Mar 16, 2024, 5:03 PM IST
ಆತ ಖಾಸಗಿ ಬಸ್ ಡ್ರೈವರ್. ಕಷ್ಟ ಪಟ್ಟು ದುಡಿದು ಇದ್ದ ಮೂವರು ಮಕ್ಕಳನ್ನ ಚೆನ್ನಾಗಿ ಓದಿಸುತ್ತಿದ್ದ. ಆದ್ರೆ ಆವತ್ತೊಂದು ದಿನ ಮಕ್ಕಳ ಕೈಲಿ ಕಾಫಿ ಮಾಡಿಸಿಕೊಂಡು ಕುಡಿದು ಹೊರಗೆ ಹೋದವನು ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಇನ್ನೂ ಆತನನ್ನ ಕೊಂದವನು ಊರಾಚೆ ಹೋಗಿ ಪೊಲೀಸರಿಗೆ(Police) ಕಾಲ್ ಮಾಡಿ ತನ್ನನ್ನ ಬಂಧಿಸುವಂತೆ ಕಾಲ್ ಮಾಡಿದ್ದ. ಹೊರಗೆ ಹೋಗಿ ಬರ್ತೀನಿ ಅಂತ ಹೋದವನು ಹೆಣವಾಗಿದ್ದ. ಪ್ರವೀಣ ಒಂದೇ ಏಟಿಗೆ ಸಂಗನಗೌಡನನ್ನ ನೆಲಕ್ಕುರುಳಿಸಿದ್ದ. ಅವನೊಬ್ಬ ಪಾಗಲ್ ಪ್ರೇಮಿ(Lover). ಊರಿನ ಬಸ್ ನಿಲ್ದಾಣದಲ್ಲಿ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದ ಅದೇ ಬಸ್ ಸ್ಟಾಪ್‌ಗೆ ಬಸ್ ಹತ್ತಲು ಬರ್ತಿದ್ದ ಸಂಗನಗೌಡ ಮಗಳನ್ನ ಪ್ರೀತಿಸೋದಕ್ಕೆ ಶುರು ಮಾಡಿದ್ದ. ಆದರೆ ಆಕೆ ಮಾತ್ರ ಇವನ ಪ್ರೀತಿಗೆ ಯಾವತ್ತೂ ಸಹ ಓಕೆ ಅನ್ನಲಿಲ್ಲ. ಆದ್ರೂ ಅವಳ ಬೆನ್ನು ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ವರ್ಷದ ಹಿಂದೆ ಇದೇ ವಿಷಯವಾಗಿ ಸಂಗನಗೌಡ ಆತನನ್ನ ಮನೆಗೆ ಕರೆಸಿ ವಾರ್ನ್ ಮಾಡಿ ಕಳುಹಿಸಿದ್ದ. ಅದೇ ಕೋಪ ಇಟ್ಟುಕೊಂಡಿದ್ದ ಪ್ರವೀಣ ಆವತ್ತು ಎಳೆನೀರು ಕೊಚ್ಚುವ ಮಚ್ಚು ತಂದು ಸಂಗನಗೌಡನ ಕಥೆಯನ್ನ ಮುಗಿಸಿಯೇಬಿಟ್ಟ. ನಮ್ಮ ಮಗಳ ಸಹವಾಸಕ್ಕೆ ಬರಬೇಡ ಎಂದು ಬುದ್ದಿವಾದ ಹೇಳಿ ವಾರ್ನ್ ಮಾಡಿದ್ದಕ್ಕೆ, ಮನಸ್ಸಲ್ಲಿ ಸೇಡಿಟ್ಟುಕೊಂಡು, ಯುವತಿಯ ತಂದೆಯನ್ನ ಮಚ್ವಿನಿಂದ ಕೊಚ್ವಿ ಬರ್ಬರವಾಗಿ ಕೊಲೆಗೈದಿದ್ದಾನೆ.
ಇದನ್ನೂ ವೀಕ್ಷಿಸಿ: ಎಲೆಕ್ಷನ್ ಘೋಷಣೆಗೂ ಮುನ್ನವೇ ಮತದಾರರಿಗೆ ಆಮಿಷ: ಸಂಸದ ಡಿ.ಕೆ.ಸುರೇಶ್ ಬೆಂಬಲಿಗರಿಂದ ಸೀರೆ ಹಂಚಿಕೆ !