗೆ  ಶೇ.65.9 ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆವರೆಗೆ  ಶೇ.55.06ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1ಗಂಟೆವರೆಗೆ  ಶೇ.43.02ರಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆವೆರೆಗೆ ಶೇ.24.64ರಷ್ಟು ಮತದಾನವಾಗಿತ್ತು.  ಬೆಳಗ್ಗೆ 9 ಗಂಟೆವರೆಗೆ ಶೇ. 8.79ರಷ್ಟು ಮತದಾನವಾಗಿತ್ತು.

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ  ಮದುವೆ ಬಳಿಕ ಮತದಾನ ಕೇಂದ್ರಕ್ಕೆ ಬಂದು  ವಧು ಮಮತಾ ಹಾಗೂ ವರ ನನ್ನೆಪ್ಪ ಮತದಾನ ಮಾಡಿದರು.

Tap to resize

Latest Videos

undefined

ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಾರಟಗಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತಾಯಿ, ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಕಾರಟಗಿಯ ಮತಗಟ್ಟೆ ಸಂಖ್ಯೆ 126 ರಲ್ಲಿ ಮತದಾನ.

ಸಂಸದ ಕರಡಿ ಸಂಗಣ್ಣ ಮತದಾನ ಮಾಡಿದರು. ಕೊಪ್ಪಳದ ಪಿ ಎಲ್ ಡಿ ಬ್ಯಾಂಕ್ ಮತಗಟ್ಟೆ ಸಂಖ್ಯೆ 133 ರಲ್ಲಿ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

ಗಂಗಾವತಿ  ಶಾಸಕ ಜನಾರ್ದನರೆಡ್ಡಿಯಿಂದ  ಮತದಾನ. ಸ್ವ ಕ್ಷೇತ್ರ ಗಂಗಾವತಿಯಲ್ಲಿ ಮತದಾನದ ಮಾಡಿದ  ರೆಡ್ಡಿ.  ವಾರ್ಡ್ ನಂಬರ್ 12 ರ ಮತಗಟ್ಟೆ ಸಂಖ್ಯೆ 155 ರಲ್ಲಿ ಮತದಾನ.

ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್  ಮತದಾನ ಮಾಡಿದರು. ಕುಷ್ಟಗಿಯ ವಿದ್ಯಾನಗರ ಮತಗಟ್ಟೆಯಲ್ಲಿ ತಂದೆ ಮಾಜಿ ಶಾಸಕ ಕೆ ಶರಣಪ್ಪ ಸೇರಿ ಕುಟುಂಬಸ್ಥರೊಂದಿಗೆ ಮತದಾನ ಮಾಡಿದರು.

 ವೈದ್ಯರ ನಿರ್ಲಕ್ಷ್ಯ ಹಿನ್ನಲೆ, ಗರ್ಭಿಣಿ ಸಾವು ಪ್ರಕರಣ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ 18 ನೇ ವಾರ್ಡಿನಲ್ಲಿ ಜನ ಮತದಾನ ಬಹಿಷ್ಕಾರ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 147 ರಲ್ಲಿ ಮತದಾನ ಬಹಿಷ್ಕಾರವಾಗಿದ್ದು, ಮತಗಟ್ಟೆ ಖಾಲಿ ಹೊಡೆಯುತ್ತಿದೆ . ವೈದ್ಯರ ಮೇಲೆ ಕ್ರಮ ಆಗುವವರೆಗೂ ಮತ ಹಾಕಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಸಿದ್ದಾರೆ.

ಮಾಜಿ ಸಚಿವ ಹಾಲಪ್ಪ ಆಚಾರ ಕುಕನೂರು ತಾಲೂಕಿನ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಮೊಮ್ಮಗಳು ವೀಕ್ಷಾ ಎತ್ತಿಕೊಂಡು ಬಂದು ಮತದಾನ ಮಾಡಿದರು.  ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಗೆಲುವು ನಿಶ್ಚಿತ  ಬಿಜೆಪಿ ಪರ ಜನರ ಒಲವು, ಉತ್ಸಾಹ ಹೆಚ್ಙಿದೆ. ಕ್ಯಾವಟರ್ ಗೆಲುವು ಮೋದಿ ಅವರಿಗೆ ಬಲ ನೀಡಲಿದೆ. ಮೋದಿಯಿಂದ ಭಾರತ ವಿಶ್ವಗುರು ಆಗಲಿದೆ ಎಂದು ಹಾಲಪ್ಪ ಆಚಾರ್ ಹೇಳಿದರು.

