ಚಿಕ್ಕಮಗಳೂರು: ವಿಕ್ರಂ ಗೌಡ ಹತ್ಯೆ ಬಳಿಕ ನಾವಿಕನಿಲ್ಲದ ದೋಣಿ ಎನ್ನುವ ಸ್ಥಿತಿಗೆ ಬಂದ ನಕ್ಸಲ್ ಚಟುವಟಿಕೆ!

First Published | Nov 20, 2024, 9:05 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.20): ಕುಖ್ಯಾತ ನಕ್ಸಲ್ ಮುಖಂಡ ವಿಕ್ರಂ ಗೌಡ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿರುವ ಬೆನ್ನಲ್ಲೇ ಅವನಿಂದ ತೆರವಾಗಿರುವ ರಾಜ್ಯದ ನಕ್ಸಲರ ಕಬಿನಿ ದಳಂ-2 ರ ನೇತೃತ್ವವನ್ನು ಯಾರು ವಹಿಸುತ್ತಾರೆ ಎನ್ನುವ ಚರ್ಚೆಗಳು ಆರಂಭವಾಗಿದೆ. ಸಧ್ಯ ದುರ್ಬಲ ಸ್ಥಿತಿ ಬೆರಳೆಣಿಕೆ ಸದಸ್ಯರನ್ನು ಹೊಂದಿರುವ ನಕ್ಸಲ್ ತಂಡದ ನಾಯಕತ್ವವನ್ನು ಮುಂಡಗಾರು ಲತಾ ವಹಿಸಿಕೊಳ್ಳಬಹುದು. 

ರಾಜ್ಯದಲ್ಲಿ ನಕ್ಸಲ್ ಚಳುವಳಿಗೆ ಚಾಲನೆ ನೀಡಿದ ಸಾಕೇತ್ ರಾಜನ್ ಹತನಾದ ನಂತರ ಆತನ ಸ್ಥಾನವನ್ನು ತುಂಬಿದ್ದ ಬಿ.ಜಿ.ಕೃಷ್ಣಮೂರ್ತಿ ಈಗ ಈಗ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾನೆ. ಈ ಕಾರಣಕ್ಕೆ ನಾಯಕತ್ವದ ಜವಾಬ್ದಾರಿ ವಿಕ್ರಂಗೌಡನ ಹೆಗಲೇರಿತ್ತು. ಇದೀಗ ಆತನೂ ಸಾವಪ್ಪಿರುವುದರಿಂದ ಸಂಘಟನೆಯ ಹಿರಿತನದ ಆಧಾರದಲ್ಲಿ ಮುಂಡಗಾರು ಲತಾ ನೇತೃತ್ವ ವಹಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ರಾಜ್ಯದಲ್ಲಿ ನಕ್ಸಲ್ ಚಳುವಳಿಗೆ ಚಾಲನೆ ನೀಡಿದ ಸಾಕೇತ್ ರಾಜನ್ ಹತನಾದ ನಂತರ ಆತನ ಸ್ಥಾನವನ್ನು ತುಂಬಿದ್ದ ಬಿ.ಜಿ.ಕೃಷ್ಣಮೂರ್ತಿ ಈಗ ಈಗ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾನೆ. ಈ ಕಾರಣಕ್ಕೆ ನಾಯಕತ್ವದ ಜವಾಬ್ದಾರಿ ವಿಕ್ರಂಗೌಡನ ಹೆಗಲೇರಿತ್ತು. ಇದೀಗ ಆತನೂ ಸಾವಪ್ಪಿರುವುದರಿಂದ ಸಂಘಟನೆಯ ಹಿರಿತನದ ಆಧಾರದಲ್ಲಿ ಮುಂಡಗಾರು ಲತಾ ನೇತೃತ್ವ ವಹಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

Tap to resize

ವಿಕ್ರಂಗೌಡ ಹತ್ಯೆ ಬಗ್ಗೆ ನಕ್ಸಲ್ ಶರಣಾಗತಿ ಸಮಿತಿ ಸದಸ್ಯರೂ ಸೇರಿ ಪ್ರಗತಿಪರರೆನಿಸಿಕೊಂಡ ಬಹುತೇಕರು ಬಹಿರಂಗವಾಗಿ ಅನುಕಂಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಳಿದುಳಿದಿರುವ ಬೆರಳೆಣಿಕೆ ನಕ್ಸಲೀಯರನ್ನು ಶರಣಾಗತಿಗೆ ಅವರೇ ಮನವೊಲಿಸುವ ಪ್ರಯತ್ನ ಮಾಡುವ ಸಾಧ್ಯತೆಯೂ ಇದೆ.

