Oct 13, 2020, 12:51 PM IST
ಬೆಂಗಳೂರು (ಅ. 13): ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ. ಯೋಗೀಶ್ ಗೌಡ ಕೊಲೆಯಾದ ಅವಧಿಯಲ್ಲಿ ಪರಮೇಶ್ವರ್ ಗೃಹ ಸಚಿವರಾಗಿದ್ದರು. ಗೃಹ ಸಚಿವರಾಗಿದ್ದರು ಎಂಬ ಕಾರಣಕ್ಕೆ ತನಿಖೆ ನಡೆಯಿತಾ ಎಂದು ನೋಡುವುದಾದರೆ ಖಂಡಿತಾ ಅಲ್ಲ.
ಯೋಗೇಶ್ ಗೌಡ ಮರ್ಡರ್ ಮಿಸ್ಟರಿ; ಸಾಕ್ಷ್ಯ ನಾಶಕ್ಕೆ ಮಾಜಿ ಸಚಿವರು ಮಾಡಿದ ಕೆಲಸವಿದು!
2016 ರ ಜೂನ್ 15 ಕ್ಕೆ ಯೋಗೀಶ್ ಗೌಡ ಕೊಲೆ ನಡೆಯುತ್ತದೆ. ಕೊಲೆಯಾದ ಒಂದೇ ಗಂಟೆಯಲ್ಲಿ ರಿಯಲ್ ಎಸ್ಟೇಟ್ ವಿವಾದ, ಭೂವ್ಯಾಜ್ಯ ಸಂಬಂಧ ಕೊಲೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆ ಆಧಾರದ ಮೇಲೆ ಸಿಬಿಐ ಪರಮೇಶ್ವರ್ ಅವರ ವಿಚಾರಣೆ ನಡೆಸಿದೆ.