ಆಂಧ್ರದಲ್ಲಿ ಹುಟ್ಟಿದ ಪ್ರೀತಿ ಬೆಂಗಳೂರಲ್ಲಿ ದಿ ಎಂಡ್: ಅವನನ್ನ ಫೋನ್‌ನಲ್ಲಿ ಬ್ಲಾಕ್ ಮಾಡಿದ್ದೇ ತಪ್ಪಾಗಿಬಿಡ್ತಾ?

Mar 3, 2023, 12:51 PM IST

ಬೆಂಗಳೂರು(ಮಾ.03): ಅವಳು ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವಳು. ತಾನಾಯ್ತು.. ತನ್ನ ಪಾಡಾಯ್ತು ಅಂತ ಇದ್ದವಳು.. ದೂರದ ಆಂಧ್ರದಲ್ಲಿದ್ದ ತನ್ನ ಹೆತ್ತವರನ್ನ ಚೆನ್ನಾಗಿ ನೋಡಿಕೊಳ್ಳಬೇಕು.. ಅವರುಖುಷಿಯಿಂದ ಇರೋದನ್ನ ನೋಡಿಕೊಳ್ಳಬೇಕು ಅಂತ ಕನಸು ಕಂಡವಳು. ಅದೇ ಕಾರಣಕ್ಕೆ ಅವಳು ಊರು ಬಿಟ್ಟು ಬೆಂಗಳೂರಿಗೆ ಬಂದಿದ್ಲು. ಆದ್ರೆ ಆಕೆಯ ಆ ಕನಸಿಗೆ ತಣ್ಣೀರು ಎರಚಿದವನು ಅವನ ಗೆಳೆಯ. ಪ್ರೀತ್ಸೆ ಪ್ರೀತ್ಸೆ ಅಂತ ಅವಳ ಹಿಂದೆ ಬಿದ್ದ ಆತ ಕೊನೆಗೆ ಅವಳ ಕಥೆಯನ್ನೇ ಮುಗಿಸಿಬಿಟ್ಟ. ಅವನನ್ನ ಪ್ರೀತಿಸಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಅವಳನ್ನ ನಡು ರಸ್ತೆಯಲ್ಲಿ ಕೊಚ್ಚಿ ಕೊಚ್ಚಿ ಕೊಂದುಬಿಟ್ಟ. ಹೀಗೆ ಪಾಗಲ್ ಪ್ರೇಮಿಯಬ್ಬನಿಂದ ಬೀದಿ ಹೆಣವಾದ ನತದೃಷ್ಟ ಹೆಣ್ಣು ಮಗಳ ಕಥೆಯೇ ಇವತ್ತಿನ ಎಫ್ಐಆರ್‌. 

ನಡುರಸ್ತೆಯಲ್ಲಿ... ನೂರಾರು ಜನ ಓಡಾಡುತ್ತಿರುವಾಗ್ಲೇ ಒಬ್ಬ ಹೆಣ್ಣು ಮಗಳನ್ನ ಈ ರೀತಿ ಬರ್ಬರವಾಗಿ ಕೊಲೆ ಮಾಡ್ತಾನೆ ಅಂದ್ರೆ ಏನರ್ಥ..? ಹಾಗಂತ ಆ ಯುವಕ ಮತ್ತು ಕೊಲೆಯಾದವಳಿಗೂ ಅಲ್ಲಿ ದ್ವೇಷವೇನೂ ಇರಲಿಲ್ಲ.. ಇದ್ದಿದ್ದು ಪ್ರೀತಿ.. 5 ವರ್ಷದಿಂದ ಹುಚ್ಚನಂತೆ ಪ್ರೀತಿಸುತ್ತಿದ್ದ ಪ್ರೇಮಿಯೇ ಹುಚ್ಚನಂತೆ ಅವತ್ತು ಅವಳ  ಮೇಲೆ ಎರಗಿ ಕೊಂದು ಮುಗಿಸಿದ್ದ.. ಆತನೇ ಹೇಳೋ ಪ್ರಕಾರ ಇಬ್ಬರೂ ಲವ್ ಮಾಡ್ತಿದ್ರು. 5 ವರ್ಷ ಲವ್ ಮಾಡಿದ ಮೇಲೆ ಅವರಿಬ್ಬರ ನಡುವೆ ಬಿರುಕು ಮೂಡೋಕೆ ಶುರುವಾಯ್ತು.. ಆದ್ರೆ ಆ ಬಿರುಕು ಅವಳಿಂದಲೇ ಆಗಿದ್ದು ಅಂತ ಹೇಳ್ತಿದ್ದಾನೆ. ಹಾಗಅದ್ರೆ ಮದುವೆ ಆಗೋ ನಿರ್ಧಾರ ಮಾಡಿದ್ದ ಅವರಿಬ್ಬರ ನಡುವೆ ಬಿರುಕು ಮೂಡೋಕೆ ಕಾರಣವೇನು..? ಅವರಿಬ್ಬರ ಮಧ್ಯದಲ್ಲಿ ಬಂದವರು..? 

