ಅವಳಿನಗರ ಪೊಲೀಸರ ಮುಂದೆ ಚಾಲೆಂಜಿಂಗ್ ಟಾಸ್ಕ್..! ಸಣ್ಣ ಸುಳಿವೂ ಇಲ್ಲದ ಕೇಸ್‌ನಲ್ಲಿ ಖದೀಮರ ಬಂಧಿಸಿದ್ದೇಗೆ..?

ಅವಳಿನಗರ ಪೊಲೀಸರ ಮುಂದೆ ಚಾಲೆಂಜಿಂಗ್ ಟಾಸ್ಕ್..! ಸಣ್ಣ ಸುಳಿವೂ ಇಲ್ಲದ ಕೇಸ್‌ನಲ್ಲಿ ಖದೀಮರ ಬಂಧಿಸಿದ್ದೇಗೆ..?

Published : Nov 02, 2023, 10:29 AM IST

ಇದೊಂದು ಪೊಲೀಸರ ಚಾಲೆಂಜಿಂಗ್ ಟಾಸ್ಕ್ ಸ್ಟೋರಿ. ಅಲ್ಲೊಂದು ಕಳ್ಳತನವಾಗಿತ್ತು. ಆದ್ರೆ, ಕಳ್ಳತನ ಮಾಡಿದ್ಯಾರು ಅನ್ನೋದಕ್ಕೆ ಒಂದೇ ಒಂದು ಸಣ್ಣ ಕ್ಲೂ ಕೂಡ ಇರಲಿಲ್ಲ. ಇಂಥ ಚಾಲೆಂಜಿಂಗ್ ಕೇಸ್ ಬೆನ್ನತ್ತಿದ ಅವಳಿನಗರ ಪೊಲೀಸರು, ಕೇವಲ ಐದೇ ದಿನದಲ್ಲಿ ಖದೀಮರ ಕೈಗೆ ಕೋಳ ತೊಡಿಸಿ ಶಹಬ್ಬಾಶ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.

ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್. ಇದು ಜನಸಾಮಾನ್ಯರಿಗೆ ಸಾಲ ಸೌಲಭ್ಯ. ಜನಸಾಮಾನ್ಯರ ಶ್ರೇಯೋಭಿವೃದ್ಧಿ ಕೆಲಸ ಮಾಡಿಕೊಂಡು ಬರ್ತಿರು ಸಂಘ. ಬಡವರ ಪಾಲಿನ ಭರವಸೆ ಬೆಳಕು. ಧಾರವಾಡದ(Dharwad) ರಾಯಾಪೂರದ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕೂಡ ಹೀಗೆ ಜನರ ಸೇವೆ ಮಾಡಿಕೊಂಡು ಬರ್ತಿದೆ. ಹೀಗಿರುವಾಗ ಅಕ್ಟೋಬರ್ 24ರಂದು ಈ ಟ್ರಸ್ಟ್ ಸಿಬ್ಬಂದಿಗೆ ದೊಡ್ಡ ಶಾಕ್ ಕಾದಿತ್ತು.ಯಾಕಂದ್ರೆ, ಖದೀಮರು ಟ್ರಸ್ಟ್ನಲ್ಲಿದ್ದ ಬರೋಬ್ಬರಿ ಒಂದು ಕೋಟಿ 24 ಲಕ್ಷದ 48 ಸಾವಿರದ 87 ರೂಪಾಯಿ ಕಳ್ಳತನ(Theft) ಮಾಡಿಬಿಟ್ಟಿದ್ರು. ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಹಣ ಕಳ್ಳತನವಾಗಿದೆ. ಯಾರು ಕಳ್ಳತನ ಮಾಡಿದ್ದು. ಸಾಕ್ಷಿಗೆ ಸಿಸಿಟಿವಿ ನೋಡೋಣ ಅಂದ್ರೆ ಸಿಸಿಟಿವಿಯನ್ನೇ ಅಳವಡಿಸಿಲ್ಲ. ಧಾರವಾಡ ವಿದ್ಯಾಗಿರಿ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಈ ಚಾಲೆಂಜಿಂಗ್ ಕೇಸ್ ಬೆನ್ನತ್ತಿದ್ದ ಪೊಲೀಸರು ಸಾಧಿಸಿಯೇ ಬಿಟ್ಟಿದ್ದಾರೆ.. ಬರೋಬ್ಬರಿ 10 ಮಂದಿ ಖದೀಮರ ಕೈಗೆ ಕೋಳ ತೊಡಿಸಿದ್ದಾರೆ. ಒಂದೇ ಒಂದು ಪ್ರತ್ಯಕ್ಷ ಸಾಕ್ಷಿಗಳು, ಸುಳಿವಿಲ್ಲದ ಕೇಸ್ನ್ನು ಬೆನ್ನತ್ತಿದ ಪೊಲೀಸರಿಗೆ(Police) ಕಳ್ಳರ ಹಿಡಿಯೋದೆ ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಅವಳಿ ನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್  ವಿಶೇಷ ತಂಡವೊಂದನ್ನ ರಚಿಸಿದ್ರು..ಎಸಿಪಿ ಪ್ರಶಾಂತ ಸಿದ್ದನಗೌಡರ, ಸಿಪಿಐ ಸಂಗಮೇಶ ದಿಡಗಿನಾಳ್ ಮಾರ್ಗದರ್ಶನದಲ್ಲಿ ಫಿಲ್ಡಿಗಿಳಿದ ಪೊಲೀಸರು ಐದೇ ದಿನಗಳಲ್ಲಿ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಕೇವಲ ವೈಜ್ಞಾನಿಕ ಕುರುಗಳ ಆಧಾರದ ಮೇಲೆ 10 ಮಂದಿ ಬಂಧಿಸಿದ್ದಾರೆ.ಆದ್ರೆ, ಇಲ್ಲೊಂದು ಶಾಕಿಂಗ್  ವಿಷ್ಯ ಏನಂದ್ರೆ ಬಂಧಿತ 10 ಮಂದಿಯಲ್ಲಿ ಮೂವರು ಆರೋಪಿಗಳು ಇದೇ ಟ್ರಸ್ಟ್ನಲ್ಲಿ ಕೆಲಸ ಮಾಡುತ್ತಿದ್ದವರು. ಧರ್ಮಸ್ಥಳ ಟ್ರಸ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಕುಶಾಲ ಕುಮಾರ್ , ಬಸವರಾಜ್, ಮಹಾಂತೇಶ್.. ಈ ಮೂವರು ಉಳಿದ 7 ಜರನ್ನು ಸೇರಿಸಿಕೊಂಡು ಸ್ಕೆಚ್ ಹಾಕಿ ಹಣ ದೋಚಿದ್ದಾರೆ. ಸಿಸಿಟಿವಿಯಿಲ್ಲ.. ತಗಲಾಕ್ಕೊಳ್ಳೋಕೆ ಸಾಧ್ಯವೇ ಇಲ್ಲ ಅನ್ನೋ ಯೋಚನೆಯಲ್ಲಿದ್ದ ಖದೀಮರಿಗೆ ಅವಳಿನಗರದ ಸೂಪರ್ ಕಾಪ್ ಕೋಳ ತೊಡಿಸಿದೆ. ತಮ್ಮ ಸಿಬ್ಬಂದಿ ಕಾರ್ಯ ವೈಖರಿಗೆ ಫಿದಾ ಆದ ಪೊಲೀಸ್ ಕಮಿಷನರ್, ಎಲ್ಲಾ ಸಿಬ್ಬಂದಿಗೆ ಶೇಕ್ ಹ‌್ಯಾಂಡ್ ಮಾಡಿ ಶಹಬ್ಬಾಶ್ ಗಿರಿ ಕೊಟ್ಟರು.

ಇದನ್ನೂ ವೀಕ್ಷಿಸಿ:  ದಾಂಪತ್ಯ ಕಲಹಕ್ಕೆ ಎರಡು ಜೀವಗಳು ಬಲಿ: ಹೆಂಡತಿ ಕರೆಯಲು ಬಂದವ ಮಾವನನ್ನೇ ಕೊಂದ !

23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
Read more