ಹೆತ್ತ ಮಗನೇ ತಾಯಿಯ ಹೆಣ ಹಾಕಿಬಿಟ್ಟನಾ..? ಪುತ್ರನ ನಡವಳಿಕೆ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!

ಹೆತ್ತ ಮಗನೇ ತಾಯಿಯ ಹೆಣ ಹಾಕಿಬಿಟ್ಟನಾ..? ಪುತ್ರನ ನಡವಳಿಕೆ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!

Published : Dec 01, 2023, 02:20 PM ISTUpdated : Dec 01, 2023, 02:35 PM IST

ತಾಯಿಯ ಕಥೆ ಮುಗಿಸಿ ಹುಡುಕುವ ನಾಟಕ ಮಾಡಿದ್ದ..!
ಅಜ್ಜಿಯನ್ನ ಕೊಂದು ಮನೆ ಬೀಗ ಹಾಕಿ ಹೋಗಿದ್ರು..!
ಸತ್ತು 3 ದಿನವಾದ್ರೂ ಮಕ್ಕಳಿಗೆ ಸುಳಿವೇ ಸಿಕ್ಕಿರಲಿಲ್ಲ..!
ಹಂತಕರು ಪೊಲೀಸರಿಗೆ ತಗ್ಲಾಕಿಕೊಂಡದ್ದೇ ರೋಚಕ..!
 

ಅವಳು 63 ವರ್ಷದ ವೃದ್ಧೆ. ಮಕ್ಕಳಿದ್ರೂ ಒಂಟಿಯಾಗಿ ಜೀವನ ಮಾಡ್ತಿದ್ಲು. ಕೂಲಿ ಮಾಡೋದು ಈಕೆಯ ಫುಲ್ ಟೈಂ ಜಾಬ್ ಆದ್ರೆ ದಾನಮ್ಮ ದೇವಿಯ ದೇವಸ್ಥಾನದ ಅರ್ಚಕಿಯಾಗಿ ಬಂದವರಿಗೆ ಭವಿಷ್ಯ ಹೇಳೋದು ಇವಳ ಪಾರ್ಟ್ ಟೈಂ ಜಾಬ್. ಜ್ಯೋತಿಷಿ ಹೇಳ್ತಿದ್ರಿಂದ ಈಕೆಗೆ ದುಡ್ಡು ಕಾಸಿನ ತೊಂದರೆ ಏನೂ ಇರಲಿಲ್ಲ. ಆದ್ರೆ ಆವತ್ತೊಂದು ದಿನ ಇದೇ ಅಜ್ಜಿ(Grand Mother) ತನ್ನದೇ ಮನೆಯಲ್ಲಿ ಹೆಣವಾಗಿ ಸಿಕ್ಕಿದ್ದಳು. ಒಂಟಿಯಾಗಿ ಜೀವನ ಮಾಡ್ತಿದ್ದವಳನ್ನ ಹಂತಕರು ಕೊಂದು ಎಸ್ಕೇಪ್ ಆಗಿದ್ರು. ಆದರೆ ತನಿಖೆ ನಡೆಸಿದ ಪೊಲೀಸರಿಗೆ(police) ಹಂತಕರ ಸುಳಿವು ಸಿಕ್ಕಿ ಹೆಡೆಮುರಿ ಕಟ್ಟೋ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು. ದಾನಮ್ಮ ದೇವಿಯ(Danamma Devi) ಪರಮ ಭಕ್ತಿಯಾಗಿದ್ದ, ಜ್ಯೋತಿಷ್ಯ ಹೇಳುತ್ತಿದ್ದ ಅಜ್ಜಿ ರತ್ನಬಾಯಿಯ ಕೊಲೆ(Murder) ಪ್ರಕರಣ ಭೇದಿಸುವಲ್ಲಿ R.G ನಗರ ಪೊಲೀಸರು ಯಶಸ್ವಿಯಾದರು. ತನಿಖೆ ಕೈಗೊಂಡ ಪೊಲೀಸರಿಗೆ, ಹಂತಕರು ಯಾರು ಎನ್ನುವುದು ಗೊತ್ತಾಗಿ ಸ್ವತಃ ಪೊಲೀಸರೇ ಶಾಕ್ ಆಗುವಂತಾಗಿತ್ತು. ಗುಡ್ಡಾಪುರ ದಾನಮ್ಮ ದೇವಿಯ ಪರಮ ಭಕ್ತೆಯಾಗಿದ್ದ ಮತ್ತು  ಕಷ್ಟ ಅಂತ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಜ್ಯೋತಿಷ್ಯ ಹೇಳುತ್ತಿದ್ದ  ಅಜ್ಜಿಯನ್ನ ತನ್ನ ಸ್ವಂತ ಮಗನೇ ಕೊಂದು ಮುಗಿಸಿದ್ದ. ಅಜ್ಜಿಯ ಸ್ನೇಹಿತನೊಂದಿಗೆ ಸೇರಿಕೊಂಡು ಅಮ್ಮನ ಕಥೆ ಮುಗಿಸಿ ನಂತರ ತಾಯಿಯನ್ನ ಹುಡುಕೋ ನಾಟಕವಾಡಿದ್ದ. ನಾವು ಅಲ್ಲಿಗೆ ಹೋದಾಗಲೂ ನಮ್ಮ ಬಳಿ ಅಮ್ಮನ ಬಗ್ಗೆ ಮಾತನ್ನಾಡಿ ಕಣ್ಣೀರು ಹಾಕಿದ್ದ. ಸಲ್ಲದ ಚಟಕ್ಕೆ ದಾಸರಾದರೆ ಆಗಬಾರದ್ದು ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ಎಕ್ಸಾಂಪಲ್. ಇನ್ನೂ ತಾಯಿ ಮಗನ ಎದುರಲ್ಲೇ ಕೊಲೆಯಾಗಿ ಹೋದ್ರೆ, ಮಗ ಮತ್ತು ಗೆಳೆಯ ಮಾಡಬಾರದನ್ನ ಮಾಡಿ ಜೈಲು ಸೇರಿದ್ದಾರೆ.

ಇದನ್ನೂ ವೀಕ್ಷಿಸಿ:  ‘ಪಂಚ’ ಫಲಿತಾಂಶ ಲೋಕ ಕದನಕ್ಕೆ ದಿಕ್ಸೂಚಿನಾ..? ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ !

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more