ದರೋಡೆಕೋರರಿಗೆ ಥಳಿಸಿ ಬ್ಯಾಗ್‌ ರಕ್ಷಿಸಿಕೊಂಡ ಮಹಿಳೆ, ಧೈರ್ಯ ಅಂದ್ರೆ ಇದು..!

Sep 12, 2021, 5:12 PM IST

ಮಂಗಳೂರು (ಸೆ. 12):  ಕಾರಿನಲ್ಲಿ ಬಂದ ಅಪರಿಚಿತರು ಮಹಿಳೆಯ ಬ್ಯಾಗ್ ಕಸಿಯಲು ಯತ್ನಿಸಿದ್ದಾರೆ. ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಘಟನೆ ನಡೆದಿದೆ. ಬ್ಯಾಗ್ ಕಸಿಯಲು ಬಿಡದೆ ತನ್ನ ರಕ್ಷಣೆಗೆ ತಾನೇ ಮುಂದಾಗಿದ್ದಾರೆ ಮಹಿಳೆ. ಮಹಿಳೆಯ ಪ್ರತಿರೋಧದಿಂದ ಬ್ಯಾಗ್ ಕಸಿಯಲು ಆಗದೆ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ದೃಶ್ಯಾವಳಿವಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅರೇ ಇದು ನಿಜವಾದ ಘಟನೆಯೇ ಎಂದರೆ ಇಲ್ಲ ಅಣುಕು ಕಾರ್ಯಾಚರಣೆ.

ಮಹಿಳಾ ಪೊಲೀಸರೆದುರೇ ಲಾಕ್ ಅಪ್‌ನಲ್ಲೇ ಬೆತ್ತಲಾದವನ ಪುಂಡಾಟ!

ಘಟನೆ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ಧಾರೆ. ' ಇದು ನಿಜವಾದ ಘಟನೆ ಅಲ್ಲ‌. ಪೊಲೀಸ್ ಇಲಾಖೆಯಿಂದ ಮಾಡಲಾದ ಅಣಕು ಕಾರ್ಯಾಚರಣೆ. ಇಂತಹ ಘಟನೆ ಆದಾಗ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ. ಪೊಲೀಸರು ಎಷ್ಟು ಬೇಗ ರೆಸ್ಪಾಂಡ್ ಮಾಡುತ್ತಾರೆ. ಈ ಎಲ್ಲದರ ಬಗ್ಗೆ ತಿಳಿದುಕೊಳ್ಳಲು ಮಾಡಲಾದ ಅಣಕು ಕಾರ್ಯಾಚರಣೆ. ಮಂಗಳೂರಿನಲ್ಲಿ ಇತ್ತೇಚೆಗೆ ಇಂತಹ ಪ್ರಕರಣಗಳು ನಡೆಯುತ್ತಿವೆ‌. ಇದರ ಬಗ್ಗೆ ಜನರಿಗೆ ಅರಿವು ಬರಬೇಕು. ವಿಕ್ಟಿಮ್ ಗಳು ಧೈರ್ಯವಾಗಿ ಎದುರಿಸಬೇಕು. ಪೊಲೀಸರು ಕೂಡ ತಕ್ಷಣ ಪ್ರತಿಕ್ರಿಯಿಸಬೇಕು ಎಂಬ ಉದ್ದೇಶದಿಂದ ಮಾಡಲಾಗಿದೆ' ಎಂದಿದ್ದಾರೆ.  ಆ ದೃಶ್ಯದಲ್ಲಿರೋ ಮಹಿಳೆ ಶೋಭಲತಾ ಕಟೀಲ್. ಸೌರಕ್ಷಾ ವುಮೆನ್ ಟ್ರಸ್ಟ್ ನ ಮಹಿಳೆ‌.