Dec 12, 2023, 3:04 PM IST
ಸರಿಯಾಗಿ 4 ದಿನಗಳ ಹಿಂದೆ. ಮನೆಯಿಂದ ಕೋರ್ಟ್‌ಗೆ ವಾದ ಮಾಡಲು ಹೊರಟಿದ್ದ ಲಾಯರ್(Lawyer) ಒಬ್ಬರನ್ನ ಹಂತಕರು ಬರ್ಬರವಾಗಿ ಕೊಲೆ(Murder) ಮಾಡಿದ್ರು. ಈ ಕೊಲೆ ಆವತ್ತು ಇಡೀ ರಾಜ್ಯವನ್ನ ಬೆಚ್ಚಿ ಬೀಳಿಸಿತ್ತು. ಈ ಕೊಲೆಯ ಸೂಕ್ಷ್ಮತೆ ಹರಿತ ಪೊಲೀಸರು(police) 24 ಗಂಟೆಗಳಲ್ಲೇ ಹಂತಕರನ್ನ ಕಂಬಿ ಹಿಂದೆ ಕಳಿಸಿದ್ರು. ಆವತ್ತು ಪೊಲೀಸರೇ ಇದು ಸೇಡಿಗಾಗಿ ನಡೆದ ಕೊಲೆ ಅಂತಲೂ ಹೇಳಿಬಿಟ್ಟಿದ್ರು. ಆದ್ರೀಗ ಈ ಕೊಲೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಲಾಯರ್ ಒಬ್ಬರನ್ನ ಕೊಲೆ ಮಾಡಿದ್ದು ಅವರ ಶತೃಗಳೇ ಆಗಿದ್ರೂ ಆದ್ರೆ ಅವರಿಗೆ ಸುಪಾರಿ ಕೊಟ್ಟಿದ್ದು ಅದೇ ಲಾಯರ್ನ ಅಣ್ಣ ಮತ್ತು ಅತ್ತಿಗೆ ಅನ್ನೋ ಸುಡ್ಡಿ ಈಗ ಬಯಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ಇದೆ. ಅವರೇ ನಮ್ಮ ಮನೆಯ ಮಗನನ್ನ ಕೊಂದಿದ್ದಾರೆ ಅಂತ ಯಾವಾಗ ಈರಣ್ಣ ಫ್ಯಾಮಿಲಿ ಹೆಳ್ತೋ ತಡಮಾಡದೇ ಪೊಲೀಸರು ಅವರ ಹಿಂದೆ ಬೀಳ್ತಾರೆ. ಕೊಲೆ ನಡೆದು 24 ಗಂಟೆಯಲ್ಲೇ ಹಂತಕರ ಹೆಡೆಮುರಿ ಕಟ್ತಾರೆ. ಅವರನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗಲೇ ನೋಡಿ ಈರಣ್ಣ ಕೊಲೆಗೂ 30 ವರ್ಷದ ಹಿಂದೆ ನಡೆದ ತ್ರಿಪಲ್ ಮರ್ಡರ್‌ಗು ನಂಟು ಬೆಸೆದುಕೊಳ್ಳೋದು. 30 ವರ್ಷ ಕಾದು ಕೊನೆಗೂ ತಮ್ಮ ಸೇಡು ತೀರಿಸಿಕೊಂಡಿದ್ದಾರೆ.. ಆದ್ರೆ ಈರಣ್ಣನನ್ನ ಮುಗಿಸಲು ನಾಯ್ಕೋಡಿ ಕುಟುಂಬ 30 ವರ್ಷ ಯಾಕ ಕಾಯಬೇಕಿತ್ತು..? ಈ ಪ್ರಶ್ನೆ ಪೊಲೀಸರನ್ನೂ ಕಾಡಿದೆ. ಹಂತಕರನ್ನ ಮತ್ತಷ್ಟು ವಿಚಾರಣೆ ಮಾಡಿದಾಗ ಕೊಲೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.. ಅದೇನಂದ್ರೆ ನಾಯ್ಕೋಡಿ ಕುಡಿಗಳಿಗೆ ಈರಣ್ಣನನ್ನ ಮುಗಿಸಲು.. ಈರಣನ ಅಣ್ಣ ಅತ್ತಿಗೆನೇ ಸುಪಾರಿ ಕೊಟ್ಟಿದ್ರು ಅನ್ನೋ ಸತ್ಯ ಈಗ ಬಯಲಾಗಿದೆ. 30 ವರ್ಷದ ಸೇಡು ತೀರಿಸಿಕೊಳ್ಲಲು ಹಾತೊರೆಯುತ್ತಿದ್ದ ಕುಟುಂಬಕ್ಕೆ ಈರಣ್ಣ ಗೌಡನ ಮತ್ತೊಬ್ಬ ಶತೃ ಕೈ ಮಿಲಾಯಿಸಿದ್ದ. 30 ವರ್ಷದ ಹಿಂದೆ ತನ್ನ ಕುಟುಂಬದ ಮೂವರನ್ನ ಹೆಣ ಹಾಕಿದ್ದ ಈರಣ್ಣ ಕುಟುಂಬವನ್ನ ಮಟ್ಟಹಾಕಲು ನಾಯ್ಕೋಡಿ ಕುಟುಂಬ ಕಾದು ಕೂತಿದ್ರೆ. ಈರಣ್ಣನ ಕುಟುಂಬದವರೇ ಅದ ವರಸೆಯಲ್ಲಿ ಅಣ್ಣ ಆಗಬೇಕಿದ್ದವನಿಗೆ ತನ್ನ ಪಾಲಿನ ಆಸ್ತಿ ಕೊಡಲಿಲ್ಲ ಅಂತ ಮುನಿಸಿಕೊಂಡು ಕೂತಿದ್ದ. ಎಷ್ಟೇ ಕೆಳಿದ್ರೂ ಈರಣ್ಣ ಮಾತ್ರ ಆಸ್ತಿಯಲ್ಲಿ ಅಣ್ಣನಿಗೆ ಪಾಲು ಕೊಡಲು ಸುತಾರಾಂ ಒಪ್ಪೋದಿಲ್ಲ. ಇದ್ರಿಂದ ಆಕ್ರೋಷಗೊಂಡ ಅಣ್ಣ ಅತ್ತಿಗೆ ಈರಣ್ಣನ 20 ವರ್ಷದ ವೈರಿಯ ಕುಟುಂಬಕ್ಕೆ ಸುಪಾರಿ ಕೊಟ್ಟೇಬಿಟ್ಟರು. ಅಷ್ಟೇ ಅಲ್ಲ ಸುಪಾರಿ ಕೊಟ್ಟು ಹರಕೆ ತೀರಿಸಲು ದೇವಸ್ಥಾನಕ್ಕೆ ಹೋರಟುಬಿಟ್ಟರು.
ಇದನ್ನೂ ವೀಕ್ಷಿಸಿ: ಭಾರತದ ಹತೋಟಿಯಲ್ಲಿರಲಿದೆ ಪಾಕ್ ಆಕ್ರಮಿತ ಕಾಶ್ಮೀರ! ಆಪರೇಷನ್ ಪಿಒಕೆ-ಅಸಲಿ ಕತೆ ಏನು..?