ಕೊಪ್ಪಳ‌ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜಶೇಖರ ಹಿಟ್ನಾಳ್ ಅವರು ಮತದಾನ ಮಾಡಿದರು. ಸ್ವಗ್ರಾಮ‌ ಹಿಟ್ನಾಳ್ ದಲ್ಲಿ ಮತಗಟ್ಟೆ ಸಂಖ್ಯೆ 237 ರಲ್ಲಿ ಮತದಾನ ಮಾಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ್ ಕೊಪ್ಪಳ ತಾಲೂಕಿನ ಸ್ವಗ್ರಾಮದಲ್ಲಿ ಮೊದಲು ಮತದಾನ ಮಾಡಿದರು.  ಹಿಟ್ನಾಳ್ ಗ್ರಾಮದ ಮತಗಟ್ಟೆ ಸಂಖ್ಯೆ 237 ರಲ್ಲಿ ಮತದಾನ ಮಾಡಿದರು. ಕೊಪ್ಪಳ‌ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಜಶೇಖರ ಹಿಟ್ನಾಳ್ ಅವರ ಸಹೋದರನಾಗಿರುವ ರಾಜಶೇಖರ ಹಿಟ್ನಾಳ್. ಮತದಾನದ ಬಳಿಕ ಮಾತನಾಡಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.

ಕರ್ನಾಟಕ Election 2024: ಇಂದು ರಾಜ್ಯದಲ್ಲಿ ಕೊನೇ ಹಂತದ ಮತದಾನ, 14 ಜಿಲ್ಲೆಗಳಿಗೆ ವೋಟಿಂಗ್‌

ಮತದಾನಕ್ಕೆ ಜಿಲ್ಲಾ ಆಡಳಿತ ಸಂಪೂರ್ಣ ಸಜ್ಜು ಮಾಡಿದ್ದು,  ಗವಿಸಿದ್ದೇಶ್ವರ ಹೈಸ್ಕೂಲ್ ನಲ್ಲಿ ಮಸ್ಟರಿಂಗ್ ಕಾರ್ಯ ನಡೆಸಿತ್ತು. ಸಿಂಧನೂರು, ಮಸ್ಕಿ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ , ಕೊಪ್ಪಳ ಮತ್ತು ಸಿರಗುಪ್ಪ 8 ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಲೋಕಸಭೆ ವ್ಯಾಪ್ತಿಯಲ್ಲಿ ಒಟ್ಟು 18,66,397 ಮತದಾರರಿದ್ದು, ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. 9,46,763 ಮಹಿಳಾ ಮತದಾರರು ಮತ್ತು 9,19,499 ಪುರುಷ ಮತದಾರರಿದ್ದಾರೆ.135 ಇತರೆ ಮತದಾರರು ಇದ್ದಾರೆ.

LIVE: Dharwad Elections 2024: ಕೇಂದ್ರ ಸಚಿವ ಜೋಶಿಗೆ ವಿನೋದ್ ಅಸೂಟಿ ಸೆಡ್ಡು

ಮತದಾನದ ಹಿನ್ನಲೆಯಲ್ಲಿ 2045 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ. ಮತದಾನಕ್ಕೆ 9987 ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ನೋಟಾ ಸೇರಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನಕ್ಕೆ ಎರಡು ಮೆಶಿನ್ ಗಳನ್ನು ಬಳಕೆ ಮಾಡಲಾಗುತ್ತಿದೆ.

4990 ಬ್ಯಾಲೆಟ್ ಯುನಿಟ್ ಗಳು, 2657 ಕಂಟ್ರೋಲ್ ಯುನಿಟ್, 2755 ವಿವಿ ಪ್ಯಾಟ್ ಗಳ ಬಳಸಲಾಗುತ್ತಿದೆ. ಮತದಾನದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

click me!