ಇದರ ನಡುವೆ ವಿಕ್ರಂಗೌಡ ಹತನಾದ ಹಿನ್ನೆಲೆಯಲ್ಲಿ ಆತನೊಂದಿಗಿದ್ದ ಇತರೆ ನಕ್ಸಲೀಯರು ಚಿಕ್ಕಮಗಳೂರು ಜಿಲ್ಲೆಯ ಅರಣ್ಯದಲ್ಲಿ ಅಡಗಿಕೊಂಡಿರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹದಳದ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಉಡುಪಿ ಜಿಲ್ಲೆಯ ಹೆಬ್ರಿ ಭಾಗ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಭಾಗ ಹಾಗೂ ಶಿವಮೊಗ್ಗ ಜಿಲ್ಲೆಯ ಆಗುಂಬೆ ಭಾಗದಲ್ಲಿ ಕೂಂಬಿಂಗ್ ಚುರುಕುಗೊಂಡಿದೆ. ಅಂತರ್ ಜಿಲ್ಲಾ ಗಡಿ ಪ್ರದೇಶದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿಕೊಂಡು ಪ್ರತಿ ವಾಹನಗಳನ್ನು ತಪಾಸಣೆಗೊಳಪಡಿಸಲಾಗಿದೆ.ಇದಲ್ಲದೆ ನಕ್ಸಲ್ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆ. ಇನ್ನೊಂದೆಡೆ ಪೊಲೀಸ್ ಇಲಾಖೆಯೂ ಹಳ್ಳಿಹಳ್ಳಿಗಳಲ್ಲಿಯೂ ತಪಾಸಣೆ ಆರಂಭಿಸಿದೆ. ನಕ್ಸಲ್ ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಮೊಬೈಲ್ ಸ್ಕ್ವಾಡ್‌ಗಳ ಮೂಲಕ ತೀವ್ರ ಕಣ್ಗಾವಲಿಟ್ಟಿದೆ.

ಸಾಕೇತ್ ರಾಜನ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ ಸಂದರ್ಭದಲ್ಲಿ ಪೊಲೀಸ್ ಮಾಹಿತಿದಾರರಾಗಿದ್ದರೆಂಬ ಕಾರಣಕ್ಕೆ ಮೆಣಸಿನ ಹಾಡ್ಯದ ಶೇಷಪ್ಪಗೌಡ ಅವರನ್ನು ಇದೇ ವಿಕ್ರಂಗೌಡ ಬರ್ಬರವಾಗಿ ಹತ್ಯೆ ಮಾಡಿದ್ದ. ಇದೀಗ ಮುಂಡಗಾರು ಲತಾ ನೇತೃತ್ವದ ತಂಡ ವಿಕ್ರಂ ಗೌಡನ ಹತ್ಯೆ ಸೇಡನ್ನು ಅದೇ ರೀತಿ ತೀರಿಸಿಕೊಳ್ಳುವ ಪ್ರಯತ್ನ ನಡೆಸಬಹುದು ಎನ್ನುವ ಮಾತುಗಳು ಪಶ್ಚಿಮಘಟ್ಟದ ಹಾಡಿಗಳಲ್ಲಿ ಕೇಳಿಬರುತ್ತಿದೆ. ಈ ಎಲ್ಲಾ ಕಾರಣಕ್ಕೆ ಬಿಗಿ ಕಾರ್ಯಾಚರಣೆ ನಡೆಯುತ್ತಿದೆ. 

Latest Videos

click me!