ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

Published : Aug 04, 2023, 02:47 PM IST

ಅದೊಂದು ಕೇರಿಗೆ ಮಾತ್ರ ಕಲುಷಿತ ನೀರು ಬಂದಿದ್ದೇಗೆ?
ಅಪರೂಪಕ್ಕೆ ಗ್ರಾಮಕ್ಕೆ ಬಂದು ಹೋದವನು ಹೆಣವಾದ!
ಮಗಳನ್ನ ಕೆಣಕಿದಕ್ಕೆ ನೀರಿಗೆ ವಿಷ ಹಾಕಿದ್ನಾ..?
 

ಅದು ದಲಿತರೇ ವಾಸವಾಗಿರುವ ಓಣಿ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಟುಂಬವೇ ಅಲ್ಲಿ ಜಾಸ್ತಿ. ಬಡತನವಿದ್ದರೂ ನೆಮ್ಮದಿಯಾಗಿದ್ದ ಕಟುಂಬಗಳು ಅವು. ಆದ್ರೆ ಇವತ್ತು ಅದೇ ಓಣಿ ಮಸಣವಾಗಿದೆ. ನಾಲ್ಕು ಜನ ಹೆಣವಾಗಿದ್ರೆ, 130ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಆದ್ರೆ ಅವರ ಈ ಸ್ಥಿತಿಗೆ ಕಾರಣ ಜೀವ ಜಲ..ಜೀವ ಜಲ ಇವರ ಪಾಲಿಗೆ ವಿಷಜಲವಾಗಿಬಿಟ್ಟಿತ್ತು. ರಾತ್ರಿ ನೀರು ಕುಡಿದು ಮಲಗಿದವರು ಬೆಳಗ್ಗೆ ಹೆಣವಾಗಿದ್ರು. ಇನ್ನೂ ನೀರು ಕಲುಷಿತವಾಗಲು ಕಾರಣವೇನು ಅನ್ನೋದನ್ನ ಅಧಿಕಾರಿಗಳು ತಿಳಿದುಕೊಳ್ಳುವಷ್ಟರಲ್ಲೇ ಆ ಓಣಿಯ ಜನ ಅದೊಬ್ಬನ ಮೇಲೆ ಆರೋಪ ಮಾಡೋದಕ್ಕೆ ಶುರು ಮಾಡಿದ್ರು. ಅವನೇ ನಾವು ಕುಡಿಯೋ ನೀರಿಗೆ ವಿಷ ಹಾಕಿದ್ದಾನೆ ಅನ್ನೋ ಆರೋಪ ಮಾಡತೊಡಗಿದ್ರು. ಅಷ್ಟಕ್ಕೂ ಕೋಟೆನಾಡು ಚಿತ್ರದುರ್ಗದಲ್ಲಿ(Chitradurga) ಯಾವಾಗ ಕವಾಡಿಗರಹಟ್ಟಿಯಲ್ಲಿ ಮೂರು ಹೆಣಗಳು ಬಿದ್ವೋ ಆ ದಲಿತ ಓಣಿಯಲ್ಲಿ ಗುಸುಗುಸು ಶುರುವಾಯ್ತು. ಕುಡಿಯುವ ನೀರಿಗೆ ಅವನೊಬ್ಬ ವಿಷ ಬೆರಸಿದ್ದಾನೆ ಅನ್ನೋ ಮಾತುಗಳು ಅಲ್ಲಿ ಹರಿದಾಡಿದ್ವು. ವರ್ಷದ ಹಿಂದೆ ದಲಿತ ಯುವಕನೊಬ್ಬ ಮಾಡಿದ ತಪ್ಪಿಗೆ ಇವತ್ತು ಇಡೀ ದಲಿತ(Dalit) ಓಣಿಗೇ ಆತ ವಿಷ ಹಾಕಿದ್ದಾನೆ ಅನ್ನೋ ಸುದ್ದಿ ಹರಡಿತ್ತು. ಅಷ್ಟಕ್ಕೂ ಆ ಓಣಿಯ ಜನ ಕುಡಿಯುವ ನೀರಿಗೆ ವಿಷ ಬೆರಸಲಾಗಿತ್ತಾ..? ಅವರೆಲ್ಲಾ ಆರೋಪ ಮಾಡುತ್ತಿರುವ ಅವನು ಯಾರು..?. ಕವಾಡಿಗರಹಟ್ಟಿ ಗ್ರಾಮದಲ್ಲಿ ಎರಡು ಓವರ್ ವಾಟರ್ ಟ್ಯಾಂಕ್‌ಗಳಿವೆ(water tank). ಒಂದು ಟ್ಯಾಂಕರ್ ದಲಿತ ಓಣಿಗೆ ಹೋದ್ರೆ ಮತ್ತೊಂದು ಮಿಕ್ಕ ಗ್ರಾಮದ ಮನೆಗಳಿಗೆ ಹೋಗುತ್ತೆ. ಆದ್ರೆ ಎರಡೂ ವಾಟರ್ ಟ್ಯಾಂಕ್‌ಗಳಿಗೂ ಒಬ್ಬನೇ ವಾಟರ್ ಮ್ಯಾನ್. ಒಂದು ವರ್ಷದ ಹಿಂದೆ ಇದೇ ವಾಟರ್‌ಮ್ಯಾನ್‌ ಮಗಳಿಗೆ ದಲಿತ ಓಣಿಯ ಯುವಕನೊಬ್ಬ ಕೆಣಕಿದ್ದ. ಆವತ್ತು ಇದೇ ಘಟನೆ ಸಂಬಂದ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ ಇದೇ ವಿಷ್ಯವಾಗಿ ವಾಟರ್ಮ್ಯಾನ್ ದಲಿತರ ಓಣಿಯ ಜನರ ಮೇಲೆ ದ್ವೇಷ ಸಾಧಿಸುತ್ತಲೇ ಇದ್ದ. ಆದ್ರೆ ಮೊನ್ನೆ ವರ್ಷದ ಹಿಂದಿನ ಸೇಡನ್ನ ನೀರಿಗೆ ವಿಷ ಹಾಕುವ ಮೂಲಕ ತೀರಿಸಿಕೊಂಡಿದ್ದಾನೆ ಅನ್ನೋದು ಆ ಓಣಿಯ ಜನರ ಆರೋಪವಾಗಿದೆ.

ಇದನ್ನೂ ವೀಕ್ಷಿಸಿ:  ಸಿದ್ದರಾಮೋತ್ಸವಕ್ಕೆ ಒಂದು ವರ್ಷ.. ಸಿದ್ದು ಚರಿಷ್ಮಾವನ್ನೇ ಬದಲಿಸಿದ್ದು ಹೇಗೆ "ದಾವಣಗೆರೆ" ಸಮಾವೇಶ..?

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more