Dr Soundarya Last Rites ಬಿಎಸ್‌ವೈ ಮೊಮ್ಮಗಳು ಆತ್ಮಹತ್ಯೆ, ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

Jan 28, 2022, 6:12 PM IST

ಬೆಂಗಳೂರು, (ಜ.28): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ  ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಬೆಂಗಳೂರಿನ ವಸಂತನಗರದ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ, ಇದಕ್ಕೆ ಕಾರಣ ಏನು ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ.

Dr Soundarya Suicide: ಕುಟುಂಬದಲ್ಲಿ ಕಲಹ  ಇರಲಿಲ್ಲ, ಮಗುವಿಗೆ ನಾಮಕರಣ ಮಾಡಿದ್ದರು 

ಇನ್ನು ಸೌಂದರ್ಯ ಅವರ ಅಂತ್ಯಕ್ರಿಯೆ ಸಕಲ ಸಿದ್ಧತೆಗಳು ನಡೆದಿದ್ದು, ಪತಿ ನಿರಂಜನ್ ಸ್ವಗ್ರಾಮ ಅಬ್ಬಿಗೆರೆಯ ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆ  ನಡೆಯಲಿದೆ.