Sep 23, 2020, 1:30 PM IST
ಬೆಂಗಳೂರು (ಸೆ. 23): ಡ್ರಗ್ ಮಾಫಿಯಾ ಜಾಲಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸಿಸಿಬಿ ನಟ ದಿಗಂತ್‌ಗೆ ಇಂದು ಮತ್ತೆ ನೊಟೀಸ್ ನೀಡಿದೆ. ವಿಚಾರಣೆಗೆ ಹಾಜರಾಗಲು ಹೇಳಲಾಗಿದೆ. ಕೆಲದಿನಗಳ ಹಿಂದೆ ದಿಗಂತ್- ಐಂದ್ರಿತಾ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ. ಇದೀಗ ದಿಗಂತ್ ಗೆ ಮಾತ್ರ ನೊಟೀಸ್ ನೀಡಲಾಗಿದೆ.
ISD ಮುಂದೆ ಗೀತಾ- ಅಭಿಷೇಕ್ ಬಾಯ್ಬಿಟ್ರಾ ಇನ್ನಷ್ಟು ಸೀರಿಯಲ್ ಸ್ಟಾರ್‌ಗಳ ಹೆಸರು?
ಕಳೆದ ವಿಚಾರಣೆ ವೇಳೆ ದಿಗಂತ್ ಕೊಟ್ಟ ಮಾಹಿತಿ ಆಧಾರದ ಮೇಲೆ ಕೆಲವರನ್ನು ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆ ವೇಳೆ ಡ್ರಗ್ ಸೇವನೆಯನ್ನು ದಿಗಂತ್ ಒಪ್ಪಿಕೊಂಡಿದ್ದರು. ಕೆಲವು ಪೆಡ್ಲರ್‌ಗಳು ದಿಗಂತ್ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಹಾಗಾಗಿಯೇ ದಿಗಂತ್‌ಗೆ ಮತ್ತೊಮ್ಮೆ ನೊಟೀಸ್ ನೀಡಲಾಗಿದೆ ಎನ್ನಲಾಗುತ್ತಿದೆ. ದಿಗಂತ್‌ಗೆ ಬಂಧನ ಭೀತಿಯೂ ಕಾಡುತ್ತಿದೆ.