ದಾಂಪತ್ಯ ಕಲಹಕ್ಕೆ ಎರಡು ಜೀವಗಳು ಬಲಿ: ಹೆಂಡತಿ ಕರೆಯಲು ಬಂದವ ಮಾವನನ್ನೇ ಕೊಂದ !

ದಾಂಪತ್ಯ ಕಲಹಕ್ಕೆ ಎರಡು ಜೀವಗಳು ಬಲಿ: ಹೆಂಡತಿ ಕರೆಯಲು ಬಂದವ ಮಾವನನ್ನೇ ಕೊಂದ !

Published : Nov 02, 2023, 09:58 AM IST

ಗಂಡ, ಹೆಂಡತಿಯಿಂದ ಶುರುವಾದ ಜಗಳದಲ್ಲಿ ಎರಡು ಹೆಣ ಬಿದ್ದಿವೆ. ಒಂದು ಕೊಲೆ, ಇನ್ನೊಂದು ಆತ್ಮಹತ್ಯೆ. ಇಬ್ಬರ ಬಲಿ ಪಡಿಯುವ ಮಟ್ಟಿಗೆ ನಡೆದ ಆ ಜಗಳವಾದ್ರೂ ಏನು ಗೊತ್ತಾ..? 
 

ಹೊಲದಲ್ಲಿ ರಕ್ತದ ಮಡುವಿನಲ್ಲಿ ಬಿದದ್ದಿರುವ ಶವ.ಮತ್ತೊಂದೆಡೆ ಶವದ ಮುಂದೆ ಮಕ್ಕಳ ಆಕ್ರಂದನ. ಈ ದೃಶ್ಯ ಕಂಡು ಬಂದಿದ್ದು ಕಲಬುರಗಿ(Kalaburagi) ಚಿಂಚೋಳಿಯ ಚಿಂತಾಪಲ್ಲಿ ಗ್ರಾಮದಲ್ಲಿ. ಹಬ್ಬಕ್ಕೆ ಅಂತಾ ಮಾವನ ಮನೆಗೆ ಬಂದ ಅಳಿಯ ಮಾವನನ್ನೇ ಕೊಂದು(Murder) ಹಾಕಿದ್ದಾನೆ. ಸೊಲ್ಲಾಪುರ ಮೂಲದ ರಾಜು ಎಂಬಾತನಿಗೆ ಈರಪ್ಪ ಎಂಬಾತ ತನ್ನ ಮಗಳನ್ನ ಮದುವೆ(Marriage) ಮಾಡಿಕೊಟ್ಟಿದ್ದ. ಆದ್ರೆ ಎರಡೇ ತಿಂಗಳಲ್ಲಿ ಗಂಡ ರಾಜು ಜೊತೆ ಜಗಳವಾಡಿಕೊಂಡ ಹೆಂಡತಿ ವೈಶಾಲಿ ತವರು ಮನೆ ಸೇರಿದ್ಳು. ಹೀಗೆ ತವರಿಗೆ ಬಂದ ಹೆಂಡತಿಯನ್ನ ಕರೆಯಲು ಅಂತಾ ರಾಜು ಮಾವನ ಮನೆಗೆ ಬಂದಿದ್ದ. ದಸರಾ ಹಬ್ಬ ಮುಗಿಯವರೆಗೂ ಇಲ್ಲೇ ಇದ್ದ ರಾಜು ಹೆಂಡತಿಯನ್ನ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ.ಆದ್ರೆ ವೈಶಾಲಿ ಮಾತ್ರ ಬರೋಲ್ಲ ಅಂತಾ ಹಠ ಹಿಡಿದಿದ್ದಾಳೆ ಈ ವೇಳೆ ರೊಚ್ಚುಗೆದ್ದ ರಾಜು ಆಕೆಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಇದಾದ ಬಳಿಕ ಹೊಲದಲ್ಲಿ ಕೆಲಸ ಮಾಡ್ತಿದ್ದ ಮಾವ ಈರಪ್ಪನ ಬಳಿ ರಾಜು ಹೋಗಿದ್ದಾನೆ. ಆದ್ರೆ ಅಲ್ಲಿ ಏನಾಯ್ತೋ ಗೊತ್ತಿಲ್ಲ ಏಕಾಏಕಿ ಕಲ್ಲು ಎತ್ತಿಹಾಕಿ ಮಾವ ಈರಪ್ಪನ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲ ರಕ್ತಸಿಕ್ತ ಬಟ್ಟೆಯಲ್ಲಿ ಮನೆಗೆ ಆಗಮಿಸಿದ್ದಾನೆ. ಇದನ್ನು ನೋಡಿದ ಹೆಂಡತಿ ವೈಶಾಲಿ ಚೀರಿಕೊಂಡು ಹೊಲದತ್ತ ಓಡಿದ್ದಾಳೆ. ಇಷ್ಟೆಲ್ಲ ಘಟನೆ ಬಳಿಕ ಭಯವಾಯ್ತೋ ಏನೋ  ಮಾವನನ್ನು ಕೊಂದ ಅಳಿಯ ರಾಜು ಕೂಡ ಮನೆಯ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ ಹತ್ತಿ ಕರೆಂಟ್ ಹೊಡೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ವೀಕ್ಷಿಸಿ:  ಟಗರು ಕಾಳಗ ಏಕಾಏಕಿ ರದ್ದುಗೊಳಿಸಿದ ಪೊಲೀಸರು: ಗ್ರಾಮಸ್ಥರ ಮೇಲೆ ಕೇಸ್‌ ಹಾಕಿಸಿದ ಶಾಸಕ

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more