ದೈವ ಕೋಲ ನಡೆಯುವಾಗ್ಲೇ ಊರಲ್ಲಿ ಬಿತ್ತು ಹೆಣ: ಮತ್ತೆ ಆ್ಯಕ್ಟೀವ್ ಆಯ್ತಾ ಕರಾವಳಿ ಅಂಡರ್‌ವರ್ಲ್ಡ್?

5 ವರ್ಷ ಲವ್ ಮಾಡಿ ಮದುವೆ ಹಂತಕ್ಕೆ ಹೋದವರಿಗೆ ಶಾಕ್ ಕೊಟ್ಟಿದ್ದ ಯುವತಿಯ ಹೆತ್ತವರು.. ಜಾತಿ ಕಾರಣ ನೀಡಿ ದಿನಕರ್ ಮತ್ತು ಲೀಲಾ ಪ್ರೀತಿಯನ್ನ ನಿರಾಕರಿಸಿದ್ರು. ಯಾವಾಗ ಅಪ್ಪ ಅಮ್ಮ ನೋ ಅಂದ್ರೋ ಲೀಲಾ ಕೂಡ ದಿನಕರ್ನನ್ನ ಬಿಡೋದಕ್ಕೆ ರೆಡಿಯಾಗಿಬಿಟ್ಲು. ಆದ್ರೆ ದಿನಕರ್ಗೆ ಲೀಲಾ ಬಿಟ್ಟು ಇರೋದಕ್ಕೆ ಸಾಧ್ಯವಾಗೋದೇ ಇಲ್ಲ... ಪ್ರತೀ ನಿತ್ಯ ಅವಳನ್ನ ಮತ್ತೆ ಲವ್ ಮಾಡುವಂತೆ ಪೀಡಿಸುತ್ತಿದ್ದ.. ಆದ್ರೆ ನೋಡೋ ತನಕ ನೋಡಿ ಲೀಲಾ ಕೂಡ ಅವನನ್ನ ಎಲ್ಲಾ ರೀತಿಯಲ್ಲೂ ಬ್ಲಾಕ್ ಮಾಡಿದ್ಲು. ಅಷ್ಟೇ.. ದಿನಕರ್ ಅವಳನ್ನ ಮುಗಿಸುವ ನಿರ್ಧಾರಕ್ಕೆ ಬಂದುಬಿಟ್ಟ... ಆಕೆ ಕೆಲಸ ಮಾಡ್ತಿದ್ದ ಜಾಗಕ್ಕೇ ಹೋಗಿ ಅವಳನ್ನ ಹೊರಗೆ ಕರೆದು ಚಾಕು ಹಾಕೇಬಿಟ್ಟ. ಆದ್ರೆ ತನಿಖೆ ನಡೆಸಿದ ಪೊಲೀಸರು ಲೀಲಾ ಇವನನ್ನ ಪ್ರೀತಿಸಿಯೇ ಇರಲಿಲ್ಲ ಅಂತಾರೆ.

ಆಕೆ ಇನ್ನೂ ಬಾಳಿ ಬದುಕಬೇಕಿದ್ದ ಹುಡುಗಿ.. ದುಡಿಬೇಕು.. ಅಪ್ಪ ಅಮ್ಮನನ್ನ ಸುಖವಾಗಿ ಇರೋ ತರ ನೋಡಿಕೊಳ್ಳಬೇಕು ಅಂತ ಕನಸು ಕಂಡಿದ್ಲು... ಆದ್ರೆ ಇವತ್ತು ಈ ಪಾಪಿಯಿಂದ ಭೂಮಿಯನ್ನೇ ಬಿಟ್ಟು ಹೋಗಿದ್ದಾಳೆ. ಇನ್ನೂ ಈಕೆಯ ಸಾವಿನ ಬಗ್ಗೆ ಆಕೆಯ ಹೆತ್ತವರು ಕೇಳಿದಾಗ ಆ ಮನುಸಗಳಿಗೆ ಎಷ್ಟು ನೋವಾಗಿರುತ್ತೋ ಅನ್ನೋದನ್ನ ಯೋಚಿಸಿದರೇನೆ ಬೇಸರವಾಗುತ್ತೆ.